ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಹುದ್ದೆಗಳ ಭರ್ತಿ KSFC recruitment-2021 IA

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಪ್ರಸ್ತುತ ಅಗತ್ಯ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯು ಕಲ್ಯಾಣ ಕರ್ನಾಟಕ ಪ್ರದೇಶದ 05 ಉಪ ವ್ಯವಸ್ಥಾಪಕರ (ಕಾನೂನು) ಹುದ್ದೆಗಳನ್ನು ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಯ ಹೆಸರು : ಉಪ ವ್ಯವಸ್ಥಾಪಕರು
ಒಟ್ಟು ಹುದ್ದೆಗಳ ಸಂಖ್ಯೆ : 05
ವೇತನ ಶ್ರೇಣಿ: ರೂ.52,650-97100 ವರೆಗೆ.

ವಿದ್ಯಾರ್ಹತೆ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಾನೂನು ಪದವಿ ಮುಗಿಸಿರಬೇಕು,

ವಯೋಮಿತಿ
ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ಹಾಗೂ ಎಸ್ಸಿ ಎಸ್ಟಿ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು ನಿಗದಿ ಪಡಿಸಲಾಗದೆ.

10th Pass Jobs 2021
12th Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
Degree Pass Jobs 2021

ಅರ್ಜಿ ಶುಲ್ಕ
ಸಾಮಾನ್ಯ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ 500/-
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ರೂ 300/-

ಅರ್ಜಿ ಸಲ್ಲಿಕೆ ಹೇಗೆ?
ನಿಗದಿತ ಅರ್ಜಿ ನಮೂನೆಗಳನ್ನು ಸಂಸ್ಥೆಯ ವೆಬ್‌ಸೈಟ್‌ https://ksfc.karnataka.gov.in ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಭರ್ತಿ ಮಾಡಿದ ಅರ್ಜಿಗಳನ್ನು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಹಾಗೂ ದೃಢೀಕರಿಸಿದ ಪ್ರಮಾಣ ಪತ್ರಗಳನ್ನು ಒಳಗೊಡಂತೆ ಪೂರ್ಣ ವಿವರಗಳೊಂದಿಗೆ ನಮೂದಿಸಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವರ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ದಿನಾಂಕ 26-07-2021 ರ ಸಂಜೆ 05-00 ಗಂಟೆಯೊಳಗೆ ಸಲ್ಲಿಸತಕ್ಕದ್ದು.

ಅಪೂರ್ಣ ಹಾಗೂ ನಿಗದಿತ ಸಮಯದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26-07-2021

Website – ವೆಬ್ಸೈಟ್ 
Notification – ಅಧಿಸೂಚನೆ 
Application – ಅರ್ಜಿ ನಮೂನೆ 
error: Content is protected !!