ಹೊಸ ನೇಮಕಾತಿ ಅಧಿಸೂಚನೆ 2023
KSHD Recruitment 2023 : ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆ ಪ್ರಕಟವಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಮ್ಮ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ದಿನನಿತ್ಯ ಹೊಸ ಉದ್ಯೋಗ ಮಾಹಿತಿಗಾಗಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ – KSHD |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 4319 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ ನಲ್ಲಿ |
ನಮ್ಮ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ದಿನನಿತ್ಯ ಹೊಸ ಉದ್ಯೋಗ ಮಾಹಿತಿಗಾಗಿ
ಹುದ್ದೆಗಳ ವಿವರ :
• ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : 256 ಹುದ್ದೆಗಳು
ಮಾಸಿಕ ವೇತನ: ರೂ. 52,650 – ರೂ. 97,100
ಶೈಕ್ಷಣಿಕ ವಿದ್ಯಾರ್ಹತೆ: ತೋಟಗಾರಿಕೆ ವಿಷಯದಲ್ಲಿ ಬಿ.ಎಸ್ಸಿ ಪದವಿ ಜೊತೆಗೆ ತೋಟಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
• ಸಹಾಯಕ ತೋಟಗಾರಿಕೆ ನಿರ್ದೇಶಕರು : 475 ಹುದ್ದೆಗಳು
ಮಾಸಿಕ ವೇತನ : ರೂ. 43,100 – ರೂ. 83,900
ಶೈಕ್ಷಣಿಕ ವಿದ್ಯಾರ್ಹತೆ:ತೋಟಗಾರಿಕೆ ವಿಷಯದಲ್ಲಿ ಬಿ.ಎಸ್ಸಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
• ಸಹಾಯಕ ತೋಟಗಾರಿಕೆ ಅಧಿಕಾರಿ : 1136 ಹುದ್ದೆಗಳು
ಮಾಸಿಕ ವೇತನ : ರೂ. 40,900 – ರೂ. 78,200
ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ತೋಟಗಾರಿಕೆ ವಿಷಯದಲ್ಲಿ ಬಿ.ಎಸ್ಸಿ ಪದವಿ ಅರ್ಹತೆ ಹೊಂದಿರಬೇಕು.
• ತೋಟಗಾರಿಕೆ ಸಹಾಯಕ : 926 ಹುದ್ದೆಗಳು
ಮಾಸಿಕ ವೇತನ : ರೂ. 23,500 – ರೂ. 47,650
ಶೈಕ್ಷಣಿಕ ವಿದ್ಯಾರ್ಹತೆ: ತೋಟಗಾರಿಕೆ ವಿಷಯದಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು.
• ಪ್ರಥಮ ದರ್ಜೆ ಸಹಾಯಕರು : 311 ಹುದ್ದೆಗಳು
ಮಾಸಿಕ ವೇತನ : ರೂ. 27,650 – ರೂ. 52,650
ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
• ಶೀಘ್ರಲಿಪಿಗಾರರು : 11 ಹುದ್ದೆಗಳು
ಮಾಸಿಕ ವೇತನ : ರೂ. 27,650 – ರೂ. 52,650
ಶೈಕ್ಷಣಿಕ ವಿದ್ಯಾರ್ಹತೆ: ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆ.ಎಸ್.ಇ.ಇ.ಬಿ )ಯಿಂದ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಮತ್ತು ಹಿರಿಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕನ್ನಡ ಶೀಘ್ರಲಿಪಿಯಲ್ಲಿ ಐಚ್ಛಿಕದೊಂದಿಗೆ ಸೆಕ್ರೆಟೇರಿಯಲ್ ಪ್ರಾಕ್ಟಿಸ್ ಡಿಪ್ಲೋಮಾವನ್ನು ಪಡೆದಿರತಕ್ಕದ್ದು.
• ದ್ವಿತೀಯ ದರ್ಜೆ ಸಹಾಯಕರು : 271 ಹುದ್ದೆಗಳು
ಮಾಸಿಕ ವೇತನ : ರೂ. 21,400 – ರೂ. 42,000
ಶೈಕ್ಷಣಿಕ ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
• ದತ್ತಾಂಶ ನಮೂದಕ ಸಹಾಯಕರು : 58 ಹುದ್ದೆಗಳು
ಮಾಸಿಕ ವೇತನ : ರೂ. 21,400 – ರೂ. 42,000
ಶೈಕ್ಷಣಿಕ ವಿದ್ಯಾರ್ಹತೆ: ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆ.ಎಸ್.ಇ.ಇ.ಬಿ )ಯಿಂದ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕಮರ್ಷಿಯಲ್ ಪ್ಯಾಕ್ಟಿಸ್ ಮತ್ತು ಕನ್ನಡ ಹಿರಿಯ ಬೆರಳಚ್ಚು ನಲ್ಲಿ ಡಿಪ್ಲೋಮಾವನ್ನು ಪಡೆದಿರತಕ್ಕದ್ದು.
• ವಾಹನ ಚಾಲಕರು : 87 ಹುದ್ದೆಗಳು
ಮಾಸಿಕ ವೇತನ : ರೂ. 21,400 – ರೂ. 42,000
ಶೈಕ್ಷಣಿಕ ವಿದ್ಯಾರ್ಹತೆ: ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
• ಲ್ಯಾಬ್ ಅಸಿಸ್ಟೆಂಟ್ : 13 ಹುದ್ದೆಗಳು
ಮಾಸಿಕ ವೇತನ : ರೂ. 18,600 – ರೂ. 32,600
ಶೈಕ್ಷಣಿಕ ವಿದ್ಯಾರ್ಹತೆ: ಲ್ಯಾಬ್ ನಿರ್ವಹಣೆಯಲ್ಲಿ ಡಿಪ್ಲೊಮಾ ಜೊತೆಗೆ ಪಿಯುಸಿ (ವಿಜ್ಞಾನ) ಉತ್ತೀರ್ಣರಾಗಿರಬೇಕು ಮತ್ತು ಯಾವುದೇ NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.
• ಜೇನು ಕೃಷಿ ಸಹಾಯಕರು : 20 ಹುದ್ದೆಗಳು
ಮಾಸಿಕ ವೇತನ : ರೂ. 18,600 – ರೂ. 32,600
ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿಯಲ್ಲಿ ತೇರ್ಗಡೆ ಹೊಂದಿರತಕ್ಕದ್ದು ಮತ್ತು ಭಾಗಮಂಡಲ ಜೇನು ಸಾಕಣೆ ತರಬೇತಿ ಕೇಂದ್ರ ಕೊಡಗು ಜಿಲ್ಲೆಯಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು. ಅಥವಾ ಕರ್ನಾಟಕದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ತೋಟಗಾರಿಕೆ ಇಲಾಖೆಯು ನಡೆಸುವ ಜೇನುಸಾಕಣೆ ವಿಷಯದಲ್ಲಿ ನಡೆಸುವ ಕನಿಷ್ಠ ಮೂರು ತಿಂಗಳ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.
• ಜವಾನ : 98 ಹುದ್ದೆಗಳು
ಮಾಸಿಕ ವೇತನ : ರೂ. 17,000 – ರೂ. 28,950
ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
• ತೋಟಗಾರ : 1774 ಹುದ್ದೆಗಳು
ಮಾಸಿಕ ವೇತನ : ರೂ. 17,000 – ರೂ. 28,950
ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರತಕ್ಕದ್ದು ಮತ್ತು ಕರ್ನಾಟಕ ತೋಟಗಾರಿಕೆ ಇಲಾಖೆಯಿಂದ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆದಿರುವ ಪ್ರಮಾಣ ಪತ್ರ ಹೊಂದಿರತಕ್ಕದ್ದು. ಅಥವಾ ಎಸ್.ಎಸ್.ಎಲ್.ಸಿ ಮತ್ತು ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ICAR) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ (ತೋಟಗಾರಿಕೆ) ಹೊಂದಿರತಕ್ಕದ್ದು.
• ಕಾವಲುಗಾರ : 29 ಹುದ್ದೆಗಳು
ಮಾಸಿಕ ವೇತನ : ರೂ. 17,000 – ರೂ. 28,950
ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ:
ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುವುದು.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ಶೀಘ್ರದಲ್ಲೇ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಶೀಘ್ರದಲ್ಲೇ |
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಯೌಟ್ಯೂಬ್ ಚಾನೆಲ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |