ಕರ್ನಾಟಕ ಸರ್ಕಾರದ ಅಧೀನದಲ್ಲಿ ಬರುವ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಅಗತ್ಯವಿರುವ ಹುದ್ದೆಗಳನ್ನು 2 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ :
- ಸಹಾಯಕ ವ್ಯವಸ್ಥಾಪಕರು ಉತ್ಪಾದನೆ : 2 ಹುದ್ದೆಗಳು
- ಮೆಕ್ಯಾನಿಕಲ್ ಇಂಜಿನಿಯರ್ : 2 ಹುದ್ದೆಗಳು
- ಸಿವಿಲ್ ಇಂಜಿನಿಯರ್ : 2 ಹುದ್ದೆಗಳು
- ಮೆಕ್ಯಾನಿಕ್ : 2 ಹುದ್ದೆಗಳು
- ಮೆಕ್ಯಾನಿಕ್ : 2 ಹುದ್ದೆಗಳು
- ಬ್ಲಾಸ್ಟರ್ : 1 ಹುದ್ದೆಗಳು
- ಜಿಯೋಲಾಜಿಸ್ಟ್ ಶಿಶಿಕ್ಷು (Trainee) : 5 ಹುದ್ದೆಗಳು
ಒಟ್ಟು ಹುದ್ದೆಗಳು: 14
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಂಜಿನಿಯರಿಂಗ್ ಪದವಿ (ವಿವಿಧ ವಿಭಾಗಗಳಲ್ಲಿ), ಸ್ನಾತಕೋತ್ತರ ಪದವಿ (ಸಂಬಂದಿಸಿದ ವಿಭಾಗ) ಹಾಗೂ ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು ಈ ಕುರಿತ ಮಾಹಿತಿಗೆ ಅಧಿಸೂಚನೆ ಗಮನಿಸಿ.
ವಯೋಮಿತಿ:
ಈ ಹುದ್ದೆಗಳ ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ 23 ವರ್ಷಗಳ ವಯೋಮಿತಿಯನ್ನು ಹೊಂದಿರತಕ್ಕದ್ದು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ವೇತನಶ್ರೇಣಿ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು 20000 ದಿಂದ ಆರಂಭಗೊಂಡು 36000 ವರೆಗೆ ಮಾಸಿಕ ವೇತನವನ್ನು ಪಡೆಯಲಿದ್ದಾರೆ.
ಈ ಹುದ್ದೆಗಳಿಗೆ ದಿನಾಂಕ 11, 12 ಹಾಗೂ 13 ಜನೆವರಿ 2022 ರಂದು ನೇರ ಸಂದರ್ಶನ ಏರ್ಪಡಿಸಲಾಗಿದ್ದು ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.
ನೇರ ಸಂದರ್ಶನ ನಡೆಯುವ ಸ್ಥಳ :
ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್, ಐದನೇ ಮಹಡಿ, ಎ ಬ್ಲಾಕ್, ಟಿ ಟಿ ಎಂ ಸಿ ಬ್ಲಾಕ್, ಬಿಎಂಟಿಸಿ ಕಟ್ಟಡ, ಕೆ ಎಚ್ ರೋಡ್, ಶಾಂತಿನಗರ, ಬೆಂಗಳೂರು-560027.
Website |
Download Notification PDF |