ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

LPG ಗ್ರಾಹಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್: Karnataka Latest News

ಎಲ್‌ಪಿಜಿ ಸಿಲಿಂಡರ್ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರಿಗೆ ತಲೆನೋವಾಗಿದೆ. ಕಳೆದ ಏಳು ವರ್ಷಗಳಲ್ಲಿ ಬೆಲೆಗಳು ಎರಡು ಪಟ್ಟು ಹೆಚ್ಚಾಗಿದೆ. ಈ ಮಧ್ಯೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸ್ವಲ್ಪ ನೆಮ್ಮದಿ ಸುದ್ದಿ ಸಿಕ್ಕಿದೆ. ಸಿಲಿಂಡರ್ ಮೇಲೆ ಸಬ್ಸಿಡಿ ಮತ್ತೆ ನೀಡಲಾಗುತ್ತಿದೆ.

ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಲಾಗಿದೆ. ಮಾಹಿತಿಯ ಪ್ರಕಾರ, ಎಲ್‌.ಪಿ.ಜಿ ಸಿಲಿಂಡರ್ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ 79.26 ರೂಪಾಯಿಗಳನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ.

 

 

ಕೆಲವು ಗ್ರಾಹಕರು 158.52 ರೂಪಾಯಿ ಅಥವಾ 237.78 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಕೆಲ ಗ್ರಾಹಕರ ಖಾತೆಗೆ ಸಬ್ಸಿಡಿ ಬಂದಿರಲಿಲ್ಲ. ಇದು ಗ್ರಾಹಕರನ್ನು ಗೊಂದಲಕ್ಕೀಡು ಮಾಡಿದೆ. ಸಬ್ಸಿಡಿ ಬರ್ತಿದೆಯೇ ಎಂಬುದು ಗ್ರಾಹಕರಿಗೆ ತಿಳಿಯುತ್ತಿಲ್ಲ. ಎಲ್ಪಿಜಿ ಸಿಲಿಂಡರ್ ಪಡೆದಿದ್ದು, ಸಬ್ಸಿಡಿ ಬರ್ತಿದೆಯೇ ಎಂಬುದನ್ನು ನೀವು ಸುಲಭವಾಗಿ ಪತ್ತೆ ಮಾಡಬಹುದು. ಇದಕ್ಕೆ ಎರಡು ವಿಧಾನವಿದೆ.

https://mylpg.in/ ಗೆ ಹೋಗಿ, ಅಲ್ಲಿ ಎಲ್ಪಿಜಿ ಸಬ್ಸಿಡಿ ಆನ್‌ಲೈನ್ ಕ್ಲಿಕ್ ಮಾಡಬೇಕು. ಮೂರು ಎಲ್ಪಿಜಿ ಸಿಲಿಂಡರ್ ಕಂಪನಿಗಳ ಟ್ಯಾಬ್‌ ಕಾಣುತ್ತದೆ. ನಿಮ್ಮ ಕಂಪನಿ ಹೆಸರಿನ ಮೇಲೆ ಕ್ಲಿಕ್ ಮಾಡಬೇಕು ಇಂಡೇನ್ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ, ಇಂಡೇನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಂಪ್ಲೇಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಹೊಸ ಪೇಜ್ ತೆರೆಯುತ್ತದೆ. ಅಲ್ಲಿ ಬ್ಯಾಂಕ್ ವಿವರ ಸಿಗುತ್ತದೆ. ಅಲ್ಲಿಯೇ ಖಾತೆಗೆ ಸಬ್ಸಿಡಿ ಹಣ ಬರುತ್ತಿದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ.

 

close button