ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ಬೆಂಗಳೂರು ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಉದ್ಯೋಗ ಸುದ್ದಿ 

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ನಿಯಮಿತ ಬೆಂಗಳೂರು ಇಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 45 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಆಹ್ವಾನಿಸಲಾಗಿದೆ.

ಅರ್ಜಿ ಪ್ರಕ್ರಿಯೆಯು ದಿನಾಂಕ 05-03-2021 ರಿಂದ ಆರಂಭಗೊಂಡು ದಿನಾಂಕ 05-04-2021 ರಂದು ಕೊನೆಗೊಳ್ಳಲಿದೆ.

* ಹುದ್ದೆಗಳ ವಿವರ:

– ಲೆಕ್ಕಿಗರು – 05

– ಪ್ರಥಮ ದರ್ಜೆ ಗುಮಾಸ್ತರು – 10

– ವಿಕ್ರಯ ಸಹಾಯಕರು – 10

– ಬೆರಳಚ್ಚುಗಾರರು – 08

– ಜವಾನರು – 10- ಕಿರಿಯ ಫಾರ್ಮಸಿಸ್ಟ್ – 02 (ಬ್ಯಾಕ್ ಲಾಗ್ ಹುದ್ದೆ)

– ಒಟ್ಟು ಹುದ್ದೆಗಳು 45

ಉದ್ಯೋಗ ಸ್ಥಳ: ಕರ್ನಾಟಕ

ವಿದ್ಯಾರ್ಹತೆ:
ಲೆಕ್ಕಿಗರು ಹುದ್ದೆಗೆ: ಭಾರತೀಯ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಯಾವುದೇ ವಿಶ್ವವಿದ್ಯಾಲಯದಿಂದ ಬಿಕಾಂ ಸಹಕಾರ ನಿರ್ವಹಣೆ ಪದವಿಧರರಾಗಿರಬೇಕು.
ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ಸ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸಿನ ತೇರ್ಗಡೆ ಪತ್ರವನ್ನು ಹೊಂದಿರಬೇಕು.


ಪ್ರಥಮ ದರ್ಜೆ ಗುಮಾಸ್ತರು ಹುದ್ದೆಗೆ: ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ಸ್ ನಲ್ಲಿ ಜ್ಞಾನ ಹೊಂದಿರಬೇಕು.

ವಿಕ್ರಯ ಸಹಾಯಕರು ಹುದ್ದೆಗೆ: ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.

ಬೆರಳಚ್ಚುಗಾರರು ಹುದ್ದೆಗೆ: ದ್ವಿತೀಯ ಪಿಯುಸಿಯಲ್ಲಿ ಅಥವಾ 3ವರ್ಷದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಉತ್ತೀರ್ಣರಾಗಿರಬೇಕು ಸೀನಿಯರ್ ಕನ್ನಡ ಮತ್ತು ಇಂಗ್ಲಿಷ್ ಟೈಪ್ ರೈಟಿಂಗ್ ನಲ್ಲಿ ಉತ್ತೀರ್ಣರಾಗಿದ್ದು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ ಜ್ಞಾನವಿರಬೇಕು.

ಜವಾನರು ಹುದ್ದೆಗೆ: ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು 1 ಭಾಷೆಯಾಗಿ ಓದಿರಬೇಕು.

ಕಿರಿಯ ಫಾರ್ಮಸಿಸ್ಟ್ ಹುದ್ದೆಗೆ: ಡಿಪ್ಲೊಮಾ ಇನ್ ಫಾರ್ಮಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಕಂಪ್ಯೂಟರ್ ಆಪರೇ ಷನ್ ಮತ್ತು ಅಪ್ಲಿಕೇಷನ್ಸ್ ನಲ್ಲಿ ಜ್ಞಾನವಿರಬೇಕು. ಮತ್ತು ಎಲ್ಲ ಹುದ್ದೆಗಳಿಗೆ ಕನ್ನಡವನ್ನು ಓದುವ ಸಾಮರ್ಥ್ಯ ದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು.

ವಯೋಮಿತಿ:
ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಗರಿಷ್ಟ 35 ವರ್ಷ ಮೀರಿರಬಾರದು.
ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ ಮೀರಿರಬಾರದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ಮೀರಿರಬಾರದು.

 

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ರೂ 500 + ಅಂಚೆಕಚೇರಿ ಶುಲ್ಕ ರೂ 30 /- ಪ್ರತ್ಯೇಕ
ಇತರೆ ವರ್ಗದ ಅಭ್ಯರ್ಥಿಗಳಿಗೆ : ರೂ 1000 + ಅಂಚೆಕಚೇರಿ ಶುಲ್ಕ ರೂ 30 /- ಪ್ರತ್ಯೇಕ

-:- ಪ್ರಮುಖ ದಿನಾಂಕಗಳು -:-

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 05-03-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-04-2021
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 06-04-2021

ವೆಬ್ಸೈಟ್ – Website
ನೋಟಿಫಿಕೇಶನ್ – Notification
ಅರ್ಜಿ ಲಿಂಕ್ – Apply Online

 

error: Content is protected !!