ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಬೆಂಗಳೂರು ಪ್ರಾಂತ್ಯ ಮತ್ತು ಮೈಸೂರು ಪ್ರಾಂತ್ಯದ ಅರ್ಜಿಗಳನ್ನು ನಿರ್ವಹಿಸಲು ಒಟ್ಟು ಎರಡು “ಕಾನೂನು ಸಲಹೆಗಾರರ” ಹುದ್ದೆಗಳ ಸೇವೆಯನ್ನು ಪಡೆಯಲು ಉದ್ದೇಶಿಸಲಾಗಿದ್ದು,
ಕಾನೂನು ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ (ಕೆ.ಎ.ಟಿ) / ಉಚ್ಛನ್ಯಾಯಾಲಯ / ಸಹಕಾರಿ ನ್ಯಾಯಾಲಯ /ಕರ್ನಾಟಕ ಮಾಹಿತಿ ಹಕ್ಕು ಆಯೋಗ / ಗ್ರಾಹಕರ ರಕ್ಷಣಾ ವೇದಿಕೆ ಮತ್ತು ಇತರ ಶಾಸನದತ್ತ ಪ್ರಾಧಿಕಾರಗಳಲ್ಲಿ / ನ್ಯಾಯಾಲಯಗಳಲ್ಲಿ ಅರ್ಜಿಯನ್ನು ನಿರ್ವಹಿಸಿರುವ ಹತ್ತು(10) ವರ್ಷಗಳ ಅನುಭವ ಹೊಂದಿರುವ ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ದಿನಾಂಕ 15 ಮಾರ್ಚ್ 2021 ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು
ಒಟ್ಟು ಹುದ್ದೆಗಳು: 02
ಉದ್ಯೋಗ ಸ್ಥಳ: ಮಂಡ್ಯ
ಅರ್ಜಿ ಸಲ್ಲಿಸಬೇಕಾದ ವಿಳಾಸ :
“ವ್ಯವಸ್ಥಾಪಕ ನಿರ್ದೇಶಕರು, ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಮಂಡ್ಯ”
ಲಕೋಟೆಯ ಮೇಲೆ ಕಾನೂನು ಸಲಹೆಗಾರರ ಸೇವೆಗಾಗಿ ಅರ್ಜಿ ಎಂದು ನಮೂದಿಸಿ ಮೇಲ್ಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ಫೆಬ್ರುವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಮಾರ್ಚ್ 2021