ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಪಿಯುಸಿ ಪಾಸ್ ಆಗಿದ್ರೆ ಸಾಕು, ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳು

 

 

ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದ್ದು,ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಇನ್ನಿತರ ಮಾಹಿತಿ ಕೆಳಗೆ ಸೂಚಿಸಲಾಗಿದೆ.

ಸಂಸ್ಥೆ: ಭಾರತೀಯ ನೌಕಾಪಡೆ
ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ
ಉದ್ಯೋಗ ಸ್ಥಳ: ಭಾರತದ ಯಾವುದೇ ಜಾಗ
ಸಂಬಳ ಮಾಸಿಕ: ₹ 14,600-69,100
ಅರ್ಜಿ ಸಲ್ಲಿಸುವ ಬಗೆ: ಆನ್​ಲೈನ್​
ಒಟ್ಟು ಹುದ್ದೆಗಳು 2500

ಹುದ್ದೆಯ ಹೆಸರು: ಆರ್ಟಿಫಿಕರ್ ಅಪ್ರೆಂಟಿಸ್​(Artificer Apprentice- AA), ಹಾಗೂ ಸೀನಿಯರ್ ಸೆಕೆಂಡರಿ ನೇಮಕಾತಿ(Senior Secondary Recruit- SSR)

 

 

 

 

ಹುದ್ದೆಯ ಮಾಹಿತಿ:
ಆರ್ಟಿಫಿಕರ್ ಅಪ್ರೆಂಟಿಸ್​ಗೆ ನಾವಿಕರು(Artificer Apprentice-AA)-500 ಹುದ್ದೆಗಳು
ಸೀನಿಯರ್ ಸೆಕೆಂಡರಿ ನೇಮಕಾತಿ(Senior Secondary Recruits-SSR)-2000 ಹುದ್ದೆಗಳು
ಒಟ್ಟು 2500 ಹುದ್ದೆಗಳು

ವಿದ್ಯಾರ್ಹತೆ
AA- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಶೇ.60 ರಷ್ಟು ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ & ಭೌತಶಾಸ್ತ್ರದ ಜೊತೆಗೆ ಕೆಮಿಸ್ಟ್ರಿ ಬಯಾಲಜಿ/ಕಂಪ್ಯೂಟರ್​ ಸೈನ್ಸ್​- ಈ 2 ವಿಷಯಗಳಲ್ಲಿ ಒಂದನ್ನು ಕಡ್ಡಾಯವಾಗಿ ಓದಿರಬೇಕು.

SSR- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಶೇ.60 ರಷ್ಟು ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ & ಭೌತಶಾಸ್ತ್ರದ ಜೊತೆಗೆ ಕೆಮಿಸ್ಟ್ರಿ ಬಯಾಲಜಿ/ಕಂಪ್ಯೂಟರ್​ ಸೈನ್ಸ್​- ಈ 2 ವಿಷಯಗಳಲ್ಲಿ ಒಂದನ್ನು ಕಡ್ಡಾಯವಾಗಿ ಓದಿರಬೇಕು.

ವಯೋಮಿತಿ:
ಅಭ್ಯರ್ಥಿಗಳು 2002 ಫೆಬ್ರವರಿ 1ರಿಂದ 2005 ಜನವರಿ 31ರೊಳಗೆ ಜನಿಸಿರಬೇಕು

ಸಂಬಳ:
AA ಮತ್ತು SSR ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯಲ್ಲಿ ಈ ಪ್ರಮಾಣದ ಸಂಬಳವನ್ನು ಪಡೆಯುತ್ತಾರೆ.

ಪ್ರಾಥಮಿಕ ತರಬೇತಿ ಅವಧಿಯಲ್ಲಿ ಸ್ಟೇಫಂಡ್ ಆಗಿ ತಿಂಗಳಿಗೆ 14,600 ರೂ. ಪಡೆಯುತ್ತಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಡಿಫೆನ್ಸ್​ ಪೇ ಮ್ಯಾಟ್ರಿಕ್ಸ್​ನ 3ನೇ ಲೆವೆಲ್​ಗೆ ಆಯ್ಕೆ ಮಾಡಲಾಗುತ್ತದೆ. ಆಗ ಅವರ ಸಂಬಳ ₹ 21,700-69,100 ರೂ.ವರೆಗೆ ಇರುತ್ತದೆ. ಇದರೊಂದಿಗೆ MSP ₹5,200 ನೀಡಲಾಗುತ್ತದೆ. ಹಾಗೂ DA ಜೊತೆಗೆ ‘X’ ಗ್ರೂಪ್​ ಪೇ(ಆರ್ಟಿಫಿಕರ್ ಅಪ್ರೆಂಟಿಸ್​​ಗೆ ಮಾತ್ರ) ₹3600 ರೂ. ಅನ್ನು ಪ್ರತೀ ತಿಂಗಳು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ:16/101/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/10/2021

Website
Notification
Apply Online

 

 

 

close button