NSFDC Recruitment 2022: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧೀನದ ಒಂದು ಸಂಸ್ಥೆಯಾಗಿರುವ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ಮಂಡಳಿ (ಎನ್‌ಎಸ್ಎಫ್‌ಡಿಸಿ) ಇದೀಗ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ |
ಹುದ್ದೆಗಳ ಹೆಸರು: | ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳು |
ಒಟ್ಟು ಹುದ್ದೆಗಳು | 14 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ | ವಯೋಮಿತಿ |
ಜೂನಿಯರ್ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ) | 04 | 28 ವರ್ಷಗಳು |
ಸೀನಿಯರ್ ಅಸಿಸ್ಟಂಟ್ | 10 | 27 ವರ್ಷಗಳು |
ವಿದ್ಯಾರ್ಹತೆ:
ಜೂನಿಯರ್ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ) : ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಷಯಗಳಲ್ಲಿ ಇಂಜಿನಿಯರಿಂಗ್ ಪಾಸ್. ಜತೆಗೆ ಕನಿಷ್ಠ 3ವರ್ಷ ಕಾರ್ಯಾನುಭವ.
ಸೀನಿಯರ್ ಅಸಿಸ್ಟಂಟ್ : ಕಾಮರ್ಸ್ / ಅರ್ಥಶಾಸ್ತ್ರ / ಸ್ಟ್ಯಾಟಿಸ್ಟಿಕ್ಸ್ / ಕಲಾ / ವಿಜ್ಞಾನ ವಿಭಾಗದಲ್ಲಿ ಪದವಿ. ಕನಿಷ್ಠ ಒಂದು ವರ್ಷ ಕಾರ್ಯಾನುಭವ. ಜತೆಗೆ ಕಂಪ್ಯೂಟರ್ ಅಪ್ಲಿಕೇಶನ್ / ಎಂಎಸ್ ಆಫೀಸ್ ಪ್ಯಾಕೇಜ್ ಎಕ್ಸ್‌ಪೀರಿಯನ್ಸ್.
ವೇತನಶ್ರೇಣಿ:
ಜೂನಿಯರ್ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ) : Rs.26000 – 93000
ಸೀನಿಯರ್ ಅಸಿಸ್ಟಂಟ್: Rs.25000 – 90000
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600.
ಓಬಿಸಿ, EWS ಅಭ್ಯರ್ಥಿಗಳಿಗೆ ರೂ.600.
ಎಸ್‌ಸಿ / ಎಸ್‌ಟಿ / PWD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಆನ್‌ಲೈನ್ ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಎರಡು ಹುದ್ದೆಗಳಿಗೂ ಆಬ್ಜೆಕ್ಟಿವ್ ಮಾದರಿಯ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿರುತ್ತವೆ. ಒಟ್ಟು 200 ಅಂಕಗಳಿಗೆ 200 ಪ್ರಶ್ನೆಗಳನ್ನು ಕೇಳಲಾಗುತ್ತದೆ. 120 ನಿಮಿಷ ಪರೀಕ್ಷೆ ಇರುತ್ತದೆ.
ಜೆನೆರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಜೆನೆರಲ್ ಅವಾರ್‌ನೆಸ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಅರಿವಿನ ಬಗ್ಗೆ, ಪ್ರತಿ ವಿಭಾಗದ ಬಗ್ಗೆ 40 ಅಂಕಗಳಿಗೆ 40 ಪ್ರಶ್ನೆಗಳು ಇರುತ್ತವೆ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 16-07-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 14-08-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |