ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

2200 ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಅಹ್ವಾನ : NVS Recruitment 2022

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅಧಿಸೂಚನೆ 2022

NVS Recruitment 2022: ನವೋದಯ ವಿದ್ಯಾಲಯ ಸಮಿತಿಯು ಗ್ರೂಪ್‌ ಬಿ ಬೋಧಕ ಹುದ್ದೆಗಳನ್ನು ನೇಮಕ ಮಾಡಲು 2022-23ನೇ ಸಾಲಿನ ನೇರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು:ನವೋದಯ ವಿದ್ಯಾಲಯ ಸಮಿತಿ
ಹುದ್ದೆಗಳ ಹೆಸರು:ವಿವಿಧ ಗ್ರೂಪ್ ಬಿ ಹುದ್ದೆಗಳು 
ಒಟ್ಟು ಹುದ್ದೆಗಳು 2200
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ 
ಪ್ರಾಂಶುಪಾಲರು :12
ಪೋಸ್ಟ್‌ ಗ್ರಾಜುಯೇಟ್‌ ಟೀಚರ್ :397
ಟ್ರೈನ್ಡ್‌ ಗ್ರಾಜುಯೇಟ್ ಟೀಚರ್ :683
ಟಿಜಿಟಿ (ತೃತೀಯ ಭಾಷೆ) :343
ಮ್ಯೂಸಿಕ್ ಟೀಚರ್ :33
ಚಿತ್ರಕಲಾ ಶಿಕ್ಷಕರು :43
ದೈಹಿಕ ಶಿಕ್ಷಕರು (ಪುರುಷ):21
ದೈಹಿಕ ಶಿಕ್ಷಕರು (ಮಹಿಳೆ) :31
ಗ್ರಂಥಾಪಾಲಕರು:53
ಎನ್‌ಇ ರೀಜನ್ :584
ಒಟ್ಟು :2200

ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಎಂಎ, ಎಂ.ಇಡಿ / ಬಿಎ, ಬಿ.ಇಡಿ / ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ/ ಬಿಪಿ.ಇಡಿ / ಪದವಿ ಉತ್ತೀರ್ಣ.

ಪ್ರಾಂಶುಪಾಲರು ಹುದ್ದೆಗಳಿಗೆ : ಪೇ ಲೆವೆಲ್ 12 ರಂತೆ ರೂ.78,800- 2,09,200 ವರೆಗೆ.
ಮತ್ತು ಅಭ್ಯರ್ಥಿಗಳಿಗೆ 50 ವರ್ಷ ವಯಸ್ಸು ಮೀರಿರಬಾರದು

ಪೋಸ್ಟ್‌ ಗ್ರಾಜುಯೇಟ್ ಟೀಚರ್ : ಪೇ ಲೆವೆಲ್ 8 ರಂತೆ ರೂ.47,600-1,51,100 ವರೆಗೆ.
ಮತ್ತು ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು

ಟ್ರೈನ್ಡ್‌ ಗ್ರಾಜುಯೇಟ್‌: ಪೇ ಲೆವೆಲ್ 7 ರಂತೆ ರೂ.44,900-1,42,400 ವರೆಗೆ.
ಮತ್ತು ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು.

ಮ್ಯೂಸಿಕ್, ಚಿತ್ರಕಲಾ, ಪಿಇಟಿ, ಲೈಬ್ರೆರಿಯನ್ : ಪೇ ಲೆವೆಲ್ 7 ರಂತೆ ರೂ.44,900 – 1,42,400 ವರೆಗೆ. ಮತ್ತು ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು

ವಯೋಸಡಿಲಿಕೆ:
ಒಬಿಸಿ -3 ವರ್ಷಗಳು
ಎಸ್‌ಸಿ / ಎಸ್‌ಟಿ / ಪ್ರವರ್ಗ-1 – 5 ವರ್ಷಗಳು
ಅಂಗವಿಕಲ ಅಭ್ಯರ್ಥಿಗೆ 10 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಅರ್ಜಿ ಶುಲ್ಕ:
ಪ್ರಾಂಶುಪಾಲರು ಹುದ್ದೆಗೆ ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.2000.
ಪೋಸ್ಟ್‌ ಗ್ರಾಜಯೇಟ್‌ ಟೀಚರ್ ಹುದ್ದೆಗೆ ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.1800.
ಪಿಇಟಿ, ಸಂಗೀತ ಟೀಚರ್, ಲೈಬ್ರೆರಿಯನ್ ಹುದ್ದೆಗೆ ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.1500.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಹುದ್ದೆಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ / ವೈಯಕ್ತಿಕ ಸಂದರ್ಶನ ನಡೆಸಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 02-07-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-07-2022
  
ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
close button