ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದಲ್ಲಿ ಖಾಲಿ ಇರುವ ಒಟ್ಟು 841 ಆಫೀಸ್ ಅಟೆಂಡೆಂಟ್ ಹುದ್ದೆಗಳ ಭರ್ತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದಲ್ಲಿ ಖಾಲಿ ಇರುವ ಒಟ್ಟು 841 ಆಫೀಸ್ ಅಟೆಂಡೆಂಟ್ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯು ದಿನಾಂಕ ಫೆಬ್ರುವರಿ 24 2021 ರಂದು ಪ್ರಾರಂಭಗೊಂಡು, ದಿನಾಂಕ ಮಾರ್ಚ್ 15, 2021 ರಂದು ಮುಕ್ತಾಯಗೊಳ್ಳುತ್ತದೆ.

* ನಗರವಾರು ಖಾಲಿ ಹುದ್ದೆಗಳ ವಿವರ:

* ಅಹಮದಾಬಾದ್- 50 ಹುದ್ದೆಗಳು

* ಬೆಂಗಳೂರು- 28 ಹುದ್ದೆಗಳು

* ಭೋಪಾಲ್- 25 ಹುದ್ದೆಗಳು

* ಭುವನೇಶ್ವರ- 24 ಹುದ್ದೆಗಳು

* ಚಂಡೀಗಡ- 31 ಹುದ್ದೆಗಳು

* ಚೆನ್ನೈ- 71 ಹುದ್ದೆಗಳು

* ಗುವಾಹಟಿ- 38 ಹುದ್ದೆಗಳು

* ಹೈದರಾಬಾದ್- 57 ಹುದ್ದೆಗಳು

* ಜಮ್ಮು- 09 ಹುದ್ದೆಗಳು

* ಜೈಪುರ- 43 ಹುದ್ದೆಗಳು

* ಕಾನ್ಪುರ- 69 ಹುದ್ದೆಗಳು

* ಕೋಲ್ಕತಾ- 35 ಹುದ್ದೆಗಳು

* ಮುಂಬೈ- 202 ಹುದ್ದೆಗಳು

* ನಾಗ್ಪುರ- 55 ಹುದ್ದೆಗಳು

* ನವದೆಹಲಿ- 50 ಹುದ್ದೆಗಳು

* ಪಾಟ್ನಾ- 28 ಹುದ್ದೆಗಳು

* ತಿರುವನಂತಪುರಂ- 26 ಹುದ್ದೆಗಳು

ಒಟ್ಟು ಹುದ್ದೆಗಳು: 841

ಉದ್ಯೋಗ ಸ್ಥಳಗಳು: ಭಾರತದಾದ್ಯಂತ


ವಿದ್ಯಾರ್ಹತೆ:
ಹುದ್ದೆಗೆ SSLC or Metriculation ವಿದ್ಯಾರ್ಹತೆಯನ್ನು ಹೊಂದಿರುವಂತಹ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಿದ್ಯಾರ್ಹತೆಯ ಕುರಿತ ಹೆಚ್ಚಿನ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಬಹುದು.

ಅರ್ಜಿ ಶುಲ್ಕ:
ಹಿಂದುಳಿದ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ – 450/- ರೂ ಗಳು ಮತ್ತು ಪ.ಜಾ. ಮತ್ತು ಪ.ಪಂ ದ, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು- 50 ರೂ ಗಳನ್ನು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ತುಂಬಬೇಕು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ- 25 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ಮೀಸಲಾತಿಗಳಿಗನುಗುಣವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 03 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ-10 ವರ್ಷ ಮತ್ತು ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳಿಗೆ- 05 ವರ್ಷಗಳ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗಿದೆ.

ವೇತನಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 10,940/- ರೂ ಗಳಿಂದ 20,160/- ರೂ ಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಭಾಷಾ ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಸಲು ಪ್ರಾರಂಭ ದಿನಾಂಕ: 24 ಫೆಬ್ರುವರಿ 2021
ಅರ್ಜಿ ಸಲ್ಲಸಲು ಪ್ರಾರಂಭ ದಿನಾಂಕ: 15 ಮಾರ್ಚ್ 2021

ವೆಬ್ಸೈಟ್
ನೋಟಿಫಿಕೇಶನ್ 
ಅರ್ಜಿ ಲಿಂಕ್ 
error: Content is protected !!