ಹತ್ತು ವರ್ಷದ ಹಣ್ಣು ಮಕ್ಕಳಿಗೆ ಅಂಚೆ ಇಲಾಖೆ ಸಿಹಿ ಸುದ್ದಿ

ಮನೆಯಲ್ಲಿ ಹೆಣ್ಣು ಮಗು ಹುಟ್ಟಿದವರಿಗೆ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದು. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಬಡ ಕುಟುಂಬಗಳಲ್ಲಿ ಜನಿಸುವ ಹೆಣ್ಣು ಮಗುವಿನ ಶಿಕ್ಷಣ ಹಾಗೂ ಮದುವೆಗಾಗಿ ಆರ್ಥಿಕವಾಗಿ ಸಹಾಯವಾಗಲಿ ಎನ್ನುವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಆರಂಭಿಸಿದೆ. ಈ ಯೋಜನೆಯ ಮೂಲಕ ಬಡಕುಟುಂಬಗಳಲ್ಲಿ ಜನಿಸುವ ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್ನಲ್ಲಿ ಹೆಣ್ಣು ಮಗುವಿನ ಹೆಸರಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಅಕೌಂಟನ್ನು ತೆರೆದು ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಕನಿಷ್ಠ 250ರೂಪಾಯಿಗಳಿಂದ ಗರಿಷ್ಠ 15,000 ರೂಪಾಯಿಗಳವರೆಗೆ ಪ್ರತಿ ವರ್ಷವೂ ಹಣವನ್ನು ಹೆಣ್ಣು ಮಕ್ಕಳ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗೆ ಜಮಾ ಮಾಡಬಹುದಾಗಿದೆ.

 

 

ಈ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಹೆಣ್ಣು ಮಗುವಿನ ವಯಸ್ಸು 18ವರ್ಷಗಳು ತುಂಬುತ್ತಿದ್ದಂತೆ ಶಿಕ್ಷಣದ ಉದ್ದೇಶಕ್ಕಾಗಿ ಪ್ರತಿಶತ 40ರಷ್ಟು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ ಹೆಣ್ಣು ಮಗುವಿನ ವಯಸ್ಸು 21ವರ್ಷ ತುಂಬಿದ ಬಳಿಕ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದೇ ನವೆಂಬರ್30 ರವರೆಗೆ ಸುಕನ್ಯಾ ಸಮೃದ್ಧಿ ಯೋಜನೆಯ ಅಕೌಂಟನ್ನು ತೆರೆಯಲಾಗುತ್ತಿದೆ. 10ವರ್ಷದ ಒಳಗಿನ ಹೆಣ್ಣು ಮಗು ಇರುವ ತಂದೆ ಅಥವಾ ತಾಯಿಯು 14ವರ್ಷದವರೆಗೆ ಪೋಸ್ಟ್ ನಲ್ಲಿ ಒಂದು ಅಕೌಂಟ್ ತೆಗೆದು ಹಣ ಜಮಾ ಮಾಡುತ್ತಿರಬೇಕು.

 

 

ಒಂದು ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಾಕಬಾರದು. ನಂತರ ಹೆಣ್ಣು ಮಗುವಿಗೆ 18ವರ್ಷ ಆದ ಮೇಲೆ ಸ್ವಲ್ಪ ಹಣವನ್ನು ಶಿಕ್ಷಣಕ್ಕೆ ಬೇಕಾದಲ್ಲಿ ತೆಗೆಯಬಹುದು. ನಂತರ 21 ವರ್ಷ ಆದ ಮೇಲೆ ಸಂಪೂರ್ಣ ಹಣವನ್ನು ಪಡೆಯಬಹುದು. ಆದ್ದರಿಂದ ನೀವೂ ಕೂಡ 10ವರ್ಷದ ಒಳಗಿನ ಹೆಣ್ಣು ಮಗು ಇದ್ದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಹೋಗಿ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

error: Content is protected !!