ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ವಿದ್ಯಾರ್ಥಿಗಳಿಗೆ 35 000 ರೂ ಪ್ರೋತ್ಸಾಹಧನ – Prize Money Scholarship 2023 Apply Online

ವಿದ್ಯಾರ್ಥಿಗಳಿಗೆ 35,000 ರೂ. ಪ್ರೋತ್ಸಾಹಧನ, ಅರ್ಜಿ ಆಹ್ವಾನ

ಹಲೋ ಗೆಳೆಯರೇ, ಇದೀಗ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕೊಡಲಾಗುವ ಬಹುಮಾನ ಮೊತ್ತ ಅಥವಾ ಸ್ಕಾಲರ್ಶಿಪ್ 2023 ಪ್ರೋತ್ಸಾಹಧನದ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಅರ್ಹ ವಿದ್ಯಾರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಯಾವ ಕೋರ್ಸ್‌ಗೆ ಎಷ್ಟು ಬಹುಮಾನ ಮೊತ್ತ ನೀಡಲಾಗುತ್ತದೆ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂತಾದ ವಿವರ ನೀಡಲಾಗಿದೆ. ಲೇಖನವನ್ನು ಓದಿ ಅರ್ಹರು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ಸಂಕ್ಷಿಪ್ತ ವಿವರ:
ಯೋಜನೆಯ ಹೆಸರು – ಬಹುಮಾನ ಮೊತ್ತ
ಇಲಾಖೆ ಹೆಸರು – ಸಮಾಜ ಕಲ್ಯಾಣ ಇಲಾಖೆ
ಅರ್ಹತೆಗಳು – ಪಿಯುಸಿ, ಪದವಿ, ಡಿಪ್ಲೊಮಾ, ಪಿಜಿ ಪಾಸಾದವರು
ಈ ಯೋಜನೆ ಯಾರಿಗಾಗಿ – ಎಸ್ಸಿ/ಎಸ್ಟಿ ಸಮುದಾಯದವರಿಗೆ
ಯಾರು ಅರ್ಜಿ ಸಲ್ಲಿಸಬಹುದು – 2023 ರಲ್ಲಿ ಪಾಸ್ ಆದ ಅಭ್ಯರ್ಥಿಗಳು

ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಪದವಿ, ಯಾವುದೇ ಸ್ನಾತಕೋತ್ತರ ಪದವಿಯನ್ನು 2023 ನೇ ಸಾಲಿನಲ್ಲಿ ಪಾಸಾಗಿರಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಕೇಳಗೆ ನೀಡಿರುವ ಮೊತ್ತವನ್ನು ಕೋರ್ಸ್‌ಗಳಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ನೀಡುತ್ತದೆ.

ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ:- 20,000 ರೂಪಾಯಿ
ಪದವಿ:- 25,000 ರೂಪಾಯಿ
ಯಾವುದೆ ಸ್ನಾತಕೋತ್ತರ (ಉದಾ: M.A., M.Sc ಮುಂತಾದ):- 30,000 ರೂಪಾಯಿ
ಕೃಷಿ, ಇಂಜಿನಿಯರಿಂಗ್, ವೆಟರ್ನರಿ, ಮೆಡಿಸಿನ್:- 35,000 ರೂಪಾಯಿ

ಅರ್ಹತೆಗಳು:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಯಾಗಿರಬೇಕು
ಪ್ರಥಮ ಬಾರಿಗೆ ಪಾಸಾಗಿರಬೇಕು
ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು

ಸೂಚನೆ: ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ʼಸೈಟ್ʼನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ.

ಅಗತ್ಯ ದಾಖಲೆಗಳು:
ಆಧಾರ ಸಂಖ್ಯೆ
ಪಾಸ್ಪೋರ್ಟ್ ಸೈಜ್ ಭಾವಚಿತ್ರ‌
ಎಸ್ಸೆಸೆಲ್ಸಿ ಅಂಕಪಟ್ಟಿ ಪ್ರತಿ
ಅಂಕ ಪಟ್ಟಿಗಳ ಪ್ರತಿ
ಜಾತಿ ಪ್ರಮಾಣ ಪತ್ರ
ಬ್ಯಾಂಕ್‌ ಖಾತೆ ವಿವರ
ಮೊಬೈಲ್‌ ನಂಬರ್

ಇಲಾಖೆ ನಿಮ್ಮ ದಾಖಲೆಗಳನ್ನು ಪರಿಶೀಲನೇ ಮಾಡಿ. ನಿಮ್ಮ ದಾಖಲೆಗಳು ಮಾನ್ಯವಾಗಿದ್ದರೆ, ನೀವು ಅರ್ಹರಾಗಿದ್ದರೆ ಅರ್ಜಿಯನ್ನು Approve ಮಾಡುತ್ತದೆ. ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಅಥವಾ ಮಾಹಿತಿಯಲ್ಲಿ ದೋಷಗಳಿದ್ದರೆ, ತಪ್ಪು ಮಾಹಿತಿ ಇದ್ದರೆ Reject ಮಾಡುತ್ತಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2023

ಪ್ರಮುಖ ಲಿಂಕುಗಳು 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಯೌಟ್ಯೂಬ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

close button