ಪರೀಕ್ಷೆಗೆ ಮೂತ್ರದ ಬದಲು ನಟಿ ರಾಗಿಣಿ ತಂದು ಕೊಟ್ಟಿದ್ದೇನು ಗೊತ್ತಾ?

Telegram Group

 

ಡ್ರಗ್ಸ್ ಅಂಶ ಪತ್ತೆಗಾಗಿ ಗುರುವಾರ ನಡೆಸಿದ್ದ ವೈದ್ಯಕೀಯ ಪರೀಕ್ಷೆ ವೇಳೆ ನಟಿ ರಾಗಿಣಿ ದ್ವಿವೇದಿ ಕಿರಿಕಿರಿ ಮಾಡಿದ್ದು, ಅದರ ವಿಡಿಯೊ ಶುಕ್ರವಾರ ಎಲ್ಲೆಡೆ ಹರಿದಾಡಿದೆ.

 

ರಕ್ತ, ಮೂತ್ರ ಹಾಗೂ ತಲೆಕೂದಲು ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದಿದ್ದ ಸಿಸಿಬಿ ಪೊಲೀಸರು, ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆಗೆ ಸಂಜನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ರಾಗಿಣಿ ಸಹ ಪರೀಕ್ಷೆಗೆ ತಗಾದೆ ತೆಗೆದಿದ್ದರು. ಆಸ್ಪತ್ರೆ ಬೆಡ್‌ ಮೇಲೆಯೇ ಕುಳಿತು ತಮ್ಮ ಪರ ವಕೀಲರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

‘ಪರೀಕ್ಷೆಗಾಗಿ ಮೂತ್ರವನ್ನು ತಂದು ಕೊಡುವಂತೆ ವೈದ್ಯರು ತಿಳಿಸಿದ್ದರು. ಶೌಚಾಲಯಕ್ಕೆ ಹೋಗಿದ್ದ ನಟಿ, ಮೂತ್ರದ ಬದಲು ನೀರನ್ನು ಚಿಕ್ಕ ಡಬ್ಬಿಯಲ್ಲಿ ತುಂಬಿ ಕೊಟ್ಟಿದ್ದರು. ಅದು ನೀರು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದ್ದಂತೆ ವೈದ್ಯರು ಪೊಲೀಸರ ಗಮನಕ್ಕೆ ತಂದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

 

‘ನೀರಿನ ಬಗ್ಗೆ ಪ್ರಶ್ನಿಸಿದಾಗ ರಾಗಿಣಿ ತಪ್ಪೊಪ್ಪಿಕೊಂಡರು. ಅದಾದ ಬಳಿಕ ನರ್ಸ್‌ ಸಮ್ಮುಖದಲ್ಲೇ ರಾಗಿಣಿ ಅವರಿಂದ ಮೂತ್ರ ಸಂಗ್ರಹಿಸಲಾಯಿತು. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೂ ತರಲಾಗುವುದು’ ಎಂದೂ ತಿಳಿಸಿದರು. 

‘ಜೈಲಿಗೆ ಹೋಗ್ಬೇಕಾಗುತ್ತದೆ’

ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಗಿಣಿ, ‘ನನ್ನ ಜೀವನ ಈಗಾಗಲೇ ಹಾಳಾಗಿದೆ. ಈಗ ಪರೀಕ್ಷೆಯಲ್ಲಿ ಸಿಕ್ಕಾಕೊಂಡ್ರೆ ಜೈಲಿಗೆ ಹೋಗಬೇಕಾಗುತ್ತದೆ. ಯಾವುದೇ ಪರೀಕ್ಷೆ ಮಾಡುವುದಿದ್ದರೂ ನಮ್ಮ ವಕೀಲರ ಗಮನಕ್ಕೆ ತಂದು ಮಾಡಿ’ ಎಂದು ಪಟ್ಟು ಹಿಡಿದಿದ್ದರು. ನಟಿಯ ಈ ಸಂಭಾಷಣೆ ವಿಡಿಯೊದಲ್ಲಿದೆ.

Telegram Group
error: Content is protected !!