ಹೊಸ ನೇಮಕಾತಿ ಅಧಿಸೂಚನೆ 2023
Raichur District Court Recruitment 2023 : ರಾಯಚೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
ರಾಯಚೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ರಾಯಚೂರು ಜಿಲ್ಲಾ ನ್ಯಾಯಾಲಯ Raichur District Court |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | ಒಟ್ಟು 33 ಹುದ್ದೆಗಳ ಭರ್ತಿ |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಶೀಘ್ರಲಿಪಿಗಾರರು ಗ್ರೇಡ್ – 3 7 |
ಬೆರಳಚ್ಚುಗಾರರು 1 |
ಆದೇಶ ಜಾರಿಕಾರರು 3 |
ಜವಾನ 22 |
ವಿದ್ಯಾರ್ಹತೆ:
ಶೀಘ್ರಲಿಪಿಗಾರರು ಗ್ರೇಡ್ 3 – 1) ಹುದ್ದೆಗಳಿಗೆ ಅಭ್ಯರ್ಥಿಗಳು ಪಿ.ಯು.ಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರಲಿಪಿ ಹಿರಿಯ ಶ್ರೇಣಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ ರೂ.27650/-52650/-
ಬೆರಳಚ್ಚುಗಾರರು – 1) ಹುದ್ದೆಗಳಿಗೆ ಅಭ್ಯರ್ಥಿಗಳು ಪಿ.ಯು.ಸಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ ರೂ.21400-42000/-
ಆದೇಶ ಜಾರಿಕಾರರು – 1) ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2) ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.
3) ಲಘು ವಾಹನ ಚಾಲನಾ ಪರವಾನಗಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ವೇತನ ಶ್ರೇಣಿ ರೂ.19950-37900
ಜವಾನ – 1) ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2) ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.
ವೇತನ ಶ್ರೇಣಿ ರೂ.17000-28950
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಪ.ಜಾತಿ, ಪ.ಪಂ., ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
ಅರ್ಜಿ ಶುಲ್ಕ:
• ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 200
• ಪ.ಜಾತಿ, ಪ.ಪಂ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳು – ರೂ. 100
(ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು. ಅಥವಾ ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ ನಿಂದ ಚಲನ್ ಪ್ರಿಂಟ್ ತೆಗೆದು ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.)
ಆಯ್ಕೆ ವಿಧಾನ:
ಶೀಘ್ರಲಿಪಿಗಾರ, ಬೆರಳಚ್ಚುಗಾರ – ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಉಕ್ತ ಲೇಖನವನ್ನು ಅನುಲಿಪಿ ಮಾಡುವ ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು
ಆದೇಶ ಜಾರಿಕಾರ, ಜವಾನ – 10ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ಫೆಬ್ರವರಿ 09, 2023 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಮಾರ್ಚ್ 10, 2023 |
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಯೌಟ್ಯೂಬ್ ಚಾನೆಲ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |