ಹೊಸ ನೇಮಕಾತಿ ಅಧಿಸೂಚನೆ 2022
Raichur Zilla Panchayat Recruitment 2022 : ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಗತ್ಯವಿರುವ ತಾಂತ್ರಿಕ ಸಹಾಯಕರು ಹುದ್ದೆಗಳ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ Zilla Panchayat |
ಹುದ್ದೆಗಳ ಹೆಸರು: | ತಾಂತ್ರಿಕ ಸಹಾಯಕರು (ಸಿವಿಲ್), ತಾಂತ್ರಿಕ ಸಹಾಯಕರು (ತೋಟಗಾರಿಕೆ), ತಾಂತ್ರಿಕ ಸಹಾಯಕರು (ಅರಣ್ಯ), ತಾಂತ್ರಿಕ ಸಹಾಯಕರು (ಕೃಷಿ) |
ಒಟ್ಟು ಹುದ್ದೆಗಳು | ಒಟ್ಟು 11 ಹುದ್ದೆಗಳ ಭರ್ತಿ |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಹುದ್ದೆಗಳ ವಿವರ :
ತಾಂತ್ರಿಕ ಸಹಾಯಕರು (ಸಿವಿಲ್) 2 , ತಾಂತ್ರಿಕ ಸಹಾಯಕರು (ತೋಟಗಾರಿಕೆ) 1 , ತಾಂತ್ರಿಕ ಸಹಾಯಕರು (ಅರಣ್ಯ) 2, ತಾಂತ್ರಿಕ ಸಹಾಯಕರು (ಕೃಷಿ) 6
ವಿದ್ಯಾರ್ಹತೆ:
ತಾಂತ್ರಿಕ ಸಹಾಯಕರು (ಸಿವಿಲ್) ಹುದ್ದೆಗಳಿಗೆ ಅಭ್ಯರ್ಥಿಗಳು – ಡಿಪ್ಲೊಮಾ ಸಿವಿಲ್/ ಬಿಇ/ ಬಿ.ಟೆಕ್ (ಸಿವಿಲ್). ಬಿಇ (ಸಿವಿಲ್) ಅಭ್ಯರ್ಥಿಗಳು ಬಂದಲ್ಲಿ ಡಿಪ್ಲೊಮಾ ಸಿವಿಲ್ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ. ತಾಂತ್ರಿಕ ಸಹಾಯಕರು (ತೋಟಗಾರಿಕೆ) ಹುದ್ದೆಗಳಿಗೆ ಅಭ್ಯರ್ಥಿಗಳು – ತೋಟಗಾರಿಕೆ ಪದವಿ ಮತ್ತು ಇತರ ತತ್ಸಮಾನ ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆಗಳಿಗೆ ಅಭ್ಯರ್ಥಿಗಳು – ಅರಣ್ಯ ಪದವಿ ಮತ್ತು ಇತರ ತತ್ಸಮಾನ ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ತಾಂತ್ರಿಕ ಸಹಾಯಕರು (ಕೃಷಿ) ಹುದ್ದೆಗಳಿಗೆ ಅಭ್ಯರ್ಥಿಗಳು – ಕೃಷಿ ಪದವಿ ಮತ್ತು ಇತರ ತತ್ಸಮಾನ ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ವೇತನಶ್ರೇಣಿ:
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 24,000 ಸಂಭಾವನೆ ಹಾಗೂ ಪ್ರಯಾಣ ಭತ್ಯೆ ರೂ. 2000 ನೀಡಲಾಗುವುದು. (ತಾಂತ್ರಿಕ ಸಹಾಯಕ ಸಿವಿಲ್ ಹುದ್ದೆಗೆ ಡಿಪ್ಲೊಮಾ ಅಭ್ಯರ್ಥಿಗಳಿಗೆ ರೂ. 22,000 ಸಂಭಾವನೆ ನೀಡಲಾಗುವುದು)
ಇದನ್ನೂ ಓದಿ – ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್ ಹುದ್ದೆಯ ನೇರ ನೇಮಕಾತಿ
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ:
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ, ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ ಅನುಭವದ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ನವೆಂಬರ್ 24, 2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಡಿಸೆಂಬರ್ 03, 2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |