WhatsApp Telegram Group

ಪಡಿತರ ಚೀಟಿದಾರರಿಗೆ ಇಲ್ಲಿದೆ ಒಂದು ಪ್ರಮುಖ ಮಾಹಿತಿ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟದ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಈ ಅವಧಿಯಲ್ಲಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರದಿಂದ ಹಂಚಿಕೆಯಾದ ರೇಷನ್ ವಿತರಿಸಲಾಗುತ್ತಿದೆ.

ಪಡಿತರ ವಿತರಣೆಗೆ ಬೆರಳಚ್ಚು ಪಡೆಯಲು ವಿನಾಯಿತಿ ನೀಡಲಾಗಿದೆ. ಬಯೋಮೆಟ್ರಿಕ್ ನಿಂದ ವಿನಾಯಿತಿ ನೀಡಲಾಗಿದ್ದು, ಪಡಿತರ ಚೀಟಿದಾರರು ಮೇ ತಿಂಗಳ ಪಡಿತರವನ್ನು ಬಯೋಮೆಟ್ರಿಕ್ ನೀಡದೆ ಪಡೆದುಕೊಳ್ಳಬಹುದಾಗಿದೆ.

In Article ad

ರೇಷನ್ ಕಾರ್ಡ್ ದಾರರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋದ ಸಂದರ್ಭದಲ್ಲಿ ಮೊಬೈಲ್ ಗೆ ಬರುವ ಓಟಿಪಿ ಆಧರಿಸಿ ಪಡಿತರ ವಿತರಿಸಲಾಗುತ್ತದೆ. ಮ್ಯಾನುಯೆಲ್ ಮೂಲಕವೂ ಪಡಿತರ ವಿತರಣೆ ಮಾಡಲಾಗುವುದು. ಪಡಿತರ ಪಡೆಯಲು ಬೆರಳಚ್ಚು ಕಡ್ಡಾಯವಲ್ಲ ಎಂದು ಆಹಾರ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಹೇಳಲಾಗಿದೆ.

ಜಿಲ್ಲಾವಾರು ಉದ್ಯೋಗ ಮಾಹಿತಿ

close button