ಉಡುಪಿ: ನ್ಯಾಯಬೆಲೆ ಅಂಗಡಿಯ ಅಕ್ಕಿಯಲ್ಲಿ ಕಲಬರಕೆಯಾಗುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅದೇ ರೀತಿ ಇದೀಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲೂ ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ.ಕಾರ್ಕಳದ ಬೆಳ್ಮಣ್ ಪಂಚಾಯತಿ ವ್ಯಾಪ್ತಿಯಲ್ಲಿ ಇಂತದ್ದೊಂದು ದೂರು ಕೇಳಿಬಂದಿದೆ. ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಕೊಂಡೋಗಿ ಮನೆಯಲ್ಲಿ ಅನ್ನ ಮಾಡಲು ಅಕ್ಕಿ ತೊಳೆಯುವಾದ ಅದರಲ್ಲಿ ಹೊಳೆಯುವ ಹರಳಿನ ರೂಪದ ವಸ್ತುಗಳು ಸಿಕ್ಕಿದೆ. ಪಂಚಾಯತಿಗೆ ಬಂದ ಅಕ್ಕಿಯ ಎರಡು ಗೋಣಿ ಚೀಲದಲ್ಲಿ ಮಾತ್ರ ಈ ರೀತಿಯ ಕಲಬರಕೆಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪಂಚಾಯತ್ ಅಧ್ಯಕ್ಷರು ಆಹಾರ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಟೆಲಿಗ್ರಾಂ ವಾಟ್ಸಾಪ್ ಗ್ರೂಪ್
ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯೊಳಗೆ ಸಿಕ್ಕಿದ್ದೇನು?
Latest Jobs
ವರ್ಷಿಣಿ
ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.