ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನೇಮಕಾತಿ 2021

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಡಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ  ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ  ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಸ್ಟೇಟ್ ಪ್ರಾಜೆಕ್ಟ್‌ ಕೋರ್ಡಿನೇಟರ್ 1
ಅಸಿಸ್ಟಂಟ್ ಪ್ರಾಜೆಕ್ಟ್‌ ಎಕ್ಸಿಕ್ಯೂಟಿವ್ 1

 

 

ವಿದ್ಯಾರ್ಹತೆ ಮತ್ತು ವಯೋಮಿತಿ ಅರ್ಹತೆಗಳು
ಸ್ಟೇಟ್ ಪ್ರಾಜೆಕ್ಟ್‌ ಕೋರ್ಡಿನೇಟರ್ ಹುದ್ದೆಗೆ ಸಮಾಜ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರಬೇಕು. ಎಂಎಸ್‌ ಎಕ್ಸೆಲ್ ಮತ್ತು ಎಂಎಸ್‌ ವರ್ಲ್ಡ್‌ ಬಳಕೆ ತಿಳಿದಿರಬೇಕು. ಕನ್ನಡ ಮತ್ತು ಇಂಗ್ಲಿಷ್‌ ಭಾಷೆ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.

ಅಸಿಸ್ಟಂಟ್ ಪ್ರಾಜೆಕ್ಟ್‌ ಎಕ್ಸಿಕ್ಯೂಟಿವ್ ಹುದ್ದೆಗೆ ಯಾವುದೇ ಪದವಿ ಪಾಸ್‌ ಮಾಡಿರಬೇಕು.
ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಗರಿಷ್ಠ 25 ವರ್ಷ ವಯೋಮಿತಿ ಮೀರಿರಬಾರದು.

ಆಯ್ಕೆ ವಿಧಾನ 
ಪದವಿಯಲ್ಲಿ ಗಳಿಸಿದ 30 ಅಂಕಗಳು, ಅಧ್ಯಯನ ವರದಿಯ ಗುಣಮಟ್ಟ – 10 ಅಂಕಗಳು, ಕಾರ್ಯಾನುಭವ – 10 ಅಂಕಗಳ ಮಾನದಂಡದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳನ್ನು ಈ ಕಛೇರಿಯಿಂದ ಆಯ್ಕೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಪ್ರಾಯೋಗಿಕ ಅಧ್ಯಯನ ನಡೆಸಲು ನಿಯೋಜಿಸಲಾಗುವುದು. ಕ್ಷೇತ್ರ ಭೇಟಿಯ ನಂತರದಲ್ಲಿ ಅಭ್ಯರ್ಥಿಯು ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ಮೌಲ್ಯಮಾಪನ ಸಮಿತಿಗೆ ಸಲ್ಲಿಸಬೇಕು. ಅತ್ಯುತ್ತಮ ವರದಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗಧಿಪಡಿಸಿದ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಯನ್ನು 11 ತಿಂಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-01-2021

ನೋಟಿಫಿಕೇಶನ್ 

10th pass jobs, Degree jobs, latest job news Karnataka, rdpr Bangalore 

close button