ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲೆಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.
ಹುದ್ದೆಗಳ ವಿವರ ಮತ್ತು ಸಂಬಂಧಪಟ್ಟ ವಿದ್ಯಾರ್ಹತೆ , ವೇತನ ಶ್ರೇಣಿ ಈ ಕೆಳಗಿನಂತಿವೆ.
ಗುತ್ತಿಗೆ ಅವಧಿ: ಒಂದು ವರ್ಷ
ವಯೋಮಿತಿ: 45 ವರ್ಷಗಳು ಮೀರಿರಬಾರದು
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮೂಲಕ
ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ,ವಯಸ್ಸಿನ ದೃಡೀಕರಣ,ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು Resume ಹಾಗೂ ಅರ್ಜಿ ಜೊತೆಗೆ ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತನಾಗಿದ್ದೇನೆ’ ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ
ಅರ್ಜಿ ಸಲ್ಲಿಸುವ ವಿಳಾಸ
ಆಯುಕ್ತರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ,ಕೆ ಹೆಚ್ ಬಿ ಕಟ್ಟಡ ಕಾವೇರಿ ಬಾವನ ಕೆ ಜಿ ರಸ್ತೆ ಬೆಂಗಳೂರು 5600009 ಈ ವಿಳಾಸಕ್ಕೆ ಅರ್ಜಿಯ ಹಾರ್ಡ್ ಪ್ರತಿಯನ್ನು ದಿನಾಂಕ 30.11.2020 ರ ಸಂಜೆ 5:30 ಗಂಟೆಯೊಳಗೆ ಸಲ್ಲಿಸಬೇಕು.
ವೆಬ್ಸೈಟ್ |
ನೋಟಿಫಿಕೇಶನ್ |
ಅರ್ಜಿ ಫಾರ್ಮ್ |