ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಗ್ರಾಮೀಣ ಕುಡಿಯುವ ನೀರು ಮತು ನೈರ್ಮಲ್ಯ ಇಲಾಖೆ ನೇಮಕಾತಿ 2020

RDPR Karnataka Recruitment 2021

ಗ್ರಾಮೀಣ ಕುಡಿಯುವ ನೀರು ಮತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಚ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಕೇಂದ್ರ ಕಛೇರಿ ಹಾಗೂ ಜಿಲ್ಲಾ ಕಚೇರಿಗಳಲ್ಲಿ ಖಾಲಿ ಇರುವ 30 ಸಮಾಲೋಚಕರ ಹುದ್ದೆಗಳ ತಾತ್ಕಾಲಿಕ /ಹೊರಗುತ್ತಿಗೆ ಆಧಾರದ ನೇಮಕಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 30

ವಿದ್ಯಾರ್ಹತೆ:
ಹುದ್ದೆಗಳ ಅನುಗುಣವಾಗಿ ಅಭ್ಯರ್ಥಿಗಳು ಎಂ.ಎಸ್.ಡಬ್ಲ್ಯೂ, ಎಂಸಿಎ, ಎಂ.ಎ, ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ, ಎಂ.ಎಸ್ಸಿ, ಬಿ.ಇ, ಪತ್ರಿಕೋದ್ಯಮ ವಿದ್ಯಾರ್ಹತೆಯನ್ನು ಹೊಂದಿರಬೇಕು ಮತ್ತು ಯಾವುದೇ ಹುದ್ದೆಯಲ್ಲಿ ಕನಿಷ್ಠ 3- 8 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ:
ಅಭ್ಯರ್ಥಿಗಳು ದಿನಾಂಕ 11-01-2021 ಕ್ಕೆ ಅನ್ವಯಿಸುವಂತೆ ಗರಿಷ್ಠ- 45 ವರ್ಷಗಳನ್ನು ಮೀರಿರಬಾರದು.

ಸಂಬಳ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 22,000/- ದಿಂದ 60,000/- ರೂ ಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.

 

 

ಆಯ್ಕೆ ವಿಧಾನ;
ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿ , ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪಡೆದುಕೊಂಡು ಭರ್ತಿ ಮಾಡಿ ತದನಂತರ ಎಲ್ಲಾ ಮೂಲ ದಾಖಲೆಗಳೊಂದಿಗೆ ಅರ್ಜಿಯನ್ನು ಈ ಕೆಳಗೆ ನೀಡಿದ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ತಲುಪುವಂತೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಗೆ,
ಆಯುಕ್ತರು,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,
2ನೇ ಮಹಡಿ, ಕೆ ಹೆಚ್ ಬಿ ಕಟ್ಟಡ,
ಕಾವೇರಿ ಭವನ, ಕೆ ಜಿ ರಸ್ತೆ, ಬೆಂಗಳೂರು- 560009 ಕ್ಕೆ 11-01-2021 ರ ಒಳಗೆ ಸಲ್ಲಿಸಬೇಕು.

 

 

ಪ್ರಮುಖ ದಿನಾಂಕಗಳು

Application Start Date: 25 ಡಿಸೆಂಬರ್ 2020

Application End Date: 11 ಜನವರಿ 2021

Website – ವೆಬ್ಸೈಟ್ 
Notification – ಅಧಿಸೂಚನೆ 
ಅರ್ಜಿ ಫಾರ್ಮ್ 
close button