ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನ್ ಧನ್ ಖಾತೆದಾರರಿಗೆ ಭರ್ಜರಿ ಘೋಷಣೆ ಮಾಡಿದೆ. ನೀವು ಜನ್ ಧನ್ ಖಾತೆ ಹೊಂದಿದ್ದರೆ ಅಥವಾ ಅದನ್ನು ತೆರೆಯಲು ಯೋಜನೆ ಹಾಕಿಕೊಂಡರೆ, ನೀವು ‘ಎಸ್ ಬಿಐ ರೂಪೇ ಜನ್ ಧನ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ನೀವು 2 ಲಕ್ಷ ರೂ.ಗಳವರೆಗೆ ಅಪಘಾತ ವಿಮೆ ಯನ್ನು ಪಡೆಯಬಹುದು.
90 ದಿನಕ್ಕೊಮ್ಮೆ ಎಸ್ ಬಿಐ ರೂಪೇ ಜನಧನ್ ಕಾರ್ಡ್ ಸ್ವೈಪ್ ಮಾಡಿದರೆ ಬಳಕೆದಾರರು 2 ಲಕ್ಷ ರೂ.ಗಳ ಆಕ್ಸಿಡೆಂಟಲ್ ಇನ್ಶೂರೆನ್ಸ್ ಪಡೆಯಬಹುದು.
ರುಪೇ PMJDY ಕಾರ್ಡ್
ರುಪೇ ಪಿಎಂಜೆಡಿವೈ (ಪ್ರಧಾನ ಮಂತ್ರಿ ಜನ-ಧನ ಯೋಜನೆ) ಕಾರ್ಡ್ ಅನ್ನು ಪ್ರಧಾನ ಮಂತ್ರಿ ಜನಧನ್ ಯೋಜನೆ (PMDJY) ಅಡಿಯಲ್ಲಿ ಖಾತೆ ತೆರೆದವರಿಗೆ ವಿತರಿಸಲಾಗುತ್ತದೆ- ಇದು ಹಣಕಾಸು ಸೇರ್ಪಡೆಗೆ ರಾಷ್ಟ್ರೀಯ ಮಿಷನ್ ಫಾರ್ ಫೈನಾನ್ಶಿಯಲ್ ಇನ್ಕ್ಲೂಷನ್ ಆಗಿದ್ದು, ಇದು ಬ್ಯಾಂಕಿಂಗ್, ಉಳಿತಾಯ/ಠೇವಣಿ ಖಾತೆ, ಸಂದಾಯ, ಕ್ರೆಡಿಟ್ ವಿಮೆ ಮತ್ತು ಪಿಂಚಣಿ ಯಂತಹ ಹಣಕಾಸು ಸೇವೆಗಳನ್ನು ಜನರಿಗೆ ಕೈಗೆಟುಕುವ ರೀತಿಯಲ್ಲಿ ಒದಗಿಸುತ್ತದೆ.
ಕಾರ್ಡ್ ಬಳಕೆದಾರರಿಗೆ ಎಲ್ಲಾ ಎಟಿಎಂಗಳು, ಪಿಒಎಸ್ ಟರ್ಮಿನಲ್ ಗಳು ಮತ್ತು ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ವಹಿವಾಟು ಗಳನ್ನು ಮಾಡಲು ಅವಕಾಶ ನೀಡುತ್ತದೆ. ಅಲ್ಲದೇ ವೈಯಕ್ತಿಕ ಆಕಸ್ಮಿಕ ಸಾವು ಮತ್ತು ಒಟ್ಟು ಅಂಗವೈಕಲ್ಯ ಕ್ಕೆ 2 ಲಕ್ಷ ರೂ.ಸಿಗಲಿದೆ.
ಪಿಯೋನ್ ಹುದ್ದೆಗಳಿಗೆ ಅರ್ಜಿ ಅಹ್ವಾನ
ಭಾರತದ ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬೆಂಗಳೂರು ಪೂರ್ವ, ವೃತ್ತ ಕಚೇರಿಯ ಅಡಿಯ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 43 ಜವಾನ ನೌಕರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ಸ್ವವಿವರಗಳುಳ್ಳ ಎಲ್ಲ ದಾಖಲಾತಿಗಳನ್ನು ಈ ಕೆಳಗೆ ನೀಡಿರುವ ವಿಳಾಸಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ತಾವೇ ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಬೇಕು.
ಬೆಂಗಳೂರು ಈಸ್ಟ್ ಸರ್ಕಲ್ 25 ಹುದ್ದೆಗಳು
ಬೆಂಗಳೂರು ವೆಸ್ಟ್ ಸರ್ಕಲ್ 18 ಹುದ್ದೆಗಳು
ಒಟ್ಟು ಹುದ್ದೆಗಳು: 43
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12 ನೇ ತರಗತಿ (PUC) ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ವಯೋಮಿತಿ:
ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿಯನ್ನು ಹೊಂದಿರಬೇಕು.
ಕನಿಷ್ಠ 18 ವರ್ಷ
ಗರಿಷ್ಠ 24 ವರ್ಷ ಮೀರಿರಬಾರದು.
ವಯೋಸಡಿಲಿಕೆ
SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ಇದರೊಂದಿಗೆ ಅವರುಗಳು ಸೈನಿಕ ಸೇವೆಯ ಅವಧಿಯನ್ನು ಪರಿಗಣಿಸಲಾಗುವುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ಪಂಜಾಬ್ ನ್ಯಾಷನಲ್ ಬ್ಯಾಂಕ್,
ಹೆಚ್.ಆರ್.ವಿಭಾಗ, ವೃತ್ತ ಕಚೇರಿ-ಬೆಂಗಳೂರು ಪೂರ್ವ,
ರಹೇಜಾ ಟವರ್ಸ್, ಎಂ.ಜಿ ರಸ್ತೆ,
ಬೆಂಗಳೂರು – 560001
ಪಂಜಾಬ್ ನ್ಯಾಷನಲ್ ಬ್ಯಾಂಕ್,
ಹೆಚ್.ಆರ್.ವಿಭಾಗ, ವೃತ್ತ ಕಚೇರಿ-ಬೆಂಗಳೂರು ಪಶ್ಚಿಮ,
ರಹೇಜಾ ಟವರ್ಸ್, ಎಂ.ಜಿ ರಸ್ತೆ,
ಬೆಂಗಳೂರು – 560005
ಪ್ರಮುಖ ದಿನಾಂಕಗಳು
ಬೆಂಗಳೂರು ಈಸ್ಟ್ ಸರ್ಕಲ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1 ಮಾರ್ಚ್ 2021
ಬೆಂಗಳೂರು ವೆಸ್ಟ್ ಸರ್ಕಲ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಫೆಬ್ರವರಿ 2021
Website |
Notification – 1 |
Notification – 2 |