ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 1044 ಹುದ್ದೆಗಳು : South East Central Railway Recruitment 2022

ಆಗ್ನೇಯ ಮಧ್ಯೆ ರೈಲ್ವೆ ನೇಮಕಾತಿ ಅಧಿಸೂಚನೆ 2022

South East Central Railway Recruitment 2022: ಆಗ್ನೇಯ ಮಧ್ಯೆ ರೈಲ್ವೆ (ಸೌಥ್ ಈಸ್ಟ್‌ ಸೆಂಟ್ರಲ್ ರೈಲ್ವೆ) ಇಲ್ಲಿ ಅಗತ್ಯ ಇರುವ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು:ಆಗ್ನೇಯ ಮಧ್ಯೆ ರೈಲ್ವೆ
ಒಟ್ಟು ಹುದ್ದೆಗಳು 1044
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 

 

ವಿದ್ಯಾರ್ಹತೆ:
ಅಭ್ಯರ್ಥಿಗಳು ಕೇಂದ್ರ , ರಾಜ್ಯ ಸರ್ಕಾರದ ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಜತೆಗೆ ಐಟಿಐ ವಿದ್ಯಾರ್ಹತೆಗಳನ್ನು ಹುದ್ದೆಗೆ ಸಂಬಂಧಿತ ಟ್ರೇಡ್‌ನಲ್ಲಿ ಪಡೆದಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

 

 

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ 

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ, ಆಯ್ಕೆ ಮಾಡಲಾಗುತ್ತದೆ. ಅಪ್ರೆಂಟಿಸ್ ಹುದ್ದೆ ಅವಧಿಯಲ್ಲಿ, ಅಪ್ರೆಂಟಿಸ್ ಕಾಯ್ದೆ -1961 ರ ಪ್ರಕಾರ ಪ್ರತಿ ಮಾಸಿಕ ಸ್ಟೈಫಂಡ್‌ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: 04-05-2022
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 03-06-2022 ರಾತ್ರಿ 11-59 ರವರೆಗೆ.

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  04-05-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-06-2022 ರಾತ್ರಿ 11-59 ರವರೆಗೆ.
  
ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

 

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button