ಸುಪ್ರೀಂ ಕೋರ್ಟ್ ನೇಮಕಾತಿ ಅಧಿಸೂಚನೆ ಗ್ರೂಪ್ ಬಿ ನಾನ್ ಗೆಜೆಟೆಡ್ ಹುದ್ದೆಗಳ ಭರ್ತಿಗೆ
Supreme Court Recruitment 2022: ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಅಗತ್ಯವಿರುವ ವಿವಿಧ ಗ್ರೂಪ್ ಬಿ ನಾನ್ ಗೆಜೆಟೆಡ್ ಹುದ್ದೆಗಳ ಭರ್ತಿಗೆ ಇದೀಗ ನೇಮಕಾತಿ ಅಧಿಸೂಚನೆ ಒಂದನ್ನು ಬಿಡುಗಡೆ ಮಾಡಿದೆ. ಜೂನಿಯರ್ ಕೋರ್ಟ್ ಅಸಿಸ್ಟಂಟ್ (ಗ್ರೂಪ್ ಬಿ ನಾನ್ ಗೆಜೆಟೆಡ್) ಹುದ್ದೆಗಳ ಭರ್ತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಸುಪ್ರೀಂ ಕೋರ್ಟ್ |
ಹುದ್ದೆಗಳ ಹೆಸರು: | ಜೂನಿಯರ್ ಕೋರ್ಟ್ ಅಸಿಸ್ಟಂಟ್ |
ಒಟ್ಟು ಹುದ್ದೆಗಳು | 210 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ವಿದ್ಯಾರ್ಹತೆ:
ಭಾರತೀಯ ಸುಪ್ರೀಂ ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅನ್ಯಾರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪದವಿ ಪಾಸಾಗಿರಬೇಕು. ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.
(ಅಭ್ಯರ್ಥಿಯು ಇಂಗ್ಲಿಷ್ ಟೈಪಿಂಗ್ ಜ್ಞಾನ ಹೊಂದಿದ್ದು, ನಿಮಿಷಕ್ಕೆ 35 ಪದಗಳನ್ನು ಬರೆಯುವ ಸಾಮರ್ಥ್ಯ ಹೊಂದಿರಬೇಕು.
ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.)
ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ವೇತನಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,400/- ದಿಂದ ರೂ.63,068/-
ಅರ್ಜಿ ಶುಲ್ಕ:
ಸಾಮಾನ್ಯ, ಹಿಂದುಳಿದ ಅಭ್ಯರ್ಥಿಗಳಿಗೆ: 500 ರೂ
ಪ.ಜಾ, ಪ.ಪಂ, ನಿವೃತ್ತ ಸೇನಾಧಿಕಾರಿ, ವಿಕಲಚೇತನರಿಗೆ: 250 ರೂ
ಆಯ್ಕೆ ವಿಧಾನ:
100 ಅಂಕಗಳಿಗೆ ಆಬ್ಜೆಕ್ಟಿವ್ ಮಾದರಿ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ, ಕಂಪ್ಯೂಟರ್ ಕುರಿತು 25 ಪ್ರಶ್ನೆಗಳು (ಆಬ್ಜೆಕ್ಟಿವ್ ಟೈಪ್), 10 ನಿಮಿಷ ಇಂಗ್ಲಿಷ್ ಟೈಪಿಂಗ್ ಟೆಸ್ಟ್, 2 ಗಂಟೆಗಳು ಇಂಗ್ಲಿಷ್ ಭಾಷೆಯಲ್ಲಿ (ಪ್ಯಾಸೇಜ್, ಪ್ರೀಸೈಸ್ ರೈಟಿಂಗ್, ಪ್ರಬಂಧ ಬರವಣಿಗೆ) ಡಿಸ್‌ಸ್ಕ್ರಿಪ್ಟಿವ್ ರೈಟಿಂಗ್ ಇರುತ್ತದೆ. ಈ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 18-06-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10-07-2022 ರ ರಾತ್ರಿ 11-59 ರವರೆಗೆ. |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |