ಹೊಸ ನೇಮಕಾತಿ ಅಧಿಸೂಚನೆ 2022
Teachers’ Co-operative Bank Recruitment 2022 – ಉಡುಪಿ ಜಿಲ್ಲೆಯ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ 26 ಜೂನಿಯರ್ ಅಸಿಸ್ಟಂಟ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಉಡುಪಿ ಜಿಲ್ಲೆಯ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ – Teachers’ Co-operative Bank |
ಹುದ್ದೆಗಳ ಹೆಸರು: | ಮ್ಯಾನೇಜರ್, ಜೂನಿಯರ್ ಅಸಿಸ್ಟಂಟ್ |
ಒಟ್ಟು ಹುದ್ದೆಗಳು | 26 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಮ್ಯಾನೇಜರ್ | 01 |
ಜೂನಿಯರ್ ಅಸಿಸ್ಟೆಂಟ್ | 23 |
ಜೂನಿಯರ್ ಅಸಿಸ್ಟೆಂಟ್-ಟೆಕ್ನಿಕಲ್ | 01 |
ಜೂನಿಯರ್ ಅಸಿಸ್ಟೆಂಟ್-ಲೀಗಲ್ | 01 |
ವಿದ್ಯಾರ್ಹತೆ:
ಮ್ಯಾನೇಜರ್ – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಯಾವುದೇ ಪದವಿಯೊಂದಿಗೆ ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್. ಕನಿಷ್ಠ 1 ವರ್ಷ ಬ್ಯಾಂಕಿಂಗ್ ಅನುಭವ ಹೊಂದಿರಬೇಕು.
ಜೂನಿಯರ್ ಅಸಿಸ್ಟೆಂಟ್ – ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ. ಸಹಕಾರಿ ಡಿಪ್ಲೋಮಾ ಹೊಂದಿದವರಿಗೆ ಆದ್ಯತೆ. ಪದವಿ ಅಥವಾ ಸ್ನಾತಕೋತ್ತರ ಪದವಿಯೊಂದಿಗೆ ಕನಿಷ್ಠ 6 ತಿಂಗಳ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಜೂನಿಯರ್ ಅಸಿಸ್ಟೆಂಟ್ (ಟೆಕ್ನಿಕಲ್) – ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಇ ಪದವಿ ಅಥವಾ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿ (ಎಂ.ಸಿ.ಎ) ಹೊಂದಿರಬೇಕು.
ಜೂನಿಯರ್ ಅಸಿಸ್ಟೆಂಟ್ (ಲೀಗಲ್) – ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಕಾನೂನಿನಲ್ಲಿ ಪದವಿಯೊಂದಿಗೆ ಬಾರ್ ಕೌನ್ಸಿಲ್ ಸದಸ್ಯತನ ಹೊಂದಿರಬೇಕು. ಕನಿಷ್ಠ 6 ತಿಂಗಳ ಕಂಪ್ಯೂಟರ್ ಜ್ಞಾನದೊಂದಿಗೆ, ಸೇವಾ ಅನುಭವ ಹೊಂದಿರುವವರಿಗೆ ಆದ್ಯತೆ.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 21 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
– ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ 38 ವರ್ಷ
– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ – ಅರೋಗ್ಯ ಇಲಾಖೆಯಲ್ಲಿ 1200 ಖಾಲಿ ಹುದ್ದೆಗಳು
ವೇತನಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ.1000/- ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು
10ನೇ ಪದವಿ ಆದವರಿಗೆ ಇಲ್ಲಿವೆ ಕಿರಿಯ ಸಹಾಯಕ ಹಾಗೂ ಸಿಪಾಯಿ ಹುದ್ದೆಗಳು
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ದಾಖಲೆ ಪರಿಶೀಲನೆ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಉಡುಪಿ ಜಿಲ್ಲೆಯ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ 26 ಜೂನಿಯರ್ ಅಸಿಸ್ಟಂಟ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 08/12/2022 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. Teachers’ Co-operative Bank
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 22 ನವೆಂಬರ್ 2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 8 ಡಿಸೆಂಬರ್ 2022 |
ಪ್ರಮುಖ ಲಿಂಕುಗಳು |
ಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |