ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನೇಮಕಾತಿ 2021

 

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನೇಮಕಾತಿ 2020, ಒಟ್ಟು 38 ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಇಲಾಖೆಯು ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 31 2021 ರಂದು ಕೊನೆಗೊಳ್ಳುತ್ತದೆ.

ಹುದ್ದೆಗಳ ವಿವರಗಳು :
ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) – 35 ಹುದ್ದೆಗಳು
ಪಿಪಿಪಿ ಸ್ಪೆಷಲಿಸ್ಟ್- 01 ಹುದ್ದೆ
ಹೆರಿಟೇಜ್ ಸಲಹೆಗಾರರು – 01 ಹುದ್ದೆ
ಮಾನವ ಸಂಪನ್ಮೂಲ(HR) ಅಧಿಕಾರಿ- 01 ಹುದ್ದೆ
ಒಟ್ಟು 38 ಹುದ್ದೆಗಳು

 

 

ಉದ್ಯೋಗ ಸ್ಥಳ: ಕರ್ನಾಟಕ

ಆಯ್ಕೆ ವಿಧಾನ – ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆಪಟ್ಟಿ ತಯಾರಿಸಿ, ಮೂಲ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವಿದ್ಯಾರ್ಹತೆ: ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗಳಿಗೆ : – MBA ಅಥವಾ ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯದಲ್ಲಿ ಕನಿಷ್ಠ 55% ಒಟ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 3 ವರ್ಷಗಳು ’ ಪ್ರವಾಸೋದ್ಯಮದಲ್ಲಿ ಕೆಲಸದ ಅನುಭವ ಹೊಂದಿರಬೇಕು.

ಪಿಪಿಪಿ ತಜ್ಞರ ಸ್ಥಾನ: 01 ಹುದ್ದೆ :AICTE, UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ ಹಣಕಾಸು ಪರಿಣತಿಯೊಂದಿಗೆ MBA, PGDM ವಿದ್ಯಾರ್ಹತೆಯನ್ನು ಹೊಂದಿರಬೇಕು. ಮತ್ತು ಪಿಪಿಪಿ ಯೋಜನೆಗಳಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ಪಾರಂಪರಿಕ ಸಲಹೆಗಾರರ ಸ್ಥಾನ: 01 :BE / Btech ಪದವಿಯನ್ನು ಸಿವಿಲ್ ಎಂಜಿನಿಯರಿಂಗ್, B Arch ವಿಭಾಗದಲ್ಲಿ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ಮತ್ತು ಪಾರಂಪರಿಕ ಯೋಜನೆಗಳಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

 

 

ವಯೋಮಿತಿ:
ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ- 25 ವರ್ಷಗಳನ್ನು ಹಾಗು ಗರಿಷ್ಠ – 38 ವರ್ಷಗಳನ್ನು ಮೀರಿರಬಾರದು.

ಪಿಪಿಪಿ ತಜ್ಞರ ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ – 25 ವರ್ಷಗಳನ್ನು ಮತ್ತು ಗರಿಷ್ಠ- 50 ವರ್ಷಗಳನ್ನು ಮೀರಿರಬಾರದು.

ಹೆರಿಟೇಜ್  ಸಲಹೆಗಾರರ ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ- 25 ವರ್ಷಗಳನ್ನು ಮತ್ತು ಗರಿಷ್ಠ – 50 ವರ್ಷಗಳನ್ನೂ ಮೀರಿರಬಾರದು.

ವೇತನ ಶ್ರೇಣಿ: ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು -30,000/- ರೂ ಗಳ ವರೆಗೆ

ಪಿಪಿಪಿ ತಜ್ಞರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 50,000/- ರೂ ಗಳ ವರೆಗೆ ಮತ್ತು
ಹೆರಿಟೇಜ್ ಸಲಹೆಗಾರರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 50,000/- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನೀಡಿರುವ ಅರ್ಜಿ ನಮೂನೆಯಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಮೂಲ ದಾಖಲೆಗಳೊಂದಿಗೆ ktilrecruitment@gmail.com ಗೆ ಮೇಲ್ ಮಾಡುವುದರ ಮುಖಾಂತರ ದಿನಾಂಕ ಜನವರಿ 31, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

 

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಜನವರಿ 2021

ವೆಬ್ಸೈಟ್ 
ನೋಟಿಫಿಕೇಶನ್ – ಅರ್ಜಿ ಫಾರ್ಮ್ 

KTIL Recruitment 2021 notification Apply for 38 DTC, Heritage Advisor  Posts

error: Content is protected !!