ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಖಾಲಿ ಇರುವ 35 ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 3,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ:
– ಸಾರ್ವಜನಿಕ ಅರೋಗ್ಯ ತಜ್ಞ – 17 ಹುದ್ದೆಗಳು
– ಸಹಾಯಕ ಪ್ರಾಧ್ಯಾಪಕ – 1 ಹುದ್ದೆ
– ವೈದ್ಯಕೀಯ ಅಧಿಕಾರಿ – 2 ಹುದ್ದೆಗಳು
– ಸ್ಟಾಫ್ ನರ್ಸ್ – 2 ಹುದ್ದೆಗಳು
– ಅಸಿಸ್ಟೆಂಟ್ ಡೈರೆಕ್ಟರ್ – 13 ಹುದ್ದೆಗಳು
ಒಟ್ಟು 35 ಹುದ್ದೆಗಳು
ಆಯ್ಕೆ ವಿಧಾನ- ಈ ನೇಮಕಾತಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಆಯ್ಕೆಪಟ್ಟಿ, ನೇರ ಸಂದರ್ಶನ ಮತ್ತು ಮೂಲ ದಾಖಲೆಗಳ ಪರಿಶೀಲನೆ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುವುದು.
ವಿದ್ಯಾರ್ಹತೆ:- ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್/ಪೋಸ್ಟ್ ಗ್ರಾಜುಯೇಟ್, ಎಂ.ಎಸ್ಸಿ ನರ್ಸಿಂಗ್, ಪಿಯುಸಿ/ಜಿಎನ್ಎಂ, ಬಿ.ಎಸ್ಸಿ ನರ್ಸಿಂಗ್ ಮತ್ತು ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ- 25/-ರೂ ಅನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಮತ್ತು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ- ಯಾವುದೇ ಅರ್ಜಿ ಶುಲ್ಕವನ್ನುಇರುವುದಿಲ್ಲ.
ವಯೋಮಿತಿ – ಅಭ್ಯರ್ಥಿಗಳು ಕನಿಷ್ಠ -30 ವರ್ಷ ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ- 40 ವರ್ಷ ವಯೋಮಿತಿಯನ್ನು ಮೀರಿರಬಾರದು.
ವೇತನ ಶ್ರೇಣಿ: ಈ ನೇಮಕಾತಿಯ ಕುರಿತಾದ ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಓದಬಹುದಾಗಿದೆ.
ಪ್ರಮುಖ ದಿನಾಂಕಗಳು:
– ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ನವೆಂಬರ್ 16, 2020
– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 3, 2020
– ಅರ್ಜಿ ಪ್ರಿಂಟೌಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: ಡಿಸೆಂಬರ್ 4, 2020
ವೆಬ್ಸೈಟ್ – Website |
ನೋಟಿಫಿಕೇಶನ್ – Notification |
ಅರ್ಜಿ ಲಿಂಕ್ – Apply Online |