ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ನಿರ್ಮಿತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | Nirmithi Kendra Recruitment 2022

ವಿಜಯನಗರ ನಿರ್ಮಿತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Vijayanagara Nirmithi Kendra Recruitment 2022: ವಿಜಯನಗರ ನಿರ್ಮಿತಿ ಕೇಂದ್ರ(Vijayanagara Nirmithi Kendra) ಇಲ್ಲಿ ಅಗತ್ಯ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್​(Online) ಅರ್ಜಿ ಸಲ್ಲಿಸಬಹುದು. ಜನವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ballari.nic.in ಗೆ ಭೇಟಿ ನೀಡಿ.

ಸಂಸ್ಥೆ: ವಿಜಯನಗರ ನಿರ್ಮಿತಿ ಕೇಂದ್ರ
ಹುದ್ದೆಯ ಹೆಸರು: ಅಕೌಂಟೆಂಟ್ ಮತ್ತು ಅಸಿಸ್ಟೆಂಟ್ ಅಕೌಂಟೆಂಟ್
ಒಟ್ಟು ಹುದ್ದೆಗಳು: 02
ಉದ್ಯೋಗದ ಸ್ಥಳ ವಿಜಯನಗರ-ಕರ್ನಾಟಕ

ವಿದ್ಯಾರ್ಹತೆ:
ವಿಜಯನಗರ ನಿರ್ಮಿತಿ ಕೇಂದ್ರದ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಕಾಂ ಪದವಿ ಪಡೆದಿರಬೇಕು.

ಇದನ್ನೂ ಓದಿ – RAILWAY JOBS 2022: ಕರ್ನಾಟಕ ರೈಲ್ವೆ ನೇಮಕಾತಿ 2022

ಅನುಭವ:
ಅಕೌಂಟೆಂಟ್: ಅಭ್ಯರ್ಥಿಗಳು Tally, MS Office ಮತ್ತು ಆದಾಯ ತೆರಿಗೆ ಮತ್ತು GST ಹಾಗೂ ಇತರ ಶಾಸನಬದ್ಧ ಅನುಸರಣೆಯ ಪ್ರಾಯೋಗಿಕ ಜ್ಞಾನವನ್ನು ಹೊಂದಿರಬೇಕು.

ಸಹಾಯಕ ಅಕೌಂಟೆಂಟ್: ಅಭ್ಯರ್ಥಿಗಳು ಟ್ಯಾಲಿ, ಎಂಎಸ್ ಆಫೀಸ್ ಮತ್ತು ಟೈಪಿಂಗ್ ಮಾಡುವ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ:
ವಿಜಯನಗರ ನಿರ್ಮಿತಿ ಕೇಂದ್ರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು ಡಿಸೆಂಬರ್ 31, 2021ಕ್ಕೆ 35 ವರ್ಷ ಮೀರಿರಬಾರದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ದಿನಾಂಕ 07/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/01/2022

OFFICIAL WEBSITE
NOTIFICATION PDF
APPLY ONLINE
close button