ಎಸೆಸೆಲ್ಸಿ ಪದವಿ ಪಾಸಾದವರಿಗೆ ಡಿಸಿಸಿ ಬ್ಯಾಂಕ್ ನೇಮಕಾತಿ 2022 | DCC Bank Recruitment 2022

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ 2022

Vijayapura DCC Bank Recruitment 2022 : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ವಿಜಯಪುರದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು  71
ಅರ್ಜಿ ಸಲ್ಲಿಸುವ ಬಗೆ  ಆಫ್ಲೈನ್ 

ಹುದ್ದೆಗಳು: ಹಿರಿಯ ವ್ಯವಸ್ಥಾಪಕರು, ಕಿರಿಯ ವ್ಯವಸ್ಥಾಪಕರು, ಕಂಪ್ಯೂಟರ್ ಇಂಜಿನಿಯರ್, ಕ್ಷೇತ್ರಾಧಿಕಾರಿಗಳು, ಕೃಷಿ ಅಭಿವೃದ್ಧಿ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು, ಜವಾನ, ಸೆಕ್ಯೂರಿಟಿ ಗಾರ್ಡ್

ಹುದ್ದೆಗಳು ಹುದ್ದೆಗಳ ಸಂಖ್ಯೆ ಮತ್ತು ವೇತನಶ್ರೇಣಿ 

ಹಿರಿಯ ವ್ಯವಸ್ಥಾಪಕರು 3 ಹುದ್ದೆಗಳು
ವೇತನಶ್ರೇಣಿ ರೂ.45,300-88,300

ಕಿರಿಯ ವ್ಯವಸ್ಥಾಪಕರು 5 ಹುದ್ದೆಗಳು
ವೇತನಶ್ರೇಣಿ ರೂ.43,100-83,900

ಕಂಪ್ಯೂಟರ್ ಇಂಜಿನಿಯರ್ 1 ಹುದ್ದೆಗಳು
ವೇತನಶ್ರೇಣಿ ರೂ.43,100-83,900

ಕ್ಷೇತ್ರಾಧಿಕಾರಿಗಳು 15 ಹುದ್ದೆಗಳು
40,900-70,200

ಕೃಷಿ ಅಭಿವೃದ್ಧಿ ಅಧಿಕಾರಿ 1 ಹುದ್ದೆಗಳು
ವೇತನಶ್ರೇಣಿ ರೂ.40,900-70,200

ಪ್ರಥಮ ದರ್ಜೆ ಸಹಾಯಕ 21 ಹುದ್ದೆಗಳು
ವೇತನಶ್ರೇಣಿ ರೂ.33,450-62,600

ಜವಾನ 23 ಹುದ್ದೆಗಳು
ವೇತನಶ್ರೇಣಿ ರೂ.23,500-47,650

ಸೆಕ್ಯೂರಿಟಿ ಗಾರ್ಡ್ 2 ಹುದ್ದೆಗಳು
ವೇತನಶ್ರೇಣಿ ರೂ.23,500-47,650

ಉದ್ಯೋಗ ಸುದ್ದಿ: ನೋಂದಣಿ ಮತ್ತು ಮುದ್ರಂಕ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 

ಶೈಕ್ಷಣಿಕ ವಿದ್ಯಾರ್ಹತೆ:
• ಹಿರಿಯ ವ್ಯವಸ್ಥಾಪಕರು ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 3 ವರ್ಷ ಬ್ಯಾಂಕಿನಲ್ಲಿ ವ್ಯವಸ್ಥಾಪಕ ದರ್ಜೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
• ಕಿರಿಯ ವ್ಯವಸ್ಥಾಪಕರು ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 3 ವರ್ಷ ಬ್ಯಾಂಕಿನಲ್ಲಿ ಕ್ಷೇತ್ರಾಧಿಕಾರಿ ದರ್ಜೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
• ಕಂಪ್ಯೂಟರ್ ಇಂಜಿನಿಯರ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಬಿ.ಇ (ಕಂಪ್ಯೂಟರ್ ಸೈನ್ಸ್/ಇ ಮತ್ತು ಸಿ)/ಎಂ.ಸಿ.ಎ ಪದವಿ ಪಡೆದಿರಬೇಕು.
• ಕ್ಷೇತ್ರಾಧಿಕಾರಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 2 ವರ್ಷ ಬ್ಯಾಂಕಿನಲ್ಲಿ ಗುಮಾಸ್ತರ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
• ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಬಿ.ಎಸ್ಸಿ (ಅಗ್ರಿ) ಪದವಿ ಪಡೆದಿರಬೇಕು.
• ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು. ಕಂಪ್ಯೂಟರ್ ತರಬೇತಿ, ಸಹಕಾರ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಅರ್ಹತೆ ಮೇಲೆ ಆದ್ಯತೆ ನೀಡಲಾಗುವುದು.
• ಜವಾನ ಮತ್ತು ಸೆಕ್ಯೂರಿಟಿ ಗಾರ್ಡ್ ಹುದ್ದೆಗೆ ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು.

 

 

ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ,
ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ,
ಪ.ಜಾತಿ/ ಪ.ಪಂ/ ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ರೂ. 500 ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ಮಾಜಿ ಸೈನಿಕ ಅಭ್ಯರ್ಥಿಗಳು ರೂ. 250 ಪಾವತಿಸಬೇಕು

ಆಯ್ಕೆ ವಿಧಾನ 
 ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1:20ರ ಅನುಪಾತದಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ 85ಕ್ಕೆ ಇಳಿಸಿ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಇದರೊಂದಿಗೆ ಕಂಪ್ಯೂಟರ್ ಇಂಜಿನಿಯರ ಹಾಗೂ ಕೃಷಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಪ್ರಾವಿಣ್ಯತೆ ಪರೀಕ್ಷೆ ನಡೆಸಲಾಗುವುದು. (ಜವಾನ/ಸೆಕ್ಯೂರಿಟಿ ಗಾರ್ಡ್ ಹುದ್ದೆಗಳಿಗೆ ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು)

ಅರ್ಜಿ ಸಲ್ಲಿಸುವ ವಿಳಾಸ : ಸಂಚಾಲಕ ಸದಸ್ಯರು, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಸೋಲಾಪುರ ರಸ್ತೆ, ವಿಜಯಪುರ

 

 

ಪ್ರಮುಖ ದಿನಾಂಕಗಳು
ಬ್ಯಾಂಕಿನಿಂದ ಅರ್ಜಿ ಪಡೆಯಲು ಪ್ರಾರಂಭದ ದಿನಾಂಕ ಫೆಬ್ರುವರಿ 15, 2022
ಬ್ಯಾಂಕಿನಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ ಮಾರ್ಚ್ 02, 2022
ಬ್ಯಾಂಕಿನಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ ಮಾರ್ಚ್ 05, 2022
ಪ್ರಮುಖ ಲಿಂಕುಗಳು 
ನೋಟಿಫಿಕೇಶನ್  Click Here 

 

error: Content is protected !!