ವಿಜಯಪುರ ಜಿಲ್ಲೆಯ ರಾಜ್ಯ ಬಾಲಕಾರ್ಮಿಕ ಯೋಜನೆಯಡಿಯಲ್ಲಿ ಖಾಲಿ ಇರುವ ಒಟ್ಟು 03 ಯೋಜನಾ ನಿರ್ದೇಶಕರು, ಗುಮಾಸ್ತ ಕಂ ಲೆಕ್ಕಿಗ ಮತ್ತು ಜವಾನ್ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ ಏಪ್ರಿಲ್ 12, 2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 3
ಉದ್ಯೋಗ ಸ್ಥಳ: ವಿಜಯಪುರ ಜಿಲ್ಲೆ
ವಿದ್ಯಾರ್ಹತೆ:
ಯೋಜನಾ ನಿರ್ದೇಶಕರು ಹುದ್ದೆಗಳಿಗೆ : ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ MSW / and Computer knowledge (M .S .Office and Internet operation ಕಡ್ಡಾಯ )
ಗುಮಾಸ್ತ ಕಂ ಲೆಕ್ಕಿಗ ಹುದ್ದೆಗಳಿಗೆ : B .Com and ಮತ್ತು Computer knowledge ( M .S .Office and Internet operation ಕಡ್ಡಾಯ )
ಜವಾನ್ ಹುದ್ದೆಗಳಿಗೆ : ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ – 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ವೇತನ ಶ್ರೇಣಿ:
– ಯೋಜನಾ ನಿರ್ದೇಶಕರ : ಮಾಸಿಕ 19,965 /- ರೂ ಗಳು
– ಗುಮಾಸ್ತ ಕಂ ಲೆಕ್ಕಿಗ : ಮಾಸಿಕ 13,310 /- ರೂ ಗಳು ಮತ್ತು
– ಜವಾನ್ : ಮಾಸಿಕ 10,648 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.
ಆಯ್ಕೆ ವಿಧಾನ:
ಹುದ್ದೆಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
– ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಭರ್ತಿ ಮಾಡಿ ಎಲ್ಲ ಮೂಲ ದಾಖಲೆಗಳಿಗೆ ಗಜೆಟೆಡ್ ಅಧಿಕಾರಿಗಳಿಂದ ಧೃಡೀಕೃತವಾದ ದಾಖಲೆಗಳನ್ನೂ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬಹುದು.
* ಅರ್ಜಿ ಸಲ್ಲಿಸಬೇಕಾದ ಕಛೇರಿಯ ವಿಳಾಸ :
ಬಾಲಕಾರ್ಮಿಕ ಯೋಜನಾ ಕಛೇರಿ,
ಕಾರ್ಮಿಕ ಇಲಾಖೆ,
ಅಲ್ಲಾಪುರ ಓಣಿ ಸಿಂದಗಿ ನಾಕ,
ವಿಜಯಪುರ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ಎಪ್ರಿಲ್ 2021