ವೇಗವಾಗಿ ದೇಹದ ತೂಕ ಇಳಿಸಲು ಈಗಲೇ ಈ ಜ್ಯೂಸ್ ಕುಡಿಯಿರಿ । Weight Loss Tips In Kannada

ತೂಕ ಇಳಿಸಬೇಕೇ ಹಾಗಿದ್ದರೆ ಯಾವ ಜ್ಯೂಸ್ ಕುಡಿಯಬೇಕು ತಿಳಿದುಕೊಳ್ಳಿ

ಪ್ರತಿಯೊಬ್ಬರಿಗೂ ಜೀವನದಲ್ಲಿ ಬೇರೆ ಬೇರೆ ರೀತಿಯ ಆಶೆಗಳಿರುತ್ತವೆ.ಅದರಲ್ಲೂ ದೇಹದ ತೂಕ ಇಳಿಸುವದು ಕೂಡಾ ಒಂದು.ನಾನು ಸುಂದರವಾಗಿರಬೇಕು, ಸ್ಲಿಮ್ ಆಗಿರಬೇಕು ಎಂದು ಕೊಳ್ಳುವದು ಸರ್ವೇ ಸಾಮಾನ್ಯ ಅದರಲ್ಲೂ ದೇಹದ ತೂಕ ಇಳಿಸಿಕೊಳ್ಳಲು ನೀವು ಹಲವಾರು ರೀತಿಯ ವ್ಯಾಯಾಮಗಳು ಹಾಗೂ ಆಹಾರ ಕ್ರಮಗಳನ್ನು ಅನುಸರಿಸಿಕೊಂಡು ಹೋಗಿರಬಹುದು.

 

 

ದೇಹದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸಾದ್ಯವಿಲ್ಲ. ಅದಕ್ಕೆ ಸಾಕಷ್ಟು ಪ್ರಯತ್ನವೂ ಬೇಕಾಗುತ್ತದೆ. ವಿಶೇಷವಾಗಿ ನಾವು ತಿನ್ನುವಂತಹ ಆಹಾರ ಮತ್ತು ಕುಡಿಯಲು ಪಾನೀಯಗಳನ್ನು ವಿಶೇಷವಾಗಿ ಆಯ್ಕೆ ಮಾಡಬೇಕು. ಅವುಗಳು ಪೌಷ್ಟಿಕಾಂಶದ ಜೊತೆಗೆ ದೇಹದಲ್ಲಿ ಕೊಬ್ಬನ್ನು ಕರಗಿಸಬೇಕು ಮತ್ತು ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ದೇಹದ ತೂಕ ಇಳಿಸಲು ಬಯಸುವವರು ಕೆಲವೊಂದು ಜ್ಯೂಸ್ ಕುಡಿದರೆ ಅದು ಖಂಡಿತವಾಗಿಯೂ ನೆರವಾಗಲಿದೆ.ಜ್ಯೂಸ್ ಕುಡಿದರೆ ಅದರಿಂದ ಹೆಚ್ಚಿನ ಪ್ರಮಾಣ ಖನಿಜಾಂಶಗಳು, ವಿಟಮಿನ್ ಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ದೇಹಕ್ಕೆ ಲಭ್ಯವಾಗುವುದು. ಇದು ಚಯಾಪಚಯ ಕ್ರಿಯೆಗೆ ವೇಗ ನೀಡುವ ಕಾರಣದಿಂದಾಗಿ ಅದು ಕ್ಯಾಲರಿ ದಹಿಸಲು ನೆರವಾಗುವುದು.ಯಾವ ಜ್ಯೂಸ್ ಕುಡಿದರೆ ತೂಕ ಇಳಿಸಿಕೊಳ್ಳಬಹುದು.

ಹಾಗಲಕಾಯಿ ಜ್ಯೂಸ್
ಹಾಗಲಕಾಯಿ ತುಂಬಾ ಕಹಿ ಇರುವ ಕಾರಣದಿಂದಾಗಿ ಅದರ ಜ್ಯೂಸ್ ಕುಡಿಯಲು ಹೆಚ್ಚಿನವರು ಹಿಂಜರಿಯುವರು. ಆದರೆ ಇದು ತೂಕ ಕಳೆದುಕೊಳ್ಳಲು ಸಹಕಾರಿ ಆಗಿರುವುದು. ನಿಯಮಿತವಾಗಿ ಹಾಗಲಕಾಯಿ ಜ್ಯೂಸ್ ಕುಡಿದರೆ ಅದರಿಂದ ಯಕೃತ್ ಪಿತ್ತರಸದ ಉತ್ಪತ್ತಿ ಉತ್ತೇಜಿಸುವುದು ಮತ್ತು ಕೊಬ್ಬು ಕರಗಿಸಲು ಸಹಕಾರಿ ಆಗುವುದು. ಹಾಗಲಕಾಯಿಯಲ್ಲಿ ಕಡಿಮೆ ಕ್ಯಾಲರಿ ಇದೆ. 100 ಗ್ರಾಂ ಹಾಗಲಕಾಯಿಯಲ್ಲಿ ಕೇವಲ 17ರಷ್ಟು ಕ್ಯಾಲರಿ ಮಾತ್ರ ಇದೆ.

ಸೌತೆಕಾಯಿ ಜ್ಯೂಸ್
ಅಧಿಕ ನೀರಿನಾಂಶವಿರುವಂತಹ ಆಹಾರದಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವುದು. ತೂಕ ಇಳಿಸಲು ಕ್ಯಾಲರಿ ಕಡಿಮೆ ಸೇವಿಸಬೇಕು ಅಥವಾ ಕ್ಯಾಲರಿ ಹೆಚ್ಚು ದಹಿಸಬೇಕು. ಇದರಿಂದ ಕ್ಯಾಲರಿ ಕಡಿಮೆ ಇರುವ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಇದರಿಂದ ಹೊಟ್ಟೆ ದೀರ್ಘಕಾಲ ತುಂಬಿರುವುದು. ಅಧಿಕ ನೀರಿನಾಂಶ ಮತ್ತು ನಾರಿನಾಂಶವು ಇರುವ ಕಾರಣದಿಂದಾಗಿ ಇದು ಬೇಗನೆ ಹೊಟ್ಟೆ ತುಂಬುವಂತೆ ಮಾಡುವುದು. ಇದಕ್ಕೆ ಲಿಂಬೆ ರಸ ಮತ್ತು ಪುದೀನಾ ಎಲೆಗಳನ್ನು ಹಾಕಿದರೆ ಆಗ ಇದರ ರುಚಿ ಅದ್ಭುತವಾಗಿ ಇರುವುದು.

ಕ್ಯಾರೆಟ್ ಜ್ಯೂಸ್
ಕ್ಯಾರೆಟ್​ನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಅಡಕವಾಗಿರುತ್ತದೆ. ಹೀಗಾಗಿ ಕ್ಯಾರೆಟ್​ ಜ್ಯೂಸ್​​ ಸೇವನೆಯಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.

 

 

ನೆಲ್ಲಿಕಾಯಿ ಜ್ಯೂಸ್​
ಖಾಲಿಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್​ಅನ್ನು ಸೇವಿಸಿದರೆ ನಿಮ್ಮ ಚಯಾಪಚಯಕ್ಕೂ ಉತ್ತಮ ಆಹಾರಾವಗುತ್ತದೆ. ಜತೆಗೆ ದೇಹದ ತೂಕ ನಿಯಂತ್ರಣಕ್ಕೂ ಇದು ನೆರವಾಗಲಿದೆ. ನೆನಪಿಡಿ ನೆಲ್ಲಿಕಾಯಿ ಹುಳಿ ಅಂಶವಿರುವ ಆಹಾರವಾದ್ದರಿಂದ ಪಿತ್ತದ ದೇಹ ಪ್ರಕೃತಿಯುಳ್ಳವರು ಸೇವಿಸುವ ಮುನ್ನ ಎಚ್ಚರವಹಿಸಿ ಸೇವಿಸಿ.

ದಾಳಿಂಬೆ ಜ್ಯೂಸ್​
ದಾಳಿಂಬೆ ಹಣ್ಣಿನ ಸೇವನೆಯಿಂದ ದೇಹಕ್ಕೆ ಹಲವು ವಿಧಧ ಪೌಷ್ಟಿಕಾಂಶ ದೊರೆಯಲಿದೆ. ಅಲ್ಲದೆ ದಾಳಿಂಬೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್​ ಅಂಶ ಮತ್ತು ಸಂಯೋಜಿತ ಲಿನೋಲೆನಿಕ್ ಆಮ್ಲ ದೇಹದಲ್ಲಿದ ಕೊಬ್ಬನ್ನು ಕರಗಿಸುತ್ತದೆ.

ಕ್ಯಾಬೇಜ್ ಜ್ಯೂಸ್
ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಹಿತ ಹೊಟ್ಟೆಯ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಇದು ಜೀರ್ಣಕ್ರಿಯೆ ವ್ಯವಸ್ಥೆ ಶುಚಿಗೊಳಿಸುವುದು ಮತ್ತು ಕಲ್ಮಷ ಹೊರಹಾಕಲು ನೆರವಾಗುವುದು. ಇದು ತೂಕ ಕಳೆದುಕೊಳ್ಳಲು ಸಹಕಾರಿ ಆಗಿರುವುದು. ನಾರಿನಾಂಶವನ್ನು ಅಧಿಕವಾಗಿ ಸೇವನೆ ಮಾಡಿದರೆ ಅದರಿಂದ ಕೊಬ್ಬು ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ನಾರಿನಾಂಶವು ಅಧಿಕವಾಗಿ ಇರುವಂತಹ ತರಕಾರಿಯು ದೇಹದಲ್ಲಿನ ನಾರಿನಾಂಶವನ್ನು ಹೀರಿಕೊಳ್ಳುವುದು ಮತ್ತು ಜೀರ್ಣಕ್ರಿಯೆ ವೇಳೆ ಲೋಳೆಯಂತಹ ಪದರ ನಿರ್ಮಾಣ ಮಾಡುವುದು. ಇದರಿಂದಾಗಿ ಜಿರ್ಣಕ್ರಿಯೆಯು ನಿಧಾನವಾಗುವುದು ಮತ್ತು ದೀರ್ಘಕಾಲ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು ಎಂದು ತಜ್ಞರು ಹೇಳುತ್ತಾರೆ. ಕ್ಯಾಬೇಜ್ ಜತೆಗೆ ಸೇಬು ಮತ್ತು ಲಿಂಬೆ ಹಾಕಿಕೊಂಡು ಜ್ಯೂಸ್ ಮಾಡಿಕೊಳ್ಳಬಹುದು.

 

 

ಕಲ್ಲಂಗಡಿ ಜ್ಯೂಸ್
ಕಲ್ಲಂಗಡಿ ಜ್ಯೂಸ್ ನಲ್ಲಿ 100 ಗ್ರಾಂನಲ್ಲಿ ಕೇವಲ 30 ಕ್ಯಾಲರಿ ಮಾತ್ರ ಇದೆ ಮತ್ತು ಇದು ದೇಹವನ್ನು ತೇವಾಂಶದಿಂದ ಇಡುತ್ತದೆ. ಇದರಲ್ಲಿ ಅಮಿನೋ ಆಮ್ಲವು ಸಮೃದ್ಧವಾಗಿದೆ ಮತ್ತು ಇದು ದೇಹದ ಕೊಬ್ಬು ಇಳಿಸಲು ಸಹಕಾರಿಯಾಗುತ್ತೆ.

ಕಿತ್ತಳೆ ಜ್ಯೂಸ್
ತಾಜಾ ಕಿತ್ತಳೆ ಜ್ಯೂಸ್ ತುಂಬಾ ಆರೋಗ್ಯಕಾರಿ ಆಗಿರುವುದು. ಇದರಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ. ಕಿತ್ತಳೆಯನ್ನು ಕಡಿಮೆ ಕ್ಯಾಲರಿ ಇರುವಂತಹ ಹಣ್ಣು ಎಂದು ಪರಿಗಣಿಸಲಾಗಿದೆ. ದೇಹಕ್ಕೆ ದಹಿಸಲು ಬೇಕಾಗಿರುವ ಕ್ಯಾಲರಿಗಿಂತಲೂ ಇದರಲ್ಲಿ ಕಡಿಮೆ ಕ್ಯಾಲರಿ ಇದೆ. ಇದರಿಂದ ಇದನ್ನು ತಿಂದರೆ ಹೆಚ್ಚು ಕ್ಯಾಲರಿ ದಹಿಸಬಹುದು.

ಸೋರೆ ಕಾಯಿ ಜ್ಯೂಸ್
ಇದು ತೂಕ ಇಳಿಸಲು ತುಂಬಾ ಒಳ್ಳೆಯ ಜ್ಯೂಸ್. ಕೊಬ್ಬು ಕರಗಿಸಲು ಇದು ತುಂಬಾ ನೈಸರ್ಗಿಕ ವಿಧಾನ ಎಂದು ಆಯುರ್ವೇದದಲ್ಲಿ ಕೂಡ ಹೇಳಲಾಗಿದೆ. ಸೋರೆಕಾಯಿಯಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ ಮತ್ತು ಯಾವುದೇ ಕೊಬ್ಬು ಇಲ್ಲ ಮತ್ತು ಇದರಿಂದಾಗಿ ದೇಹವು ತಂಪಾಗಿರುವುದು. ಈ ಜ್ಯೂಸ್ ನ್ನು ನೀವು ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ನೀವು ಇದರ ಲಾಭ ಪಡೆಯಬಹುದು.

 

error: Content is protected !!