ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಕರ ಹುದ್ದೆಗಳ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಉಡುಗೊರೆಯೊಂದು ನೀಡಿದೆ. ಕರ್ನಾಟಕದಲ್ಲಿ ಶೀಘ್ರದಲ್ಲೇ ಒಟ್ಟು 15 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಹಸಿರು ನಿಶಾನೆ ತೋರಿಸಿದೆ, ಇದಕ್ಕೆ ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿದೆ.
ಕಳೆದ ನವೆಂಬರ್ ಮೊದಲ ವಾರದಲ್ಲಿ ಒಟ್ಟು 5 ಶಿಕ್ಷಕರ ನೇಮಕಾತಿಗೆ ಇಲಾಖೆ ಮಾಹಿತಿ ನೀಡಿತ್ತು. ನಂತರದಲ್ಲಿ ರಾಜ್ಯದಲ್ಲಿ ಶಿಕ್ಷಕರ ಕೊರತೆ, ಶಿಕ್ಷಣದ ಗುಣಮಟ್ಟ ಕಾಪಾಡುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ನಿನ್ನೆ ಇನ್ನೂ 10 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಬಿಎ ಬಿ.ಇಡಿ, D.Ed ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ.
ಹುದ್ದೆಗಳ ವಿವರ
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ಪದವೀಧರ ಪ್ರಾಥಮಿಕ ಶಾಲಾ (6 ರಿಂದ 8) ಶಿಕ್ಷಕರ 10,000 ಹುದ್ದೆಗಳ ಭರ್ತಿ. ಮತ್ತು
ಕಲ್ಯಾಣ ಕರ್ನಾಟಕ ವೃಂದದ ಪದವೀಧರ ಪ್ರಾಥಮಿಕ ಶಾಲಾ (6 ರಿಂದ 8) ಶಿಕ್ಷಕರ 5,000 ಹುದ್ದೆಗಳ ಭರ್ತಿ ಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.
ನೇಮಕಾತಿ ಅಧಿಸೂಚನೆ ಯಾವಾಗ?
ಒಟ್ಟು 15 ಸಾವಿರ ಶಿಕ್ಷಕ ಹುದ್ದೆಗಳ ಭರ್ತಿಗೆ ಅಧಿಕೃತ ಘೋಷಣೆ ನೀಡಿರುವ ಕಾರಣ ಯಾವುದೇ ಸಂದರ್ಭದಲ್ಲಿ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಲಿದೆ.
ಶಿಕ್ಷಣ ಇಲಾಖೆಯು ಪ್ರಸ್ತುತ ಅರ್ಜಿ ಸ್ವೀಕೃತಿ ಮತ್ತು ನೇಮಕ ಪ್ರಕ್ರಿಯೆಯ ಪರೀಕ್ಷೆಗಳಿಗೆ ವೇಳಾಪಟ್ಟಿ ನಿಗದಿ ಹಾಗೂ ಮೀಸಲಾತಿ ವಿವರಗಳ ನಿಖರ ಪಟ್ಟಿಯನ್ನು ಅಧಿಸೂಚನೆಯಲ್ಲಿ ನೀಡುವ ಕಾರ್ಯದಲ್ಲಿ ತೊಡಗಿದೆ ಎಂದು ಮೂಲಗಳಿಂದ ತಿಳಿದಿದೆ.
ಶಿಕ್ಷಕರ ಕೊರತೆ ನೀಗಿಸಿ ಶಿಕ್ಷಣದ ಗುಣಮಟ್ಟ ಕಾಪಾಡಲು ಈಗಾಗಲೇ 23 ಸಾವಿರ ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲಾಗಿದೆ.
ಮತ್ತಷ್ಟು ಅತಿಥಿ ಶಿಕ್ಷಕರ ನೇಮಕ
ಈಗ 15 ಸಾವಿರ ಶಿಕ್ಷಕರ ನೇರ ನೇಮಕಾತಿ ಜತೆಗೆ 4 ಸಾವಿರ ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲು ಸರ್ಕಾರ ನಿರ್ಧರಿಸಿದೆ.
ರಾಜ್ಯಾದ್ಯಂತ 22,150 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು, 3,453 ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಹಾಗೂ 3,500ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಪೋಸ್ಟ್‌ಗಳು ಖಾಲಿ ಇವೆ ಎಂದು 2020 ರ ಜನವರಿ ಮಾಹೆಯಲ್ಲಿ ವಿಜಯ ಕರ್ನಾಟಕ ವರದಿ ಮಾಡಿತ್ತು. ಅದರ ಲಿಂಕ್ ಕೆಳಗಿನಂತಿದೆ.
NOTIFICATION PDF |