60 ವರ್ಷ ದಾಟಿದ ಕರ್ನಾಟಕದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್!
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರಿಗೆ ಸಾಕಷ್ಟು ಲಾಭದಾಯಕವಾಗಿದ್ದು ಇದರ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಸರ್ಕಾರಿ ಬಸ್ಗಳಲ್ಲಿ ಹಿರಿಯ ನಾಗರಿಕರಿಗೂ (Senior Citizen) ಮತ್ತು ಮಕ್ಕಳಿಗೂ ಸಹಿತ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು ಎಂಬ ಸಾಕಷ್ಟು ಮನವಿಗಳು ಕೂಡ ಬಂದಿದ್ದು ಈಗಾಗಲೇ ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಮುಂದಾಗಿದೆ.
ಈ ಶಕ್ತಿ ಯೋಜನೆಯ ಅನುಕೂಲಗಳು ಸಾಕಷ್ಟು ಮಹಿಳೆಯರಿಗೆ ಒದಗಿ ಬಂದಿದ್ದು ಇದೀಗ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೂ ಕೂಡ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಲು ಉಚಿತ ಪ್ರಯಾಣ (Free Bus) ವ್ಯವಸ್ಥೆ ಅಗತ್ಯವಿದೆ. ಮಹಿಳೆಯರಿಗೆ ನೀಡಿದ್ದ ಶಕ್ತಿ ಯೋಜನೆ ಅಂದರೆ ಮಹಿಳೆಯರ ಉಚಿತ ಬಸ್ ಪ್ರಯಾಣ ವ್ಯವಸ್ಥೆಯು ಹಿರಿಯ ನಾಗರಿಕರಿಗೂ (Senior Citizen) ಕೂಡ ಉಚಿತ ಸೇವೆ ಒದಗಿಸಬೇಕು ಎಂಬ ಮನವಿ ಈ ಹಿಂದೆ ಸಾಕಷ್ಟು ಬಾರಿ ಕೇಳಿಬಂದಿತ್ತು, ಹಿರಿಯ ನಾಗರಿಕರ ಮತ್ತು ವಿಕಲಚೇತನದ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ಉಚಿತ ಬಸ್ ಪಾಸ್ ಗೆ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಸೀಟ್ ಹಂಚಿಕೆ ಮಾಡುವಾಗ ಹಿರಿಯ ನಾಗರಿಕರಿಗೆ ಮಹಿಳೆಯರಿಗೆ ಮತ್ತು ವಿಕಲಚೇತನರಿಗೆ ಇಂತಿಷ್ಟು ಪ್ರಮಾಣ ಸೀಟ್ ಮೀಸಲಿಡಲಾಗುತ್ತದೆ ಅದೇ ತರಹ ಬಿಎಂಟಿಸಿ ಹಾಗು ಕೆ.ಎಸ್.ಆರ್.ಟಿ.ಸಿ (BMTC & KSRTC) ಬಸ್ ನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ದರ ಪ್ರಯಾಣ ಹಾಗೂ ಅರ್ಜಿ ಹಾಕಿದ್ದವರಿಗೆ ಉಚಿತ ಬಸ್ ಪಾಸ್ ಕೂಡ ಇರುತ್ತೆ,
ಏನೆಲ್ಲಾ ದಾಖಲೆಗಳು ಬೇಕಾಗಬಹುದು
🔸 ಭಾರತೀಯ ನಿವಾಸಿಯಾಗಿರಬೇಕು ಕರ್ನಾಟಕದಲ್ಲಿ ವಾಸ್ತವ ಇರಬೇಕು
🔸 ವಯಸ್ಸಿನ ದೃಢೀಕರಣ ಪತ್ರ
🔸 ಆಧಾರ್ ಕಾರ್ಡ್ ಪ್ರತಿ
🔸ಪಾಸ್ಪೋರ್ಟ್ ಫೋಟೋ
ಇಲ್ಲಿ ಅರ್ಜಿ ಸಲ್ಲಿಸಿ:
ನೀವು ಗ್ರಾಮ ಒನ್ (Grama One) , ಕರ್ನಾಟಕ ಒನ್ (Karnataka One) ಹಾಗೂ ಬೆಂಗಳೂರು ಒನ್ (Bangalore One) ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಉಚಿತ ಬಸ್ ಪಾಸ್ ಪಡೆಯಬಹುದು. ಅಥವಾ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.60ವರ್ಷ ಮೇಲ್ಪಟ್ಟವರು https://ksrtc.in ಮೂಲಕ ಲಾಗಿನ್ ಆಗಿ ಅಧಿಕ ಮಾಹಿತಿ ಪಡೆಯಬಹುದು.
ಜಿಲ್ಲಾವಾರು ಉದ್ಯೋಗಗಳು |