HSRP ನಂಬರ್ ಪ್ಲೇಟ್ ಮಾತ್ರವಲ್ಲ ಕಾರಿನಲ್ಲಿ ಈ ದಾಖಲೆ ಇರಲೇಬೇಕು ಹೊಸ ರೂಲ್ಸ್!
ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ HSRP ನಂಬರ್ ಪ್ಲೇಟ್ ಗಳು ಯಾವ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದುಕೊಂಡಿವೆ ಎನ್ನುವುದನ್ನ ನಾವೆಲ್ಲರೂ ತಿಳಿದುಕೊಂಡಿದ್ದೇವೆ. 2019 ರ ಒಳಗೆ ರಿಜಿಸ್ಟರ್ ಆಗಿರುವ ಅಥವಾ ಖರೀದಿ ಮಾಡಿರುವಂತಹ ವಾಹನಗಳ ಮೇಲೆ HSRP Number Plate ಇರಲೇ ಬೇಕಾಗಿದೆ.
ಇದರ ಜೊತೆಗೆ ಕಲರ್ ಕೋಡೆಡ್ ಸ್ಟಿಕರ್ ಕೂಡ ಅತ್ಯವಶ್ಯಕ ಆಗಿದೆ. ಅಷ್ಟೇ ಅಲ್ಲದೆ ಇದರ ಜೊತೆ ಜೊತೆಗೆ ಮತ್ತೊಂದು ದಾಖಲಿ ಕೂಡ ಈಗ ನಿಮ್ಮ ನಿಮ್ಮ ಕಾರುಗಳಲ್ಲಿ ಇರಲೇಬೇಕು ಎನ್ನುವ ಸುದ್ದಿ ತಿಳಿದು ಬಂದಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲು ಹೊರಟಿದ್ದೇವೆ.
ಕಾರಲ್ಲಿ ಈ ದಾಖಲೆ ಇರಲೇಬೇಕು:
ನಿಜ ಗೆಳೆಯರೇ ನಾವ್ ಮಾತಾಡ್ತಿರೋದು PUC Certificate (ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ) ಬಗ್ಗೆ. ಇದು ನಿಮ್ಮ ವಾಹನದಿಂದ ಬಿಡುಗಡೆಯಾಗುವ ಹೊಗೆ ಚೆಕ್ ಮಾಡಿಸಿರುವಂತಹ ಸರ್ಟಿಫಿಕೇಟ್ ಆಗಿರುತ್ತದೆ. ನಿಮ್ಮ ವಾಹನದಿಂದ ನಮ್ಮ ಪರಿಸರದಲ್ಲಿ ಯಾವುದೇ ರೀತಿಯ ಮಾಲಿನ್ಯ ಆಗುವುದಿಲ್ಲ ಎನ್ನುವಂತಹ ಲಿಖಿತ ರೂಪದಲ್ಲಿ ಹೇಳುವಂತಹ ಪತ್ರ ಇದಾಗಿದೆ. ಇದನ್ನ ಮಾಡಿಸುವುದಕ್ಕೆ ನೀವೇನು ಸಾವಿರಾರು ರೂಪಾಯಿಗಳು ಖರ್ಚು ಮಾಡುವ ಅಗತ್ಯ ಇಲ್ಲ ನಿಮಗೆ ಕೇವಲ ಐವತ್ತರಿಂದ ನೂರು ರೂಪಾಯಿಗಳ ಖರ್ಚಾಗಬಹುದಾಗಿದೆ ಅಷ್ಟೇ.
ಇನ್ನು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಆಗಾಗ ನವೀಕರಣ ಮಾಡಬೇಕಾಗಿರುತ್ತದೆ. ಇನ್ನು ನೀವು ಇಂತಹ ಸಂದರ್ಭದಲ್ಲಿ ಟ್ರಾಫಿಕ್ ಪೋಲೀಸರ ಬಳಿ ಸಿಕ್ಕಿ ಹಾಕಿಕೊಂಡಲ್ಲಿ ನಿಮ್ಮ ಬಳಿ PUC Certificate (ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ) ಇಲ್ಲದೆ ಇದ್ದಲ್ಲಿ ದೊಡ್ಡ ಮೊತ್ತದ ದಂಡ ಕಟ್ಟುವ ಪರಿಸ್ಥಿತಿ ಬರುತ್ತದೆ ಕೆಲವೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗಿ ಬರುತ್ತದೆ.
ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC Certificate) ಇಲ್ದೆ ಇದ್ರೆ ಫೈನ್ ಹಾಗೂ ಜೈಲ್:
ಮೋಟಾರ್ ವೆಹಿಕಲ್ ಆಕ್ಟ್ 1993ರ 190(2)ರ ಪ್ರಕಾರ ಒಂದು ವೇಳೆ ನಿಮ್ಮ ಬಳಿ PUC Certificate ಇಲ್ಲದೆ ಹೋದಲ್ಲಿ ಅಥವಾ ಅದನ್ನ ನವೀಕರಣ ಮಾಡಿಸಿಕೊಳ್ಳದೆ ಹೋದಲ್ಲಿ ಆರು ತಿಂಗಳ ಜೈಲ್ ಅಥವಾ ಹತ್ತು ಸಾವಿರ ರೂಪಾಯಿಗಳ ದಂಡವನ್ನು ನೀಡಬೇಕಾದಂತಹ ಪರಿಸ್ಥಿತಿ ಬರುತ್ತದೆ. ಕೆಲವೊಂದು ಪರಿಸ್ಥಿತಿಗಳಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಮೂರು ತಿಂಗಳವರೆಗೆ ರದ್ದಾಗುವ ಸಾಧ್ಯತೆ ಇರುತ್ತದೆ.
ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC Certificate) ಅನ್ನು ಎಲ್ಲಿ ಮಾಡಬೇಕು ಅನ್ನೋದಾಗಿ ನಿಮ್ಮಲ್ಲಿ ಅನುಮಾನ ಇದ್ದರೆ ಅದಕ್ಕೆ ನೀವು ಗೊಂದಲ ಪಡಬೇಕಾದ ಅಗತ್ಯವಿಲ್ಲ ನೇರವಾಗಿ ನಿಮ್ಮ ಹತ್ತಿರದ ಪೆಟ್ರೋಲ್ ಪಂಪ್ (Petrol Pump) ಗೆ ಹೋದರೆ ಅಲ್ಲಿಯೇ PUC Certificate ಮಾಡುವಂತಹ ಅಂಗಡಿಗಳು ಇರುತ್ತದೆ.
ಇಲ್ಲಿ ಹೋಗಿ ನೀವು ಸುಲಭ ರೂಪದಲ್ಲಿ ಪ್ರದುಷಣ ಪ್ರಮಾಣ ಪತ್ರ ಅಂದ್ರೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC Certificate) ಅನ್ನು ಮಾಡಿಸಿಕೊಳ್ಳಬಹುದಾಗಿದ್ದು ಇದಕ್ಕೆ ಹೆಚ್ಚಿನ ಹಣ ಕೂಡ ಖರ್ಚಾಗುವುದಿಲ್ಲ. ಇದನ್ನು ಮಾಡಿಸಿಕೊಳ್ಳುವುದಕ್ಕೆ ಹೆಚ್ಚು ಸಮಯ ಕೂಡ ಆಗುವುದಿಲ್ಲ ಹೆಚ್ಚು ಹಣ ಕೂಡ ಖರ್ಚಾಗುವುದಿಲ್ಲ ಆದರೆ ಇದನ್ನು ಮಾಡಿಸಿಕೊಳ್ಳದೆ ಹೋದಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೀವು ಅನುಭವಿಸಬೇಕಾಗುತ್ತದೆ.
ಜಿಲ್ಲಾವಾರು ಉದ್ಯೋಗಗಳು |