ಕರ್ನಾಟಕ ಉಚ್ಚ ನ್ಯಾಯಾಲಯ ನೇಮಕಾತಿ ಅಧಿಸೂಚನೆ 2022
Karnataka High Court Recruitment 2022: ಕರ್ನಾಟಕ ಉಚ್ಚ ನ್ಯಾಯಾಲಯವು, ಪ್ರಸ್ತುತ ಖಾಲಿ ಇರುವ ಹಾಗೂ ಬ್ಯಾಕ್ಲಾಗ್ ಹುದ್ದೆಗಳೂ ಸೇರಿದಂತೆ ಸಿವಿಲ್ ನ್ಯಾಯಾಧೀಶರ 56 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,
ಇಲಾಖೆ ಹೆಸರು: | ಕರ್ನಾಟಕ ಉಚ್ಚ ನ್ಯಾಯಾಲಯ |
ಹುದ್ದೆಗಳ ಹೆಸರು: | ಸಿವಿಲ್ ನ್ಯಾಯಾಧೀಶರ |
ಒಟ್ಟು ಹುದ್ದೆಗಳು | 56 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ವಿದ್ಯಾರ್ಹತೆ:
ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಪಾಸ್ ಮಾಡಿರಬೇಕು. ಹಾಗೂ ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು.
ವಯೋಮಿತಿ:
ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷ, ಇತರೆ ಅಭ್ಯರ್ಥಿಗಳಿಗೆ 35 ವರ್ಷ ವಯಸ್ಸು ಮೀರಿರಬಾರದು.
– ಮಾಜಿ-ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರುತ್ತದೆ.
ವೇತನಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.27700-447770 ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ:
ಪೂರ್ವಭಾವಿ ಪರೀಕ್ಷೆಗೆ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ರೂ.500, ಪ.ಜಾ / ಪ.ಪಂ / ಪ್ರವರ್ಗ-1 ಅಭ್ಯರ್ಥಿಗಳು ರೂ.250 ಶುಲ್ಕವನ್ನು ಸಂದಾಯ ಮಾಡಬೇಕು.
– ಆನ್ಲೈನ್ ಮೂಲಕ ಅಥವಾ ಎಸ್ಬಿಐ ಆಫ್ಲೈನ್ ಚಲನ್ ಮೂಲಕ ಪರೀಕ್ಷೆ ಶುಲ್ಕ ಪಾವತಿಸಬಹುದು.
ಉದ್ಯೋಗ ಸುದ್ದಿ: ಕಂದಾಯ ಇಲಾಖೆಯಲ್ಲಿ ನೇರ ನೇಮಕಾತಿ 2022
ಆಯ್ಕೆ ವಿಧಾನ
ಉಚ್ಚ ನ್ಯಾಯಾಲಯವು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ನಡೆಸಲಿದೆ. ಈ ಎರಡು ಪರೀಕ್ಷೆಗಳಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದಲ್ಲಿ ನೇಮಕಾತಿ ನಡೆಸಲಿದೆ.
ಪರೀಕ್ಷಾ ವಿಧಾನ
ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು 3 ಹಂತಗಳನ್ನು ಒಳಗೊಂಡಿರುತ್ತದೆ.
– ಪೂರ್ವಭಾವಿ ಪರೀಕ್ಷೆ (100 ಅಂಕಗಳಿಗೆ ವಸ್ತುನಿಷ್ಠ ಮಾದರಿ ಪ್ರಶ್ನೆ ಪತ್ರಿಕೆ)
– ಮುಖ್ಯ ಲಿಖಿತ ಪರೀಕ್ಷೆ (ಗರಿಷ್ಠ ಅಂಕಗಳು 100)
– ಮೌಖಿಕ ಪರೀಕ್ಷೆ (ಗರಿಷ್ಠ ಅಂಕಗಳು 100)
– ಕಂಪ್ಯೂಟರ್ ಜ್ಞಾನದ ಪರೀಕ್ಷೆ (ಗರಿಷ್ಠ ಅಂಕಗಳು 25)
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 22-04-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 23-05-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |