ನಿಜಕ್ಕೂ ಅಲ್ಲು ಅರ್ಜುನ್ ಅಪ್ಪು ನಿವಾಸಕ್ಕೆ ಬಂದಿಕ್ಕೆಗೆ ಗೊತ್ತಾ?

ಅಪ್ಪು ನಿವಾಸಕ್ಕೆ ಬಂದ ಅಲ್ಲು ಅರ್ಜುನ್, ಗೆಳೆಯನನ್ನು ಸ್ಮರಿಸಿದ ಅಲ್ಲು

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ 3 ತಿಂಗಳುಗಳೇ ಕಳೆದು ಹೋಗಿವೆ. ಆದ್ರೆ ಅಪ್ಪು ನೆನಪು ಮಾತ್ರ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ, ಹೋಗುವುದೂ ಇಲ್ಲ. ಪವರ್ ಸ್ಟಾರ್ ಅವರನ್ನು ಬರೀ ಕನ್ನಡಿಗರಷ್ಟೇ ಅಲ್ಲ, ಇಡೀ ದಕ್ಷಿಣ ಭಾರತದ ಅಭಿಮಾನಿಗಳು ಮಿಸ್ ಮಾಡಿಕೊಳ್ತಿದ್ದಾರೆ. ಬರೀ ಕನ್ನಡ ಸಿನಿಮಾ ಮಂದಿಯಷ್ಟೇ ಅಲ್ಲ, ಪಕ್ಕದ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಗಣ್ಯರೂ ಸಹ ಪುನೀತ್ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಪುನೀತ್ ನಿಧನರಾಗಿದ್ದಾಗ ಸೌತ್ ಇಂಡಿಯಾದ ಅದೆಷ್ಟೋ ಹಿರಿ-ಕಿರಿಯ ತಾರೆಯರು, ತಂತ್ರಜ್ಞರು, ಸಿನಿಮಾ ಮಂದಿ ಬೆಂಗಳೂರಿಗೆ ಬಂದು, ಪುನೀತ್ ಪಾರ್ಥಿವ ಶರೀರದ ದರ್ಶನ ಪಡೆದಿದ್ದರು.

 

 

ದಕ್ಷಿಣ ಭಾರತದ ಸೂಪರ್ ಸ್ಟಾರ್, ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಬಂದಿರುವುದು ಯಾವುದೇ ಸಿನಿಮಾ ಪ್ರಚಾರಕ್ಕಾಗಿ ಅಥವಾ ಸಿನಿಮಾ ಕೆಲಸಕ್ಕಾಗಿ ಅಲ್ಲ. ಬದಲಾಗಿ ತಮ್ಮ ಗೆಳೆಯ ಪುನೀತ್ ರಾಜ್‌ಕುಮಾರ್ ಅವರ ನಿವಾಸಕ್ಕೆ. ಸದಾಶಿವನಗರದಲ್ಲಿರುವ ಪುನೀತ್ ರಾಜ್‌ಕುಮಾರ್‌ ನಿವಾಸಕ್ಕೆ ಅಲ್ಲು ಅರ್ಜುನ್ ಆಗಮಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ಅಶ್ವಿನಿ ಅವರಿಗೆ ಅಲ್ಲು ಅರ್ಜುನ್ ಸಾಂತ್ವನ ಹೇಳಿದ್ದಾರೆ.

ಪುನೀತ್ ರಾಜ್‌ಕುಮಾರ್ ಜೊತೆಗಿನ ನೆನಪನ್ನು ಮೆಲುಕು ಹಾಕಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್, ‘’ಎಲ್ಲರಿಗೂ ನಮಸ್ಕಾರ.. ಪುನೀತ್ ರಾಜ್‌ಕುಮಾರ್ ಅವರ ಇಡೀ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಬೆಂಗಳೂರಿಗೆ ಬಂದು ಪುನೀತ್ ರಾಜ್‌ಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕು ಅಂತ ಬಹಳಷ್ಟು ಸಾರಿ ಅಂದುಕೊಂಡಿದ್ದೆ. ‘ಪುಷ್ಪ’ ಸಿನಿಮಾದ ಕೆಲಸಗಳಿಂದ ಅದು ಸಾಧ್ಯವಾಗಿರಲಿಲ್ಲ. ಇಂದು ಬಿಡುವು ಮಾಡಿಕೊಂಡು ಬಂದೆ, ನನ್ನ ಮತ್ತು ಪುನೀತ್ ರಾಜ್‌ಕುಮಾರ್ ಅವರ ಸ್ನೇಹ ಬಹಳ ವರ್ಷಗಳದ್ದು. ನಾನು ಯಾವಾಗ ಬೆಂಗಳೂರಿಗೆ ಬಂದರೂ, ಪುನೀತ್ ಅವರ ಮನೆಗೆ ಹೋಗುತ್ತಿದ್ದೆ. ಅವರು ಹೈದರಾಬಾದ್‌ಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಬರುತ್ತಿದ್ದರು. ‘ಅಲಾ ವೈಕುಂಠಪುರಮುಲೋ’ ಸಿನಿಮಾದ ನೋಡಿದ ಬಳಿಕ ಪುನೀತ್ ರಾಜ್‌ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ‘ಬುಟ್ಟ ಬೊಮ್ಮ’ ಸಾಂಗ್ ಅವರಿಗೆ ತುಂಬಾ ಇಷ್ಟವಾಗಿತ್ತು. ಆಗ ನಾವಿಬ್ಬರು ಕೆಲ ಕಾಲ ಮಾತನಾಡಿದ್ವಿ. ನಾವಿಬ್ಬರು ಭೇಟಿಯಾಗಬೇಕು ಅಂತ ಅಂದುಕೊಂಡಿದ್ವಿ. ಆದರೆ, ಕೋವಿಡ್ ಲಾಕ್‌ಡೌನ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ದುರಾದೃಷ್ಟವಶಾತ್ ನಾನು ಅವರನ್ನ ಮತ್ತೆ ಭೇಟಿಯಾಗಲು ಆಗಲೇ ಇಲ್ಲ’’

‘’ನಾವಿಬ್ಬರು ಒಂದು ಡ್ಯಾನ್ಸ್ ಶೋಗಾಗಿ ಚೆನ್ನೈಗೆ ಹೋಗಿದ್ವಿ. ನಂತರ ಅವರು ನಮ್ಮ ಮನೆಗೆ ಬಂದಿದ್ದರು. ಒಂದು ಇಡೀ ಸಂಜೆ ನಾನು ಅವರೊಂದಿಗೆ ಕಾಲ ಕಳೆದಿದ್ದೆ.ನಾನು ಯಾವತ್ತೂ ಮರೆಯುವುದಿಲ್ಲ’’ ಎಂದು ದುಃಖಿತರಾದರು.

 

 

ಇನ್ನು ಅಲ್ಲು ಅರ್ಜುನ್ ಬೆಂಗಳೂರಿಗೆ ಬರುತ್ತಾರೆ, ಅದೂ ಪುನೀತ್ ನಿವಾಸಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ಪುನೀತ ರಾಜ್‌ಕುಮಾರ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಪುನೀತ್ ಮನೆ ಮುಂದೆ ಜಮಾಯಿಸಿ ಉಭಯ ನಾಯಕರ ಪರ ಕೂಗಿದ್ರು.

ಪುನೀತ್ ಸಮಾಧಿಗೆ ಭೇಟಿ ನೀಡಲಿರುವ ಅಲ್ಲು ನಂತರ ಮಾತುಕತೆಯೆಲ್ಲ ಮುಗಿದ ಬಳಿಕ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಅಲ್ಲು ಅರ್ಜುನ್ ಭೇಟಿ ಕೊಟ್ಟರು. ಅಪ್ಪು ಪುಣ್ಯಭೂಮಿಗೆ ಅಲ್ಲು ಅರ್ಜುನ್ ಪುಷ್ಪ ನಮನ ಸಲ್ಲಿಸಿದರು.

 

error: Content is protected !!