ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ 2021

 

Indian Army Recruitment 2021 notification Apply Online for 194 Junior Commissioned Officer (Religious Teacher) 

ಭಾರತೀಯ ಸೇನೆಯಲ್ಲಿ ಖಾಲಿ ಇರುವ ಒಟ್ಟು 194 ಕಿರಿಯ ನಿಯೋಜಿತ ಅಧಿಕಾರಿ (ಧಾರ್ಮಿಕ ಶಿಕ್ಷಕ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 11 2021 ರಿಂದ ಆರಂಭಗೊಂಡು ಫೆಬ್ರವರಿ 9, 2021 ರಂದು ಕೊನೆಗೊಳ್ಳಲಿದೆ.

* ಹುದ್ದೆಗಳ ವಿವರ :

* ಪಂಡಿತ್ – 171 ಹುದ್ದೆ

* ಪಂಡಿತ್ (ಗೂರ್ಖಾ) – 09 ಹುದ್ದೆ

* ಗ್ರಂಥಿ – 05 ಹುದ್ದೆ

* ಮೌಲ್ವಿ (ಸುನ್ನಿ) – 05 ಹುದ್ದೆ

* ಮೌಲ್ವಿ (ಶಿಯಾ ) – 01 ಹುದ್ದೆ

* ಪಾದ್ರಿ – 02 ಹುದ್ದೆ

* ಬೌದ್ಧ ಸನ್ಯಾಸಿ (ಮಹಾಯಾನ )- 01 ಹುದ್ದೆ

ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ: 194

 

ವಿದ್ಯಾರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡನಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಜೊತೆಗೆ ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ಹೊಂದಿರಬೇಕು ಈ ಕುರಿತ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದು.

ವಯೋಮಿತಿ
ಭಾರತೀಯ ಸೇನಾ ನೇಮಕಾತಿ 2021 ರ ಅಧಿಸೂಚನೆ ಅನ್ವಯ ಅಕ್ಟೋಬರ್ 01, 2021 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳು ಕನಿಷ್ಠ – 25 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ- 34 ವರ್ಷ ವಯೋಮಿತಿಯೊಳಗಿನವರಾಗಿರಬೇಕು.

ಆಯ್ಕೆ ವಿಧಾನ
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಆಯ್ದ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವದು.

ವೇತನ ಶ್ರೇಣಿ
ಭಾರತೀಯ ಸೇನಾ ನೇಮಕಾತಿ 2021 ಅಧಿಸೂಚನೆ ಅನ್ವಯದಂತೆ ವೇತನವನ್ನು ನೀಡಲಾಗುವುದು.


ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11 ಜನವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9 ಫೆಬ್ರುವರಿ 2021

Website
Apply Online
Notification
error: Content is protected !!