ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ 120 ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿದೆ. ಬಿಬಿಎಂಪಿ (ಹಿರಿಯ ವೈದ್ಯಾಧಿಕಾರಿ/ ತಜ್ಞರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು) (ವಿಶೇಷ) ನಿಯಮಗಳು..
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ 120 ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿದೆ. ಬಿಬಿಎಂಪಿ (ಹಿರಿಯ ವೈದ್ಯಾಧಿಕಾರಿ/ ತಜ್ಞರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು) (ವಿಶೇಷ) ನಿಯಮಗಳು 2020 ರ ನಿಯಮಗಳಡಿಯಲ್ಲಿ ಪಾಲಿಕೆಯಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ನೇಮಕ ಮಾಡಲು ಪ್ರಕಟಣೆ ಹೊರಡಿಸಲಾಗಿದೆ.
ಭರ್ತಿ ಮಾಡಲಿರುವ ಹುದ್ದೆಗಳು
ತಜ್ಞ ವೈದ್ಯರು 50
ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 70
ಒಟ್ಟು ಹುದ್ದೆಗಳು 120
ಸದರಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ದಿನಾಂಕ 22-02-2021 ರಂದು ಸವಿವರವಾದ ಅಧಿಸೂಚನೆಯನ್ನು ಪ್ರಕಟಿಸಲಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಿಬಿಎಂಪಿ ನಿಗದಿಪಡಿಸಿದ ಎಂಬಿಬಿಎಸ್ ವಿದ್ಯಾರ್ಹತೆ ಜತೆಗೆ ಕಾರ್ಯಾನುಭವವನ್ನು ಹೊಂದಿರಬೇಕು.
‘ಗರ್ಭಿಣಿ ಮಹಿಳೆಯರಿಗೆ 5000 ರೂಪಾಯಿʼ ನಗದು ಸಹಾಯಧನ
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಫೀಶಿಯಲ್ ವೆಬ್‌ಸೈಟ್ – www.bbmp.gov.in ಗೆ ಭೇಟಿ ನೀಡಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 23-02-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 24-03-2021
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 25-03-2021