ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಇಂತವರ ರೇಷನ್ ಕಾರ್ಡ್ ಕ್ಯಾನ್ಸಲ್ ಶೀಘ್ರದಲ್ಲೇ ರದ್ದಾಗಲಿದೆ – Ration Card BPL 2024

ಚುನಾವಣೆಗೂ ಮುನ್ನವೇ ಸರ್ಕಾರದ ದೊಡ್ಡ ನಿರ್ಧಾರ, ಇಂತವರ ರೇಷನ್ ಕಾರ್ಡ್ ಕ್ಯಾನ್ಸಲ್

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಹಾಯಕವಾಗಲಿ,‌ಮೂಲಭೂತ ಅವಶ್ಯಕ ವಸ್ತುಗಳು ಪ್ರತಿಯೊಬ್ಬರಿಗೂ ಸಿಗುವಂತೆ ಆಗಲಿ ಎಂಬ ನಿಟ್ಟಿನಲ್ಲಿ‌ ಆಹಾರ ಇಲಾಖೆಯು ಬಡ ವರ್ಗದ ಜನರಿಗೆ ಆಹಾರ ಧಾನ್ಯಗಳನ್ನು‌ವಿತರಣೆ ಮಾಡುತ್ತಿದೆ. ಇಂದು ರಾಜ್ಯ ಸರಕಾರವು‌ ರೇಷನ್ ಕಾರ್ಡ್ (Ration Card) ಇದ್ದವರಿಗೆ ಹೆಚ್ಚುವರಿ‌ ಅಕ್ಕಿಯ ಕೊಡುವುದರ ಬದಲಿಗೆ ನಿಮ್ಮ ಖಾತೆಗೆ‌ ಹಣವನ್ನೂ‌ ಸಹ ಜಮೆ ಮಾಡುತ್ತಿದೆ.ಇಂದು ಬಿಪಿಎಲ್ (BPL) ಮತ್ತು ಅಂತ್ಯೋದಯ ರೇಷನ್ ಕಾರ್ಡ್ (Antyodaya Ration Card) ಸೌಲಭ್ಯ ಪಡೆಯಲು ಹೆಚ್ಚಿನ ಜನರು ಸುಳ್ಳು ದಾಖಲಾತಿಗಳು ಮಾಹಿತಿಗಳನ್ನು ನೀಡುವುದರ ಮೂಲಕ ಜನರು ರೇಷನ್ ಕಾರ್ಡ್ ಮಾಡಿಸಿದ್ದಾರೆ. ಈಗಾಗಲೇ ಈ ಬಗ್ಗೆ ಆಹಾರ ಇಲಾಖೆಯು ಇಂತಹ ಸುಳ್ಳು ದಾಖಲೆ ನೀಡಿರುವ ದಾಖಲೆಗಳನ್ನು ಪತ್ತೆ ಹಚ್ಚಿದೆ.

ಯಾರ ರೇಷನ್ ಕಾರ್ಡ್ ರದ್ದಾಗುತ್ತೆ?
ಇದೀಗ ಆಹಾರ ಇಲಾಖೆಯು ರೇಷನ್ ಕಾರ್ಡ್ ಇರುವ ಪ್ರತಿಯೊಬ್ಬರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುವ ಮೂಲಕ ಸಾಕಷ್ಟು ಜನರ ಕಾರ್ಡ್ಗಳನ್ನು ರದ್ದು ಪಡಿಸಲು ತಿರ್ಮಾನ ಮಾಡಿದೆ. ಇದೀಗ ಹೆಚ್ಚು ಜಮೀನು, ಆಸ್ತಿಗಳನ್ನು ಹೊಂದಿರುವ ಜನತೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಮಾಡಿಕೊಂಡ ಕಾರ್ಡ್ ಅನ್ನು ರದ್ದು ಪಡಿಸಲು ಆಹಾರ ಇಲಾಖೆಯು ತಿರ್ಮಾನ ಮಾಡಿದೆ.
ಅದೇ ರೀತಿ ರೇಷನ್ ಕಾರ್ಡ್ ಅನ್ನು ಪಡೆಯುವುದಕ್ಕೆ ಕೆಲವು ಅರ್ಹತೆಗಳನ್ನು ನಿಗದಿಪಡಿಸಿದ್ದು ಆ ಅರ್ಹತೆಗಳನ್ನು ಮೀರಿದರೆ ಅಂತವರ ಬಳಿ ಬಿಪಿಎಲ್ ಕಾರ್ಡ್ (BPL Card) ಇದ್ರೆ ಅಂತವರ ಕಾರ್ಡ್ ಮುಲಾಜಿಲ್ಲದೆ ರದ್ದು ಆಗಲಿದೆ.
ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಇದ್ದರೆ ಅಂತ ಕಾರ್ಡ್ ಅನುಮಾನವಿಲ್ಲದೆ ರದ್ದು ಆಗಲಿದೆ
ಕಳೆದ ಆರು ತಿಂಗಳಿನಿಂದ ಪಡಿತರ ಸಾಮಗ್ರಿ ಪಡೆಯದೇ,ಆಹಾರ ಧಾನ್ಯಗಳನ್ನು ಪಡೆದುಕೊಳ್ಳದ ಜನರು ಸಾಕಷ್ಟು ಜನರು ಇದ್ದಾರೆ. ರೇಷನ್ ಕಾರ್ಡ್ (Ration Card) ಮೂಲಕ ಕೇವಲ ಸರ್ಕಾರಿ ಯೋಜನೆಯ ಪ್ರಯೋಜನವನ್ನು‌ ಪಡೆದುಕೊಳ್ಳುವವರ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ.
ಸರ್ಕಾರಿ ನೌಕರಿ ಇದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಂತವರ ಕಾರ್ಡ್ ರದ್ದು ಆಗುವುದು ಖಚಿತ.
ಸರ್ಕಾರಕ್ಕೆ ಒದಗಿಸಿರುವ ಆದಾಯ ಕ್ಕಿಂತ ಹೆಚ್ಚಿನ‌ ಆದಾಯ ಹೊಂದಿ ಬಿಪಿಎಲ್ ‌ಕಾರ್ಡ್ ಪಡೆದಿದ್ದರೆ ಅಂತವರ ಕಾರ್ಡ್ ರದ್ದು ಆಗಲಿದೆ.

ನಿಮ್ಮ‌ ರೇಷನ್ ಕಾರ್ಡ್ ರದ್ದಾಗಿದೆಯಾ?
ನಿಮ್ಮ ರೇಷನ್ ಕಾರ್ಡ್ (Ration Card) ರದ್ದು ಆಗಿದೆಯೇ ಎಂದು ತಿಳಿದು‌ಕೊಳ್ಳಲು ಮೊದಲಿಗೆ ಆಹಾರ ಇಲಾಖೆಯ ಲಿಂಕ್ ಗೆ ತೆರಳಿ ಇಲ್ಲಿ‌ ಇ- ಸ್ಟೇಟಸ್ ನಲ್ಲಿ ರದ್ದು ಮಾಡಿರುವ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಎನ್ನುವ ಆಶ್ಚನ್ ಇರಲಿದ್ದು ಅಲ್ಲಿ‌ ಕ್ಲಿಕ್ ಮಾಡಿ, ನಂತರದಲ್ಲಿ‌ ನಿಮ್ಮ ಜಿಲ್ಲೆ,ಗ್ರಾಮ ಆಯ್ದು ಕೊಂಡು‌ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ವೋ ಎನ್ನುವ ಮಾಹಿತಿ ಕಂಡು ಹಿಡಿಯಬಹುದು.
ಹೊಸ ಕಾರ್ಡ್ ಗೂ ಅವಕಾಶ:

ಈಗಾಗಲೇ ಹೊ‌ಸರೇಷನ್ ಕಾರ್ಡ್ (New Ration Card) ಪಡೆಯಲು ರಾಜ್ಯದ ಕೆಲವೊಂದು ಜನತೆ ಬಹಳಷ್ಟು ಕಾಯುತ್ತಿದ್ದು ಈ ಬಗ್ಗೆ ಆಹಾರ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.‌ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದ ಅರ್ಜಿ ಪರಿಶೀಲನೆ ಮಾಡಿ ಕಾರ್ಡ್ ವಿತರಣೆ ಮಾಡುವ ಬಗ್ಗೆ ಮತ್ತು ಹೊಸ ಕಾರ್ಡ್ ಅರ್ಜಿ ಸಲ್ಲಿಕೆಯ ಬಗ್ಗೆಯು ಗುಡ್ ನ್ಯೂಸ್ ನೀಡಿದ್ದಾರೆ.

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

close button