ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

BPL ಕಾರ್ಡ್ ಗ್ರಾಹಕರಿಗೆ ಇಲ್ಲಿದೆ ಒಂದು ಶಾಕಿಂಗ್ ಸುದ್ದಿ!

ಮನೆಯಲ್ಲಿ ಬೈಕ್‌, ಟಿ.ವಿ ಇದ್ದರೆ ಬಿಪಿಎಲ್‌ ಕಾರ್ಡ್‌ ರದ್ದು: ಸಚಿವ ಉಮೇಶ್‌ ಕತ್ತಿ

ಹೈಲೈಟ್ಸ್‌:
ಮನೆಯಲ್ಲಿ ಬೈಕ್‌, ಟಿ.ವಿ, ಫ್ರಿಡ್ಜ್‌ ಇದ್ದರೆ ಬಿಪಿಎಲ್‌ ಕಾರ್ಡ್‌ ಇಲ್ಲ
ಇಂಥವರು ಮಾರ್ಚ್‌ ಅಂತ್ಯದೊಳಗೆ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಬೇಕು
ಏಪ್ರಿಲ್‌ ತಿಂಗಳಿನಿಂದ ಉತ್ತರದ ಜಿಲ್ಲೆಗಳಿಗೆ ಜೋಳ ಹಾಗೂ ದಕ್ಷಿಣದ ಜಿಲ್ಲೆಗಳಿಗೆ ರಾಗಿ ವಿತರಣೆ

ಮನೆಯಲ್ಲಿ ಟಿ.ವಿ, ಬೈಕು, ಫ್ರಿಡ್ಜ್‌ ಇದ್ದರೆ ಬಿಪಿಎಲ್‌ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ಎಕರೆಗಿಂತ ಹೆಚ್ಚಿನ ಜಮೀನು, ಮನೆಯಲ್ಲಿ ಬೈಕ್‌, ಟೀವಿ, ಫ್ರಿಡ್ಜ್‌ ಇದ್ದವರ ಪಡಿತರ ಚೀಟಿ ರದ್ದು ಮಾಡಲಾಗುವುದು. ಇಂಥವರಿಗೆ ತಮ್ಮ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಮಾರ್ಚ್‌‌ ಅಂತ್ಯದ ವರೆಗೆ ಸಮಯ ನೀಡಲಾಗುತ್ತದೆ ಎಂದು ಕತ್ತಿ ಹೇಳಿದ್ದಾರೆ.


ಏಪ್ರಿಲ್‌ ಬಳಿಕ ಸರ್ಕಾರ ಕಾರ್ಡ್‌ದಾರರ ಪರಿಶೀಲನೆ ನಡೆಸಲಿದ್ದು, ಒಂದು ವೇಳೆ ಎಲ್ಲಾ ಸೌಲಭ್ಯ ಇದ್ದು ಬಿಪಿಎಲ್‌ ಕಾರ್ಡ್‌ ಹೊಂದಿದ್ದು ಗೊತ್ತಾದರೆ ಅಂಥವರಿಗೆ ದಂಡದ ಜತೆ ಶಿಕ್ಷೆಯೂ ನೀಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಚಿವರು, ಸರ್ಕಾರಿ ಅಧಿಕಾರಿಗಳು, ಅರೆ ಸರ್ಕಾರಿ ಅಧಿಕಾರಿಗಳು, 1.20 ಲಕ್ಷ ರುಪಾಯಿ ಆದಾಯ ಇರುವವರು ಬಿಪಿಎಲ್‌ ಕಾರ್ಡ್‌ ಹೊಂದಿರಲು ಸಾಧ್ಯವೇ ಇಲ್ಲ. ಅದರೂ ಕೆಲ ಅಧಿಕಾರಿಗಳು ಬಿಪಿಎಲ್ ಕಾರ್ಡ್‌ ಹೊಂದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಹೀಗಾಗಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಮಾರ್ಚ್ ಅಂತ್ಯದ ವರೆಗೆ ಸ್ವಯಂ ಪ್ರೇರಿತವಾಗಿ ಬಿಪಿಎಲ್‌ ಕಾರ್ಡ್‌ ಸರ್ಕಾರಕ್ಕೆ ಹಿಂದಿರುಗಿಸಲು ಸೂಚನೆ ನೀಡಲಾಗಿದೆ. ಇದಾದ ಬಳಿಕ ಖುದ್ದು ಸರ್ಕಾರವೇ ಸರ್ವೇ ನಡೆಸಿ ಇಂಥವರ ಪತ್ತೆ ಹಚ್ಚಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಏಪ್ರಿಲ್‌ ತಿಂಗಳಿನಿಂದ ಉತ್ತರದ ಜಿಲ್ಲೆಗಳಿಗೆ ಅಕ್ಕಿ ಜತೆ ಜೋಳ ಹಾಗೂ ದಕ್ಷಿಣದ ಜಿಲ್ಲೆಗಳಿಗೆ ಅಕ್ಕಿ ಜತೆ ರಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕತ್ತಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಉದ್ಯೋಗ ಸುದ್ದಿ 

ಪಿಯೋನ್ ಹುದ್ದೆಗಳಿಗೆ ಅರ್ಜಿ ಅಹ್ವಾನ 

ಭಾರತದ ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬೆಂಗಳೂರು ಪೂರ್ವ, ವೃತ್ತ ಕಚೇರಿಯ ಅಡಿಯ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 43 ಜವಾನ ನೌಕರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ಸ್ವವಿವರಗಳುಳ್ಳ ಎಲ್ಲ ದಾಖಲಾತಿಗಳನ್ನು ಈ ಕೆಳಗೆ ನೀಡಿರುವ ವಿಳಾಸಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ತಾವೇ ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಬೇಕು.

ಬೆಂಗಳೂರು ಈಸ್ಟ್ ಸರ್ಕಲ್ 25 ಹುದ್ದೆಗಳು
ಬೆಂಗಳೂರು ವೆಸ್ಟ್ ಸರ್ಕಲ್ 18 ಹುದ್ದೆಗಳು

ಒಟ್ಟು ಹುದ್ದೆಗಳು: 43

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12 ನೇ ತರಗತಿ (PUC) ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

ವಯೋಮಿತಿ:
ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿಯನ್ನು ಹೊಂದಿರಬೇಕು.

ಕನಿಷ್ಠ 18 ವರ್ಷ
ಗರಿಷ್ಠ 24 ವರ್ಷ ಮೀರಿರಬಾರದು.


ವಯೋಸಡಿಲಿಕೆ
SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ಇದರೊಂದಿಗೆ ಅವರುಗಳು ಸೈನಿಕ ಸೇವೆಯ ಅವಧಿಯನ್ನು ಪರಿಗಣಿಸಲಾಗುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ :

ಪಂಜಾಬ್ ನ್ಯಾಷನಲ್ ಬ್ಯಾಂಕ್,
ಹೆಚ್.ಆರ್.ವಿಭಾಗ, ವೃತ್ತ ಕಚೇರಿ-ಬೆಂಗಳೂರು ಪೂರ್ವ,
ರಹೇಜಾ ಟವರ್ಸ್, ಎಂ.ಜಿ ರಸ್ತೆ,
ಬೆಂಗಳೂರು – 560001

ಪಂಜಾಬ್ ನ್ಯಾಷನಲ್ ಬ್ಯಾಂಕ್,
ಹೆಚ್.ಆರ್.ವಿಭಾಗ, ವೃತ್ತ ಕಚೇರಿ-ಬೆಂಗಳೂರು ಪಶ್ಚಿಮ,
ರಹೇಜಾ ಟವರ್ಸ್, ಎಂ.ಜಿ ರಸ್ತೆ,
ಬೆಂಗಳೂರು – 560005

ಪ್ರಮುಖ ದಿನಾಂಕಗಳು

ಬೆಂಗಳೂರು ಈಸ್ಟ್ ಸರ್ಕಲ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1 ಮಾರ್ಚ್ 2021
ಬೆಂಗಳೂರು ವೆಸ್ಟ್ ಸರ್ಕಲ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಫೆಬ್ರವರಿ 2021

Website 
Notification – 1
Notification – 2
close button