ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ 3 ದಾಖಲೆ ಕಡ್ಡಾಯ! ರಾಜ್ಯ ಸರ್ಕಾರದ ಪ್ರಕಟಣೆ
New ration card 2024: ವಿಧಾನಸಭಾ ಎಲೆಕ್ಷನ್ ಹತ್ತಿರ ಬರುತ್ತಿದಂತೆ ಜಾರಿಗೆ ಬಂದ ಗ್ಯಾರೆಂಟಿ ಯೋಜನೆಯ ಸಲುವಾಗಿ ಯೋಜನೆಯ ಫಲಾನುಭವಿಗಳು ಇದರ ಲಾಭ ಪಡೆಯಲು ರೇಷನ್ ಕಾರ್ಡ್ ಅನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ. ಸಾಕಷ್ಟು ಜನರ ರೇಶನ್ ಕಾರ್ಡ್ ತಿದ್ದುಪಡಿ ಕಾರ್ಯ ಬಾಕಿ ಇದೆ, ಅದಲ್ಲದೆ ಇನ್ನೂ ಅನೇಕರು ಹೊಸದಾಗಿ ರೇಷನ್ ಕಾರ್ಡ್ ಯಾವಾಗ ಬರಬಹುದು ಎಂದು ಕಾದು ಕುಳಿತಿದ್ದಾರೆ. ಹೊಸದಾಗಿ ರೇಶನ್ ಕಾರ್ಡ್ ಪಡೆಯಲು ಅರ್ಜಿ ಹಾಕುವವರಿಗೆ ಇಲ್ಲೊಂದು ಶುಭ ಸುದ್ದಿ ಕಾದಿದೆ.
ಇಷ್ಟು ದಿನ ಹೊಸದಾಗಿ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಕಾದು ಕುಳಿತಿದ್ದ ಜನರಿಗೆ ಅರ್ಜಿ ಹಾಕುವ ಆನ್ಲೈನ್ ಪೋರ್ಟನ್ನು ತಾಂತ್ರಿಕ ಕಾರಣಕ್ಕಾಗಿ ತಡೆಹಿಡಿಯಲಾಗಿತ್ತು, ಆದರೆ ಇದೀಗ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅರ್ಹರಿಗೆ ಅವಕಾಶ ನೀಡಲಾಗಿದೆ, ಅಂದರೆ ಈಗ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ಜನರು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಹೊಸ ಅರ್ಜಿ ಹಾಕಬಹುದಾಗಿದೆ, ಅರ್ಜಿ ಸಲ್ಲಿಸಲು ನೀವು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಸಂಪೂರ್ಣ ಮಾಹಿತಿ ನಾವು ಈಗ ನೀಡುತ್ತೇವೆ.
ವೈದ್ಯಕೀಯ ಲಾಭಗಳು
ವೈದ್ಯಕೀಯ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೇಷನ್ ಕಾರ್ಡ್ ಇದ್ದವರು ಅದರಲ್ಲಿಯೂ ಬಿಪಿಎಲ್ (BPL Card) ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಕೆಲವು ವಿಶೇಷ ರಿಯಾಯಿತಿಗಳು ಸಿಗಲಿದೆ ಹಾಗೂ ಅದರ ಲಾಭ ಪಡೆಯಬಹುದು, ಹಾಗಾಗಿ ಜನರು ಯಾವಾಗ ನಮ್ಮ ರೇಷನ್ ಕಾರ್ಡ್ ನಮ್ಮ ಕೈ ತಲುಪುತ್ತದೆ ಎಂದು ಕಾದು ಕುಳಿತಿದ್ದಾರೆ, ಅಂತವರು ವೈದ್ಯಕೀಯ ಚಿಕಿತ್ಸೆಗೆ ಕಾರಣಕ್ಕಾಗಿ ಹಾಗೂ ಬಿಪಿಎಲ್ ಕಾರ್ಡ್ ನ ಇತರ ಉಪಯೋಗಗಳನ್ನು ಪಡೆಯಬಹುದಾಗಿದೆ ಮತ್ತು ಈಗಾಗಲೇ ರೇಷನ್ ಕಾರ್ಡ್ ಕಳೆದುಕೊಂಡವರು ಅಥವಾ ಹೊಸದಾಗಿ ಮದುವೆ ಆದವರು ಮತ್ತು ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದಾಗಿದೆ.
ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಈ ದಾಖಲೆಗಳು ಅಗತ್ಯ
ನಿಮ್ಮ ವಯಸ್ಸಿನ ದೃಢೀಕರಣ ಪತ್ರಗಳಾದ ಆಧಾರ್ ಕಾರ್ಡ್ ಜನನ ಪ್ರಮಾಣ ಪತ್ರ ನಿಮ್ಮ ವಾಸ ಸ್ಥಳದ ದೃಢೀಕರಣ ಪತ್ರಗಳಾದ ಆಧಾರ್ ಕಾರ್ಡ್ ಮತ್ತು ಮತದಾರ ಗುರುತಿನ ಚೀಟಿ ಹೊಂದಿರಬೇಕು ಮತ್ತು ಕುಟುಂಬದ ಫೋಟೋ ಹಾಗೂ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರವನ್ನು ರೇಷನ್ ಕಾರ್ಡ್ ಗಾಗಿ ಹೊಸ ಅರ್ಜಿ ಸಲ್ಲಿಸುವವರಿಗೆ ಕೇಳಲಾಗುತ್ತದೆ.
ಎಲ್ಲಿ ಅರ್ಜಿ ಹಾಕಬೇಕು
ನೀವು ಆನ್ಲೈನ್ ಮೂಲಕ ಅರ್ಜಿ ಹಾಕಲು ಬಯಸಿದರೆ https://ahara.kar.nic.in/ ಗೆ ಭೇಟಿ ನೀಡಿ ಅರ್ಜಿ ಹಾಕಬಹುದು ಎಪ್ರಿಲ್ 3ರಿಂದ ರೇಶನ್ ಕಾರ್ಡ್ ಹೊಸದಾಗಿ ಅರ್ಜಿ ಹಾಕುವವರಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ರೇಶನ್ ಕಾರ್ಡ್ ಗಾಗಿ ವೈದ್ಯಕೀಯ ಸೌಲಭ್ಯ ಪಡೆಯುವವರು ತುರ್ತು ಅರ್ಜಿ ಹಾಕಬಹುದು. ಆಫ್ಲೈನ್ ಮೂಲಕವಾದರೆ ಗ್ರಾಮ ಒನ್ , ಕರ್ನಾಟಕ ಒನ್ , ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆ ನೀಡಬೇಕು.
ಜಿಲ್ಲಾವಾರು ಉದ್ಯೋಗಗಳು |