ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಭಾರತೀಯ ಆಹಾರ ಇಲಾಖೆಯಲ್ಲಿ ಭರ್ಜರಿ 4710 ಹುದ್ದೆಗಳ ನೇಮಕಾತಿ 2022 । FCI Recruitment 2022

ಭಾರತೀಯ ಆಹಾರ ನಿಗಮ ನೇಮಕಾತಿ ಅಧಿಸೂಚನೆ 2022

FCI Recruitment 2022: ಭಾರತೀಯ ಆಹಾರ ನಿಗಮವು (ಫುಡ್ ಕಾರ್ಪೋರೇಷನ್‌ ಆಫ್ ಇಂಡಿಯಾ) ಕೆಟಗರಿ 1, ಕೆಟಗರಿ 2, ಕೆಟಗರಿ 3 ಗೆ ಸೇರಿದ ಒಟ್ಟು 4710 ಹುದ್ದೆಗಳ ಭರ್ತಿಗೆ ಶಾರ್ಟ್‌ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಎಫ್‌ಸಿಐ ಈಗ ಕೇವಲ ಶಾರ್ಟ್‌ ನೋಟಿಫಿಕೇಶನ್‌ ಅಷ್ಟೆ ಬಿಡುಗಡೆ ಮಾಡಿದ್ದು, ಡೀಟೇಲ್ಡ್‌ ನೋಟಿಫಿಕೇಶನ್‌ ಅನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು:ಭಾರತೀಯ ಆಹಾರ ನಿಗಮ
ಹುದ್ದೆಗಳ ಹೆಸರು:ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು 4710
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 
ಹುದ್ದೆಗಳ ವಿವರ 
 
ಕೆಟಗರಿ 1 ಹುದ್ದೆಗಳ ಸಂಖ್ಯೆ : 35
ಕೆಟಗರಿ 2 ಹುದ್ದೆಗಳ ಸಂಖ್ಯೆ : 2521
ಕೆಟಗರಿ 3 ಹುದ್ದೆಗಳ ಸಂಖ್ಯೆ : 2154
ಒಟ್ಟು ಹುದ್ದೆಗಳ ಸಂಖ್ಯೆ : 4710

ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಪದವಿ / ಬಿಇ / ಬಿಕಾಂ / ಬಿಎಸ್ಸಿ / ಸ್ನಾತಕೋತ್ತರ ಪದವಿ ಪಾಸ್.

ವಯೋಮಿತಿ:
ಗರಿಷ್ಠ ವಯೋಮಿತಿ 
ಮ್ಯಾನೇಜರ್ : 28 ವರ್ಷ
ಮ್ಯಾನೇಜರ್ (ಹಿಂದಿ) : 35 ವರ್ಷ
ಜೂನಿಯರ್ ಇಂಜಿನಿಯರ್: 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 2: 25 ವರ್ಷ
ಟೈಪಿಸ್ಟ್‌ (ಹಿಂದಿ) : 25 ವರ್ಷ
ವಾಚ್‌ಮನ್ : 25 ವರ್ಷ

ವಯೋಮಿತಿ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ,
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ,
ಪಿಡಬ್ಲ್ಯೂಡಿ ಜೆನೆರಲ್ ಅಭ್ಯರ್ಥಿಗಳಿಗೆ 10 ವರ್ಷ,
ಪಿಡಬ್ಲ್ಯೂಡಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ವಿಧಾನ 
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದು 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದು 
  
ಪ್ರಮುಖ ಲಿಂಕುಗಳು 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 

 

close button