FCI Recruitment 2022: ಭಾರತೀಯ ಆಹಾರ ನಿಗಮದ 113 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಪದವೀಧರರು, ಸ್ನಾತಕೋತ್ತರ ಪದವಿ ಪಾಸ್ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಭಾರತೀಯ ಆಹಾರ ನಿಗಮ |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 113 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಹುದ್ದೆಗಳ ವಿವರ |
ಎಫ್‌ಸಿಐ’ನ ಮ್ಯಾನೇಜರ್ ಶ್ರೇಣಿಯ ಹುದ್ದೆಗಳನ್ನು ಜನರಲ್ / ಡಿಪೊಟ್ / ಮೊಮೆಂಟ್ / ಅಕೌಂಟೆಂಟ್ಸ್ / ಟೆಕ್ನಿಕಲ್ / ಸಿವಿಲ್ / ಎಂಜಿನಿಯರಿಂಗ್ / ಇಲೆಕ್ಟ್ರಿಕಲ್, ಮೆಕ್ಯಾನಿಕಲ್ / ಇಂಜಿನಿಯರಿಂಗ್ / ಹಿಂದಿ ವಿಭಾಗಗಳಲ್ಲಿ ನೇಮಕ ಮಾಡಲಿದೆ. |
ಮ್ಯಾನೇಜರ್ (ಜೆನೆರಲ್) : 1 ಮ್ಯಾನೇಜರ್ (ಡಿಪೊಟ್) : 4 ಮ್ಯಾನೇಜರ್ (ಮೊಮೆಂಟ್) : 5 ಮ್ಯಾನೇಜರ್ (ಅಕೌಂಟ್ಸ್) : 14 ಮ್ಯಾನೇಜರ್ (ಟೆಕ್ನಿಕಲ್) : 9 ಮ್ಯಾನೇಜರ್ (ಸಿವಿಲ್ ಎಂಜಿನಿಯರಿಂಗ್) : 3 ಮ್ಯಾನೇಜರ್ (ಹಿಂದಿ) : 1 ಮ್ಯಾನೇಜರ್ (ಮೆಕ್ಯಾನಿಕಲ್ / ಇಲೆಕ್ಟ್ರಿಕಲ್) : 1 |
ವಿದ್ಯಾರ್ಹತೆ:
ಮ್ಯಾನೇಜರ್ (ಜನರಲ್ / ಡಿಪೋ / ಮೊಮೆಂಟ್) ಹುದ್ದೆಗಳಿಗೆ ಅಂಗೀಕೃತ ವಿಶ್ವ ವಿದ್ಯಾಲಯಗಳಲ್ಲಿ ಶೇ.60 ಅಂಕಗಳೊಂದಿಗೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ತೇರ್ಗಡೆ ಹೊಂದಿರಬೇಕು. ಅಥವಾ ಸಿಎ / ಐಸಿ ಡಬ್ಲ್ಯೂ ಎ /ಸಿಎಸ್ ವಿದ್ಯಾರ್ಹತೆ ಪಡೆದಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಪದವಿಯಲ್ಲಿ ಶೇ.55 ಅಂಕಗಳಿಸಿದ್ದರೂ ಅರ್ಜಿಸಲ್ಲಿಸಬಹುದು.
– ಮ್ಯಾನೇಜರ್ (ಅಕೌಂಟ್ಸ್) ಹುದ್ದೆಗೆ ಎಂಬಿಎ ಸ್ನಾತಕೋತ್ತರ ಪದವಿ ಅಥವಾ ICAI ನಲ್ಲಿ ಅಸೋಸಿಯೇಟ್ ಮೆಂಬರ್‌ಶಿಪ್ ಪಡೆದಿರಬೇಕು. ಅಥವಾ ಬಿಕಾಂ ಪದವಿಯನ್ನು ಅಂಗೀಕೃತ ವಿವಿಯಿಂದ ಪಡೆದಿರಬೇಕು.
– ಮ್ಯಾನೇಜರ್ (ಟೆಕ್ನಿಕಲ್) ಹುದ್ದೆಗಳಿಗೆ ಬಿಎಸ್ಸಿ ಪದವಿಯನ್ನು ಕೃಷಿ ವಿಷಯದಲ್ಲಿ ಪಾಸ್ ಮಾಡಿರಬೇಕು. ಅಥವಾ ಬಿಟೆಕ್, ಬಿಇ ಪದವಿಯನ್ನು ಫುಡ್ ಸೈನ್ಸ್ ವಿಷಯದಲ್ಲಿ ಪಡೆದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಕೆಗೆ ಗರಿಷ್ಠ 28 ವರ್ಷ ಮೀರಿರಬಾರದು. ಹಿಂದಿ ಭಾಷಾ ಮ್ಯಾನೇಜರ್ ಹುದ್ದೆಗೆ ಗರಿಷ್ಠ 35 ವರ್ಷ ಮೀರಿರಬಾರದು.
ವೇತನಶ್ರೇಣಿ:
ಎಫ್‌ಸಿಐ’ನ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದವರನ್ನು ಮ್ಯಾನೇಜ್ಮೆಂಟ್ ಟ್ರೈನಿ ಆಗಿ ನೇಮಕ ಮಾಡಲಿದ್ದು 6 ತಿಂಗಳ ತರಬೇತಿ ಪಡೆಯಬೇಕಿರುತ್ತದೆ. ಈ ಅವಧಿಯಲ್ಲಿ ಸ್ಟೈಫಂಡ್ ಆಗಿ ಅಭ್ಯರ್ಥಿಗಳಿಗೆ ಮಾಸಿಕ ರೂ.40,000 ನೀಡಲಾಗುತ್ತದೆ. ನಂತರ ವೇತನ ಶ್ರೇಣಿ ಬದಲಾವಣೆ ಆಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.800.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬೇಕು.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 27-08-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 26-09-2022 ರ ಸಂಜೆ 04 ಗಂಟೆವರೆಗೆ. |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |