ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕರ್ನಾಟಕ ಅರಣ್ಯ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಗೆ ಇಲಾಖೆಯು ಹಸಿರು ನಿಶಾನೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವಿವಿಧ ಹುದ್ದೆಗಳ ನೇಮಕಾತಿಗೆ ರಾಜ್ಯ ಆರ್ಥಿಕ ಇಲಾಖೆಯು ಹಸಿರು ನಿಶಾನೆ ತೋರಿದೆ.

ಅರಣ್ಯ ಅಭಿವೃದ್ಧಿ ನಿಗಮದಿಂದ 2016ರಲ್ಲಿ ಅಧಿಸೂಚಿಸಲಾಗಿದ್ದ ನೆಡುತೋಪು ಅಧೀಕ್ಷಕರು, ಸಹಾಯಕ ನೆಡುತೋಪು ಅಧೀಕ್ಷಕರು ಹಾಗೂ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಆರ್ಥಿಕ ಇಲಾಖೆ ಅಧಿಕೃತವಾಗಿ ತಿಳಿಸಿದೆ.

ಈ ಹುದ್ದೆಗಳಿಗೆ 2016ನೇ ಸಾಲಿನಲ್ಲಿ ಪದವಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 10,000 ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. 2 ವರ್ಷಗಳ ನಂತರ ಅಂದರೆ 2018 ರಲ್ಲಿ ತಿದ್ದಪಡಿಯೊಂದಿಗೆ ಹುದ್ದೆಗಳ ಸಂಖ್ಯೆ ಇಳಿಕೆ ಮಾಡಲಾಗಿತ್ತು. ಮೆರಿಟ್ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷೆಗೆ ಪಟ್ಟಿ ಕೂಡ ಸಿದ್ಧಪಡಿಸಿ ಬಿಡುಗಡೆ ಮಾಡಿತ್ತು.

ಸದರಿ ಹುದ್ದೆಗಳಿಗೆ ಮುಂದಿನ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳುವ ಹಂತದಲ್ಲಿ ಕೋವಿಡ್-19 ಹಿನ್ನೆಲೆ ಆರ್ಥಿಕ ಇಲಾಖೆಯು ಎಲ್ಲಾ ನೇಮಕಾತಿ ಪ್ರಕ್ರಿಯೆಗಳಿಗೆ ಬ್ರೇಕ್‌ ಹಾಕಿತ್ತು. ಆದರೆ ಇದೀಗ ಆರ್ಥಿಕ ಇಲಾಖೆಯೇ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರೆಸಲು ಅರಣ್ಯ ಅಭಿವೃದ್ಧಿ ನಿಗಮಕ್ಕೆ ಹಸಿರು ನಿಶಾನೆ ತೋರಿದೆ.

30 ವರ್ಷ ಮೇಲ್ಪಟ್ಟವರಿಗೆ ಸಂಕಷ್ಟ

ಅರಣ್ಯ ಅಭಿವೃದ್ಧಿ ನಿಗಮದ ನೆಡುತೋಪು ಅಧೀಕ್ಷಕರು, ಸಹಾಯಕ ನೆಡುತೋಪು ಅಧೀಕ್ಷಕರು ಹಾಗೂ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ ಈಗಾಗಲೇ 5 ವರ್ಷದ ಹತ್ತಿರ ಅವಧಿ ಆಗಿದೆ. ಆಗ ವಯಸ್ಸಿನ ಅರ್ಹತೆ ಇದ್ದ ಅಭ್ಯರ್ಥಿಗಳಿಗೆ ಈಗ 30 ವರ್ಷ ಆದ ಕಾರಣ ಈ ಅಭ್ಯರ್ಥಿಗಳು ನೇಮಕಾತಿ ಅರ್ಹತೆ ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

close button