WhatsApp Telegram Group

‘ಗರ್ಭಿಣಿ ಮಹಿಳೆಯರಿಗೆ ‘ಮಾತೃ ವಂದನಾ’ ಯೋಜನೆಯಡಿಯಲ್ಲಿ ʼ5000 ರೂಪಾಯಿʼ ನಗದು ಸಹಾಯಧನ

ದೇಶಾದ್ಯಂತ ಮಹಿಳೆಯರು ಮತ್ತು ನವಜಾತ ಶಿಶುಗಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಅದ್ರಂತೆ, ಗರ್ಭಿಣಿಯರು ಮತ್ತು ನವಜಾತ ಮಕ್ಕಳ ಬೆಳವಣಿಗೆಯನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಮತ್ತೊಂದು ಯೋಜನೆಯೊಂದನ್ನ ಸಿದ್ಧಪಡಿಸಿದ್ದು, ಅದ್ರ ಹೆಸ್ರು ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆ ಅಂತಾ. ಈ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಹಿಳೆಯರಿಗೆ 5,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ.

ಈ ಯೋಜನೆಯ ಉದ್ದೇಶ..!
ಈ ಯೋಜನೆಯ ಪ್ರಯೋಜನವನ್ನ ದೈನಂದಿನ ವೇತನ ಪ್ರಮಾಣದಲ್ಲಿ ಕೆಲಸ ಮಾಡುವ ಅಥವಾ ಆರ್ಥಿಕ ಸ್ಥಿತಿಯಲಲಿ ದುರ್ಬಲರಾಗಿರುವ ಮಹಿಳೆಯರಿಗೆ ನೀಡಲಾಗುತ್ತೆ. ಗರ್ಭಾವಸ್ಥೆಯಲ್ಲಿ ವೇತನದ ನಷ್ಟವನ್ನ ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

2018ರ ನವೆಂಬರ್‌ 1ರಿಂದ ಯೋಜನೆ ಜಾರಿಯಾಗಿದೆ. ಯೋಜನೆ ಅನ್ವಯ ಒಟ್ಟು 3 ಕಂತುಗಳಲ್ಲಿ ಗರ್ಭಿಣಿಯರಿಗೆ ಒಟ್ಟು 5,000 ರೂ. ನೀಡಲಾಗುತ್ತದೆ. ಗರ್ಭಿಣಿಯಾದ 150 ದಿನಗಳ ಬಳಿಕ ಯೋಜನೆಯಡಿ 1,000 ರೂ ಮತ್ತು 2ನೇ ಹಂತದಲ್ಲಿ ನಿರಂತರ ತಪಾಸಣೆ ಮತ್ತು ಅಗತ್ಯ ಚುಚ್ಚುಮದ್ದುಗಳನ್ನು ಪಡೆಯಲು 2,000 ರೂ., ಮಗುವಿನ ಜನನದ ಬಳಿಕ ಮಗುವಿಗೆ ಮೊದಲ ಚುಚ್ಚುಮದ್ದು ಹಾಕಿದ ದಾಖಲೆ ಒದಗಿಸಿದರೆ 2,000 ರೂ.ಗಳನ್ನು ಮಗು ಮತ್ತು ತಾಯಿಯ ನಿರ್ವಹಣೆಗೆ ನೀಡಲಾಗುತ್ತದೆ.

In Article ad


ಈ ಆರ್ಥಿಕ ಸಹಾಯದಿಂದ, ಗರ್ಭಿಣಿಯರು ವಿಶ್ರಾಂತಿ ಪಡೆಯಲು ಸಮಯವನ್ನ ಪಡೆಯುತ್ತಾರೆ. ಈ ಯೋಜನೆಯ ಪ್ರಯೋಜನವು ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕೆಲಸಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರಿಗೆ ಲಭ್ಯವಿಲ್ಲ. ಯೋಜನೆಯಡಿ ಸೌಲಭ್ಯ ಪಡೆಯಲು ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾಗಬೇಕು. ಮೊದಲನೆ ಬಾರಿ ಗರ್ಭಿಣಿಯಾದವರು ಮಾತೃ ವಂದನ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಎಪಿಎಲ್‌ ಕಾರ್ಡುದಾರರೂ ಅರ್ಜಿ ಸಲ್ಲಿಸಬಹುದು. ಮೂರೂ ಹಂತಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಗರ್ಭ ಧರಿಸಿದ ಮೂರು ತಿಂಗಳೊಳಗೆ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ನೀಡಬೇಕು. ಅರ್ಜಿಯನ್ನು ನವೀಕರಿಸಿದ ಆಧಾರ್‌ ಕಾರ್ಡ್‌, ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ತಾಯಿ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ (ಆಧಾರ್‌ ಜೋಡಿಸಿದ ಖಾತೆ) ಸಂಖ್ಯೆಯ ಪ್ರತಿ ಕೊಡಬೇಕು.

ಹೊಸ ಉದ್ಯೋಗಾವಕಾಶ 2021

In Article ad

ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳು 

ತುಮಕೂರು ‌ನ್ಯಾಯಾಂಗ ಇಲಾಖೆಯಲ್ಲಿನ ವಿವಿಧ ಹುದ್ದೆಗಳಾದ ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ, ಜಾರಿ ಪೇದೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತವಾಗಿತ್ತು, ಸದ್ಯ ಈಗ ಪುನಃ ನೇಮಕಾತಿ ಆರಂಭಿಸಲಾಗಿದೆ.
ಸದರಿ ಹುದ್ದೆಗಳಿಗೆ ಈಗಾಗಲೇ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ, ಶುಲ್ಕವನ್ನು ಪಾವತಿ ಮಾಡುವ ಅಗತ್ಯವಿಲ್ಲ. ಮೊದಲು ಸಲ್ಲಿಸಿರುವ ಅರ್ಜಿ, ಶುಲ್ಕವನ್ನೇ ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.ಸದರಿ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಇದೇ ಮಾರ್ಚ್ 24, 2021 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ

1) ಬೆರಳಚ್ಚುಗಾರ 7

In Article ad

2) ಬೆರಳಚ್ಚು ನಕಲುಗಾರ 3

3) ಜಾರಿಕಾರ 11

ವಿದ್ಯಾರ್ಹತೆ
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಜೊತೆಗೆ ಕನ್ನಡ ಮತ್ತು ಆಂಗ್ಲ ಭಾಷೆ ಪ್ರೌಢ ದರ್ಜೆಯ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

In Article ad

ಜಾರಿಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿ ಮಾಡಿರಬೇಕು. ಜೊತೆಹೆ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.


ವಯೋಮಿತಿ
ಸರಕಾರದ ನಿಯಮಾನುಸಾರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 35 ವರ್ಷ ದಾಟಿರಬಾರದು. ಸದರಿ ಹುದ್ದೆಗಳಿಗೆ ನಿಯಮಾನುಸಾರ ಜಾತಿವಾರು ಮೀಸಲಾತಿ ಅನ್ವಯವಾಗುತ್ತದೆ.

ಅರ್ಜಿ ಶುಲ್ಕ
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 200 ರೂ., ಹಾಗೂ ಪ.ಜಾತಿ/ ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ. 100 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

In Article ad

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 23-02-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-03-2021
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಲು ಕೊನೆಯ ದಿನ 18-04-2021
ಚಲನ್ ಮೂಲಕ ಪಾವತಿಸಲು ಕೊನೆಯ ದಿನ 21-04-2021

ಅಧಿಸೂಚನೆ 

ಜಿಲ್ಲಾವಾರು ಉದ್ಯೋಗ ಮಾಹಿತಿ

close button