ಆರಗ ಜ್ಞಾನೇಂದ್ರ ನೂತನ ಗೃಹ ಸಚಿವರಾದ ಬೆನ್ನಲೆ ವಾಹನ ಸವಾರರಿಗೆ ಸಂತಸದ ಸುದ್ದಿಯೊಂದನ್ನುನೀಡಿದ್ದು ವಾಹನ ಸವಾರರು ಇನ್ನು ಮುಂದೆ ಸ್ಪಾಟ್ ಫೈನ್ ಕಟ್ಟುವ ಅವಶ್ಯಕತೆ ಇಲ್ಲಎಂದು ಸ್ಪಷ್ಟ ಪಡಿಸಿದ್ದಾರೆ ಅಂದರೆ ರಸ್ತೆ ಬದಿ ನಿಂತು ಯಾವುದೇ ಫೈನ್ ಕಟ್ಟುವಹಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸ್ಥಳದಲ್ಲೇ ದಂಡ ಪಾವತಿಯನ್ನು ರದ್ದು ಗೊಳಿಸುವಂತೆ ಅವರು ಆದೇಶಿಸಿದ್ದಾರೆ. ಜೊತೆಗೆ ಟ್ರಾಫಿಕ್ ಪೊಲೀಸರು ಬಳಸುತ್ತಿರುವ ಪಿಡಿಎ ದಂಡ ಪಾವತಿಯ ಯಂತ್ರವನ್ನು ಆಯಾ ಠಾಣೆಗೆ ಹಿಂದಿರುಗಿಸುವಂತೆ ಅವರು ತಿಳಿಸಿದ್ದಾರೆ.
ಒಂದೆಡೆ ಪೆಟ್ರೋಲ್ ಡಿಸೈಲ್ ದರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂತಹ ಕಾನೂನು ಜಾರಿಗೊಳಿಸಿದ್ದು ಸಾರ್ವಜನಿಕರಿಗೆ ಸಂತಸವಾಗಿದೆ.
ದಿನಕ್ಕೆ ನೂರು ರೂಪಾಯಿ ದುಡಿಯುವ ಜನರು ಪೊಲೀಸರಿಗೆ ಆಹಾರವಾಗುತ್ತಿದ್ದಾರೆ, ಕೋರೋಣ ಸಂದರ್ಭದಲ್ಲಿ ತತ್ತರಿಸಿ ಹೋದ ಜನ ಸಾಮಾನ್ಯ ಈಗಲಾದರೂ ಪೊಲೀಸರಿಂದ ಆಗುವ ತೊಂದರೆಗಳಿಂದ ಮುಕ್ತಿ ಸಿಗುವ ಕಾಲ ಇನ್ನೇನು ದೂರದಲ್ಲಿಲ್ಲ!