ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (Hescom – ಹೆಸ್ಕಾಂ) ನೇಮಕಾತಿ ಅಧಿಸೂಚನೆ 2021

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವ್ಯಾಪ್ತಿಯಲ್ಲಿ ಬರುವ ಶಿರಸಿ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಮತ್ತು ಹಾವೇರಿ ವೃತ್ತದ ವ್ಯಾಪ್ತಿಗಳಲ್ಲಿ ಖಾಲಿ ಇರುವ ಗ್ರಾಮ ವಿದ್ಯುತ್ ಪ್ರತಿನಿಧಿ (ಜಿವಿಪಿ ಮೈಕ್ರೋ ಫೀಲ್ಡರ್ ಫ್ರಾಂಚೈಸಿ) ಹುದ್ದೆಗಳನ್ನು ಕಾರ್ಯನಿರ್ವಹಣೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅಧಿಸೂಚನೆಗಳನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಉದ್ಯೋಗ ಸ್ಥಳ: ಶಿರಸಿ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಮತ್ತು ಹಾವೇರಿ

ವಿದ್ಯಾರ್ಹತೆ:
ಗ್ರಾಮ ವಿದ್ಯುತ್ ಪ್ರತಿನಿಧಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷ ವಯೋಮಿತಿ ಯೊಳಗಿನವರಾಗಿರಬೇಕು.

ಮಾಸಿಕ ವೇತನ:
ಗ್ರಾಮ ವಿದ್ಯುತ್ ಪ್ರತಿನಿಧಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ನಿಗದಿಪಡಿಸಿದ ಶೇಕಡಾ 100 ರಷ್ಟು ಬಿಲ್ ವಿತರಣೆ ಮಾಡಿ, ಮಾಸಿಕ ಮೂಲ ಗುರಿಯನ್ನು ಸಾಧಿಸಿದ ₹ 12000 ‘ಕನಿಷ್ಠ ಪ್ರೋತ್ಸಾಹ ಧನ’ ವನ್ನು ವೇತನವಾಗಿ ಪಡೆಯಲಿದ್ದಾರೆ.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ರೂ 250 ಮೊತ್ತದ ಅರ್ಜಿ ಶುಲ್ಕವನ್ನು (ಡಿಡಿ) ಪಾವತಿಸಬೇಕು

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆಯಲ್ಲಿ ಪಡೆದಿರುವ ಗರಿಷ್ಠ ಅಂಕಗಳ ಅನ್ವಯ ಮೆರಿಟ್ ಆಧಾರದ ಮೇಲೆ 1:2 ರಂತೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 16 2021

Website 

Official Notification & Application Form – Sirsi Circle: Click Here

Official Notification & Application Form – Hubli Circle: Click Here

Official Notification & Application Form – Belagavi Circle: Click Here

Official Notification & Application Form – Chikodi Circle: Click Here

Official Notification & Application Form – Vijayapura Circle: Click Here

Official Notification & Application Form – Bagalkot Circle: Click Here

Official Notification & Application Form – Haveri Circle: Click Here

 

error: Content is protected !!