ಭಾರತೀಯ ಅಂಚೆ ಇಲಾಖೆಯು ಎಲ್ಲ ರಾಜ್ಯಗಳ ಅಂಚೆ ವೃತ್ತಗಳಲ್ಲಿ ಖಾಲಿ ಇರುವ ಒಟ್ಟು 38926 ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಗ್ರಾಮೀಣ ಡಾಕ್ ಸೇವಕರು ಹುದ್ದೆಗಳ ನೇಮಕಕ್ಕೆ ಅಧಿಸೂಚನೆ
India Post Recruitment 2022: ಭಾರತೀಯ ಅಂಚೆ ಇಲಾಖೆಯು ಎಲ್ಲ ರಾಜ್ಯಗಳ ಅಂಚೆ ವೃತ್ತಗಳಲ್ಲಿ ಖಾಲಿ ಇರುವ ಒಟ್ಟು 38926 ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಮತ್ತು ಗ್ರಾಮೀಣ ಡಾಕ್ ಸೇವಕರು (GDS) ಹುದ್ದೆಗಳ ನೇಮಕಕ್ಕೆ ಇದೀಗ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,
ಇಲಾಖೆ ಹೆಸರು: | ಭಾರತೀಯ ಅಂಚೆ ಇಲಾಖೆ |
ಹುದ್ದೆಗಳ ಹೆಸರು: | ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಗ್ರಾಮೀಣ ಡಾಕ್ ಸೇವಕರು |
ಒಟ್ಟು ಹುದ್ದೆಗಳು | 38926 (ಕರ್ನಾಟಕಕ್ಕೆ 2410 ಹುದ್ದೆಗಳು) |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ವಿದ್ಯಾರ್ಹತೆ:
ಭಾರತೀಯ ಅಂಚೆ ಇಲಾಖೆಯ ನೇಮಕಾತಿಯ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು, ಜೊತೆಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಯ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು ಹಾಗೂ ಮೀಸಲಾತಿ ಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಿರಿ
ವೇತನಶ್ರೇಣಿ:
ಭಾರತೀಯ ಅಂಚೆ ಇಲಾಖೆಯ ನೇಮಕಾತಿಯ ಅಧಿಸೂಚನೆಯ ಪ್ರಕಾರ
* ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,000/-
* ಡಾಕ್ ಸೇವಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.10,000/-
ಅರ್ಜಿ ಶುಲ್ಕ:
ಭಾರತೀಯ ಅಂಚೆ ಇಲಾಖೆಯ ನೇಮಕಾತಿಯ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ₹100 ರೂ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕಾಗಿರುತ್ತದೆ.
ಆಯ್ಕೆ ವಿಧಾನ
ಭಾರತೀಯ ಅಂಚೆ ಇಲಾಖೆಯ ನೇಮಕಾತಿಯ ಅಧಿಸೂಚನೆಯ ಪ್ರಕಾರ ಮೆರಿಟ್ ಪಟ್ಟಿ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 02-05-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 05-06-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |