ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಕುರಿತಾಗಿ ಸಂಪೂರ್ಣ ವಿವರ ಈ ಕೆಳಗಿನಂತಿದೆ. ಅರ್ಹ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅಧಿಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ,
KMF VIMUL Recruitment 2021 – Apply Online for 39 Manager, Assistant Posts
1) ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) –
03 ಹುದ್ದೆಗಳು
ವಿದ್ಯಾರ್ಹತೆ: ಬಿ.ವಿ.ಎಸ್ಸಿ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಕಹಾಮ ಮತ್ತು ಇದರ ಹಾಲು ಒಕ್ಕೂಟಗಳಲ್ಲಿ ಪಶು ವೈದ್ಯಕೀಯ ಸಮಾಲೋಚಕರಾಗಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.
2) ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್) –
02 ಹುದ್ದೆಗಳು
ವಿದ್ಯಾರ್ಹತೆ: ಬಿ.ಎಸ್ಸಿ (ಕೃಷಿ) ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಕಹಾಮ ಮತ್ತು ಇದರ ಹಾಲು ಒಕ್ಕೂಟಗಳಲ್ಲಿ ಕನಿಷ್ಠ 4 ವರ್ಷ ಸಮಾಲೋಚಕರಾಗಿ ಸೇವೆ ಸಲ್ಲಿಸಿದವರಾಗಿರಬೇಕು.
3) ಸಿಸ್ಟಂ ಅಧಿಕಾರಿ –
01 ಹುದ್ದೆ
ವಿದ್ಯಾರ್ಹತೆ: ಬಿ.ಇ (Information Science) ಪದವಿ ಅರ್ಹತೆ ಹೊಂದಿರಬೇಕು. ಕಹಾಮ ಮತ್ತು ಇದರ ಹಾಲು ಒಕ್ಕೂಟಗಳಲ್ಲಿ ಪಶು ಕನಿಷ್ಠ 3 ವರ್ಷ ಮಾಹಿತಿ ನಿರ್ವಹಣೆ ವ್ಯವಸ್ಥೆ ವಿಭಾಗದಲ್ಲಿ ಸೇವೆ ಸಲ್ಲಿಸಿರಬೇಕು.
4) ತಾಂತ್ರಿಕ ಅಧಿಕಾರಿ (ಡಿ.ಟಿ) –
01 ಹುದ್ದೆ
ವಿದ್ಯಾರ್ಹತೆ: ಬಿ.ಎಸ್ಸಿ (ಡಿ.ಟಿ)/ ಬಿ.ಟೆಕ್ (ಡಿ.ಟೆಕ್)/ಬಿ.ಟೆಕ್ (ಪುಡ್ ಟೆಕ್ನಾಲಜಿ) ಪದವಿ ಅರ್ಹತೆ ಹೊಂದಿರಬೇಕು.
5) ತಾಂತ್ರಿಕ ಅಧಿಕಾರಿ (ಅಭಿಯಂತರ) –
01 ಹುದ್ದೆ
ವಿದ್ಯಾರ್ಹತೆ: ಬಿಇ (ಮೆಕಾನಿಕಲ್) ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
6) ಮಾರುಕಟ್ಟೆ ಅಧೀಕ್ಷಕರು –
01 ಹುದ್ದೆ
ವಿದ್ಯಾರ್ಹತೆ: ಬಿ.ಬಿ.ಎ/ ಬಿ.ಬಿ.ಎಮ್/ ಬಿ.ಕಾಂ/ ಬಿ.ಎಸ್ಸಿ (ಅಗ್ರಿಕಲ್ಚರ್ ಮಾರ್ಕೆಟಿಂಗ್ & ಕೋಆಪರೇಶನ್) ಪದವಿ ಜೊತೆಗೆ ಎಂ.ಬಿ.ಎ (ಮಾರ್ಕೆಟಿಂಗ್) ಸ್ನಾತಕೋತ್ತರ ಪದವಿ ಪಡೆದಿರಬೇಕು.
7) ವಿಸ್ತರಣಾಧಿಕಾರಿ ದರ್ಜೆ 3 –
08 ಹುದ್ದೆಗಳು
ವಿದ್ಯಾರ್ಹತೆ: ಬಿ.ಕಾಂ./ ಬಿ.ಎಸ್ಸಿ/ ಬಿ.ಬಿ.ಎ/ ಬಿ.ಬಿ.ಎಂ/ ಬಿ.ಎ/ ಬಿ.ಎಸ್ಸಿ (ಕೃಷಿ) ಪದವಿಯಲ್ಲಿ ಕನಿಷ್ಠ ಶೇ. 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
8) ಕೆಮಿಸ್ಟ್ ದರ್ಜೆ 2 –
2 ಹುದ್ದೆಗಳು
ವಿದ್ಯಾರ್ಹತೆ: ಕೆಮೆಸ್ಟ್ರಿ ಅಥವಾ ಮೈಕ್ರೋಬೈಯಾಲಾಜಿಯನ್ನು ಒಂದು ಐಚ್ಛಿಕ ವಿಷಯವಾಗಿ ಬಿ.ಎಸ್ಸಿ ಪದವಿಯನ್ನು ಹೊಂದಿರಬೇಕು.
9) ಮಾರುಕಟ್ಟೆ ಸಹಾಯಕರು ದರ್ಜೆ 2 –
02 ಹುದ್ದೆಗಳು
ವಿದ್ಯಾರ್ಹತೆ: ಬಿ.ಕಾಂ/ ಬಿ.ಬಿ.ಎ ಪದವಿ ಜೊತೆಗೆ ಟ್ಯಾಲಿ ಪ್ರಮಾಣ ಪತ್ರ ಮತ್ತು ಎಂಎಸ್ ಆಫೀಸ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು.
10) ಆಡಳಿತ ಸಹಾಯಕ ದರ್ಜೆ 2 –
01 ಹುದ್ದೆ
ವಿದ್ಯಾರ್ಹತೆ: ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
11) ಲೆಕ್ಕ ಸಹಾಯಕ ದರ್ಜೆ 2 –
04 ಹುದ್ದೆಗಳು
ವಿದ್ಯಾರ್ಹತೆ: ಬಿ.ಕಾಂ ಪದವಿ ಜೊತೆಗೆ ಟ್ಯಾಲಿ ಪ್ರಮಾಣ ಪತ್ರ ಮತ್ತು ಎಂಎಸ್ ಆಫೀಸ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು.
12) ಕಿರಿಯ ಸಿಸ್ಟಂ ಆಫರೇಟರ್ –
02 ಹುದ್ದೆಗಳು
ವಿದ್ಯಾರ್ಹತೆ: ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್) ಅಥವಾ ಬಿಸಿಎ ಪದವಿ ಪಡೆದಿರಬೇಕು
13) ಕಿರಿಯ ತಾಂತ್ರಿಕ (ಬಾಯ್ಲರ್ ಅಟೆಂಡೆಂಟ್) –
02 ಹುದ್ದೆಗಳು
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು.
14) ಕಿರಿಯ ತಾಂತ್ರಿಕ (ಎಲೆಕ್ಟ್ರಿಷಿಯನ್) –
03 ಹುದ್ದೆಗಳು
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ಇಲೆಕ್ಟ್ರಿಕಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
15) ಕಿರಿಯ ತಾಂತ್ರಿಕ (ರೆಪ್ರೀಜಿರೇಷನ್) –
01 ಹುದ್ದೆ
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ರೆಪ್ರೀಜಿರೇಷನ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
16) ಕಿರಿಯ ತಾಂತ್ರಿಕ (ಫಿಟ್ಟರ್) –
01 ಹುದ್ದೆ
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ಫಿಟ್ಟರ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
17) ಹಾಲು ರವಾನೆಗಾರರು –
04 ಹುದ್ದೆಗಳು
ವಿದ್ಯಾರ್ಹತೆ: ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
ಉದ್ಯೋಗ ಸ್ಥಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಜಯಪುರ ದಲ್ಲಿ ಕಾರ್ಯ ನಿರ್ವಹಿಸಬೇಕು.
ವೇತನ ಶ್ರೇಣಿ :
ತಿಂಗಳು ರೂ. 21,400 ರಿಂದ ರೂ. 97,100ವರೆಗೂ ವೇತನ ನೀಡಲಾಗುತ್ತದೆ.
ವಯಸ್ಸಿನ ಮಿತಿ: ಕನಿಷ್ಠ 18 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಹಾಗೂ
ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
ಆಯ್ಕೆ ಪ್ರಕ್ರಿಯೆ : ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ನಂತರ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಆಧಾರದ ಮೇಲೆ (ಮೆರಿಟ್) 1:5ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ : ಎಸ್ಸಿ, ಎಸ್ಟಿ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 500 ಹಾಗೂ ಇತರೆ ಅಭ್ಯರ್ಥಿಗಳು ರೂ. 1000 ಪಾವತಿಸಬೇಕು
ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ : ಡಿಸೆಂಬರ್ 18, 2021
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜನವರಿ 20, 2022
Website / Application Form |
Download Notification PDF |