ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ | KSP Recruitment 2022 | PSI

 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 70 ವಿಶೇಷ ಮೀಸಲು ಸಬ್-ಇನ್ಸ್‍ಪೆಕ್ಟರ್ ಹುದ್ದೆಗಳ ಭರ್ತಿಗೆ ಇಲಾಖೆಯಿಂದ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಒಟ್ಟು ಹುದ್ದೆಗಳು: 70
ಉದ್ಯೋಗ ಸ್ಥಳ: ಕರ್ನಾಟಕ

ವಿದ್ಯಾರ್ಹತೆ:
ಅಭ್ಯರ್ಥಿಗಳು ಕಾನೂನಿನ ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:
ಕನಿಷ್ಠ 21 ವರ್ಷ ವಯೋಮಿತಿ ಪೂರೈಸಿರಬೇಕು ಹಾಗೂ ಗರಿಷ್ಠ ಈ ಕೆಳಗಿನ ವಯೋಮಿತಿಯನ್ನು ಮೀರಿರಬಾರದು,
ಸಾಮಾನ್ಯವರ್ಗ 26 ವರ್ಷ
ಹಿಂದುಳಿದ ವರ್ಗ /ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 28 ವರ್ಷಗಳ ಗರಿಷ್ಠ ವಯೋಮಿತಿಗಳನ್ನು ಮೀರಿರಬಾರದು.

ಉದ್ಯೋಗ ಮಾಹಿತಿ: 2788 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ 

ವೇತನಶ್ರೇಣಿ:
ವೇತನ ಶ್ರೇಣಿ : 37900-950-39800-1100-46400-1250-53900-1450-65600-1650-70850

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ 500 ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ 250 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

 

 

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ : 20 ಡಿಸೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಜನವರಿ 2022
ಶುಲ್ಕ ಪಾವತಿಗೆ ಕೊನೆಯ ದಿನಾಂಕ : 20 ಜನವರಿ 2022

Website
Download Notification PDF

 

ಉದ್ಯೋಗ ಬಿಂದು ಕಳೆದ ಐದು ವರ್ಷಗಳಿಂದ ಸತತವಾಗಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾಹಿತಿ ನೀಡುತ್ತಾ ಬಂದಿದೆ, ನಿಮ್ಮೆಲ್ಲಾ ಪ್ರೀತಿ ಆಶೀರ್ವಾದದಿಂದ ಉದ್ಯೋಗ ಬಿಂದು ಸಾಕಷ್ಟು ಜನಪ್ರಿಯ ಕೂಡ ಆಗಿದೆ, ಉದ್ಯೋಗ ಬಿಂದು ಓದುಗರಿಗೆ ನಾವು ಒದಗಿಸುವ ಉದ್ಯೋಗ ಮಾಹಿತಿಯ ನಿಮಗೆ ಇಷ್ಟವಾದಲ್ಲಿ ತಾವು ನಮ್ಮನ್ನು ಯುಟ್ಯೂಬ್ ಚಾನೆಲ್ ನಲ್ಲಿ ಹಾಗು ಫೇಸ್ ಬುಕ್ ನಲ್ಲಿ ಮತ್ತು ಟೆಲಿಗ್ರಾಮ್ ಗ್ರೂಪ್ ನಲ್ಲಿ ಕೂಡ ಉದ್ಯೋಗ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಬಹುದು.

ದಿನನಿತ್ಯ ಹತ್ತು ಹಲವಾರು ಉದ್ಯೋಗ ಸುದ್ದಿ ನಿಮಗಾಗಿ ನಾವು ಹೊತ್ತು ತರುತ್ತವೆ. ಸಾಕಷ್ಟು ಜನಮನ್ನಣೆ ಪಡೆದಿರುವ ಉದ್ಯೋಗ ಬಿಂದು ಕರ್ನಾಟಕದ ಪ್ರತಿಯೊಂದು ಮನೆಯ ಉದ್ಯೋಗಾಕಾಂಕ್ಷಿಯ ಮನೆಮಾತಾಗಿರುವ ಸುಳ್ಳಲ್ಲ, ಹೀಗೆ ಎಲ್ಲರೂ ನಮ್ಮನ್ನು ಆಶೀರ್ವದಿಸಿ ಮತ್ತು ಪ್ರೋತ್ಸಾಹಿಸಿ ಮುನ್ನಡೆಸಬೇಕಾಗಿದೆ ಕೋರುತ್ತೇವೆ, ಇಂತಿ ನಿಮ್ಮ ನೆಚ್ಚಿನ ಉದ್ಯೋಗ ಬಿಂದು

error: Content is protected !!