ಕರ್ನಾಟಕ ಪೊಲೀಸ್ ನೇಮಕಾತಿ 2022 | KSP Recruitment 2022 apply offline for 16 Scientific Officer

ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆ ನೇಮಕಾತಿ 2022 

KSP Recruitment 2022: ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅಧಿಕೃತವಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಪೊಲೀಸ್ ಉದ್ಯೋಗಾಕಾಂಷಿಗಳಿಗೆ ಇದೊಂದು ಸುವರ್ಣಾವಕಾಶ, ಒಟ್ಟು 16 ಸೈಂಟಿಫಿಕ್ಆ ಫೀಸರ್(Scientific Officer) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು.ಅಭ್ಯರ್ಥಿಗಳು ಆಫ್​ಲೈನ್​(Offline) ಮೂಲಕ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಕೆ ಆರಂಭ ದಿನಾಂಕ 30/12/2021 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/01/2022 fslab21.ksponline.co.in ಗೆ ಭೇಟಿ ನೀಡಬಹುದು.

ಸಂಸ್ಥೆ: ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆ
ಹುದ್ದೆಯ ಹೆಸರು: ಸೈಂಟಿಫಿಕ್ ಆಫೀಸರ್
ಒಟ್ಟು ಹುದ್ದೆಗಳು: 16
ಉದ್ಯೋಗದ ಸ್ಥಳ: ಬೆಂಗಳೂರು

 

ಹುದ್ದೆಯ ಮಾಹಿತಿ:
ಫಿಜಿಕ್ಸ್​ ಸೆಕ್ಷನ್-2
ಡಿಎನ್​ಎ ಸೆಕ್ಷನ್​-4
ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್-2
ಮೊಬೈಲ್​ ಫಾರೆನ್ಸಿಕ್​ ಸೆಕ್ಷನ್-2
ಆಡಿಯೋ ಫಾರೆನ್ಸಿಕ್​ ಸೆಕ್ಷನ್​-2
ಟಾಕ್ಸಿಕೋಲಾಜಿ ಸೆಕ್ಷನ್​-2
ಬಯೋಲಾಜಿ ಸೆಕ್ಷನ್-2

ವಿದ್ಯಾರ್ಹತೆ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ ಹೊಂದಿರಬೇಕು
ಉದ್ಯೋಗ ಮಾಹಿತಿ: ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ 

  • ಶೇ. 55 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ/ಎಂ.ಟೆಕ್​ ಪೂರ್ಣಗೊಳಿಸಿರಬೇಕು. ಹುದ್ದೆಗನುಸಾರ ವಿದ್ಯಾರ್ಹತೆ ಕುರಿತಾದ ಮಾಹಿತಿ ಇಲ್ಲಿದೆ.
  • ಫಿಜಿಕ್ಸ್​ ಸೆಕ್ಷನ್- ಭೌತಶಾಸ್ತ್ರ/ಫಾರೆನ್ಸಿಕ್​ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಡಿಎನ್​ಎ ಸೆಕ್ಷನ್​- ಬಾಟನಿ/ಜೂಯಾಲಜಿ/ ಬಯೋ ಕೆಮಿಸ್ಟ್ರಿ/ ಮೈಕ್ರೋಬಯಾಲಜಿ/ ಲೈಫ್​ ಸೈನ್ಸಸ್​/ಫಾರೆನ್ಸಿಕ್​ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ
  • ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್, ಮೊಬೈಲ್​ ಫಾರೆನ್ಸಿಕ್​ ಸೆಕ್ಷನ್, ಆಡಿಯೋ ವಿಡಿಯೋ ಫಾರೆನ್ಸಿಕ್​ ಸೆಕ್ಷನ್​- ಕಂಪ್ಯೂಟರ್​ ಸೈನ್ಸ್​/ಎಲೆಕ್ಟ್ರಾನಿಕ್ಸ್​/ ಫಿಜಿಕ್ಸ್​/ ಫಾರೆನ್ಸಿಕ್​ ಸೈನ್ಸ್​​/ ಇನ್ಫರ್ಮೇಶನ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಕಂಪ್ಯೂಟರ್​ ಸೈನ್ಸ್​/ಎಲೆಕ್ಟ್ರಾನಿಕ್ಸ್/ಇನ್ಫರ್ಮೇಶನ್ ಸೈನ್ಸ್​​ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿರಬೇಕು.
  • ಟಾಕ್ಸಿಕೋಲಾಜಿ ಸೆಕ್ಷನ್​-ಕೆಮಿಸ್ಟ್ರಿ/ ಫಾರ್ಮಾಕಾಲಜಿ/ ಬಯೋ ಕೆಮಿಸ್ಟ್ರಿ/ ಫಾರೆನ್ಸಿಕ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ
  • ಬಯೋಲಾಜಿ ಸೆಕ್ಷನ್- ಬಾಟನಿ/ಜೂಯಾಲಜಿ/ಬಯೋ ಕೆಮಿಸ್ಟ್ರಿ/ ಲೈಫ್​​ ಸೈನ್ಸ್​/ಫಾರೆನ್ಸಿಕ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ

ಅನುಭವ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಂಶೋಧನಾ ಸಂಸ್ಥೆಯಲ್ಲಿ ರಿಸರ್ಚ್​ ಸ್ಕಾಲರ್​​ ಆಗಿ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಸಂಶೋಧನಾ ಅನುಭವವನ್ನು ಹೊಂದಿರಬೇಕು.

ವೇತನ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆಯ ಪ್ರಕಾರ ಮಾಸಿಕ ₹ 40,900/- ₹ 78,200/-

ಉದ್ಯೋಗ ಮಾಹಿತಿ: ಎಸೆಸೆಲ್ಸಿ ಪಾಸಾದವರಿಗೆ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳು

ವಯೋಮಿತಿ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು 28/01/2022 ಕ್ಕೆ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಎಸ್ಸಿ,ಎಸ್ಟಿ,ಪ್ರವರ್ಗ-೧ ಅಭ್ಯರ್ಥಿಗಳು: 05 ವರ್ಷಗಳ ವಯೋಮಿತಿ ಸಡಿಲಿಕೆ
ಒಬಿಸಿ (ಪ್ರವರ್ಗ 2ಎ, ಬಿB, 3ಎ, 3ಬಿ) ಅಭ್ಯರ್ಥಿಗಳಿಗೆ: 03 ವರ್ಷಗಳ ವಯೋಮಿತಿ ಸಡಿಲಿಕೆ

ಅರ್ಜಿ ಶುಲ್ಕ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ
ಎಸ್ಸಿ,ಎಸ್ಟಿ,ಪ್ರವರ್ಗ-೧ ಅಭ್ಯರ್ಥಿಗಳು: 100 ರೂ.
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು: 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪಾವತಿ ವಿಧಾನ- ಆನ್‌ಲೈನ್ ಅಥವಾ ನಗದು

ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ,

 

 

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/01/2022

OFFICIAL NOTIFICATION PDF
OFFICIAL WEBSITE
error: Content is protected !!